ನವದೆಹಲಿ:ಸದ್ಯದಲ್ಲೇ ಮೇಲಿಂದ ಮೇಲೆ ಮತ್ತಷ್ಟು ಹಬ್ಬಗಳು ಬರಲಿದ್ದು, ಜನರು ಅವುಗಳನ್ನು ಆಚರಿಸಲು ಉತ್ಸುಕರಾಗಿದ್ದಾರೆ. ಮತ್ತೊಂದೆಡೆ ಕರೊನಾ ಮೂರನೇ ಅಲೆಯ ಆತಂಕವೂ ಕಾಡುತ್ತಿದೆ. ಈ ನಡುವೆಯೇ ಎಚ್ಚರಿಕೆಯ ಸಂದೇಶವೊಂದು ಹೊರಬಿದ್ದಿದೆ. ಇನ್ನು ಮೂರು ತಿಂಗಳ ಕಾಲ, ಅದರಲ್ಲೂ ಇನ್ನೆರಡು ತಿಂಗಳಂತೂ ಸಾರ್ವಜನಿಕರು ಬಹಳ ಹುಷಾರಾಗಿರಬೇಕು ಎಂಬ ಎಚ್ಚರಿಕೆಯೊಂದು ಹೊರಬಿದ್ದಿದೆ.
ಕೇಂದ್ರ ನೀತಿ ಆಯೋಗ (ಆರೋಗ್ಯ) ಸದಸ್ಯ ಡಾ.ವಿ.ಕೆ. ಪೌಲ್​ ಅವರು ಇಂಥದ್ದೊಂದು ಎಚ್ಚರಿಕೆಯನ್ನು ಕಿವಿಮಾತಿನ ರೀತಿಯಲ್ಲಿ ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿ ಸಂದರ್ಭದಲ್ಲಿ ಕೋವಿಡ್​ ಪರಿಸ್ಥಿತಿ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತ ಅವರು ಈ ಮಾತನ್ನು ತಿಳಿಸಿದರು.
ಇದನ್ನೂ ಓದಿ:ನನ್ನ ಜೀವಕ್ಕೆ ಅಪಾಯವಾದರೆ ಶೇಖ್​ ಮೋದಿಯೇ ಕಾರಣ: ರಾಜು ತಾಳಿಕೋಟೆ ಆರೋಪ; ಹಾಸ್ಯನಟನ ಮೇಲಿನ ಹಲ್ಲೆ ಪ್ರಕರಣವೀಗ ಗಂಭೀರ!
ಬರುವ ಮೂರು ತಿಂಗಳಲ್ಲಿ ಕೋವಿಡ್ ಪರಿಸ್ಥಿತಿ ಉಲ್ಬಣಿಸಲು ಬಿಡುವಂತಿಲ್ಲ. ಏಕೆಂದರೆ ಮುಂದಿನ ಮೂರು ತಿಂಗಳಗಳು ಹಬ್ಬ ಹಾಗೂ ಫ್ಲ್ಯೂ ಸೀಸನ್. ಈ ತಿಂಗಳಲ್ಲಿ ಕರೊನಾ ಪ್ರಕರಣಗಳು ಹೆಚ್ಚುವ ಸಾಧ್ಯತೆಗಳು ಅಧಿಕವಾಗಿವೆ. ಹೀಗಾಗಿ ಜನರು ಈ ಮೂರು ತಿಂಗಳಲ್ಲಿ ಅದರಲ್ಲೂ ಅಕ್ಟೋಬರ್​-ನವೆಂಬರ್​ನಲ್ಲಿ ಬಹಳ ಹುಷಾರಾಗಿರಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಜತೆಗೆ ಹಬ್ಬವನ್ನು ಆದಷ್ಟೂ ಸರಳವಾಗಿ ಆಚರಿಸಬೇಕು ಎಂಬ ಕಿವಿಮಾತನ್ನೂ ಅವರು ಹೇಳಿದ್ದಾರೆ. (ಏಜೆನ್ಸೀಸ್)
ಪ್ರೀತಿಯ ಸೋಗಲ್ಲಿ ಮೋಸ: ಈತನಿಂದ ಮೋಸ ಹೋದವರೆಷ್ಟೋ?; ಮೊಬೈಲ್​ಫೋನಲ್ಲಿತ್ತು 6 ಯುವತಿಯರ ವಿಡಿಯೋ..
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − 1 =
Remember me
