ನವದೆಹಲಿ:ಅಪಘಾತ ಪ್ರಕರಣಗಳಲ್ಲಿ ಮೊಸರಲ್ಲಿ ಕಲ್ಲು ಹುಡುಕುವಂತೆ ದೋಷಗಳನ್ನು ಕಾಣುತ್ತಾ ಹಾಗೂ ನಿಯಮಗಳಿಗಷ್ಟೆ ಜೋತು ಬಿದ್ದು ಸಂತ್ರಸ್ತರಿಗೆ ಕಡಿಮೆ ಪರಿಹಾರ ನೀಡುವ ಮೋಟರ್ ವಾಹನ ನ್ಯಾಯಮಂಡಳಿ (ಟ್ರಿಬ್ಯುನಲ್) ಮತ್ತು ಹೈಕೋರ್ಟ್​ಗಳ ಪ್ರವೃತ್ತಿಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅವಘಡಗಳಿಂದ ಅಂಗವಿಕಲರಾದ ಸಂತ್ರಸ್ತರಿಗೆ ಪರಿಹಾರಕ್ಕೆ ಸೂಚಿಸುವಾಗ ಉದಾರವಾಗಿ ಇರಬೇಕು ಎಂದು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಎಸ್. ರವೀಂದ್ರ ಭಟ್ ಇದ್ದ ಪೀಠ ಸೂಚಿಸಿದೆ.
ಅಪಘಾತ ಸಂತ್ರಸ್ತರು ಹಾಗೂ ಅವರ ಕುಟುಂಬಗಳಿಗೆ ಆರ್ಥಿಕ ಪರಿಹಾರ ಒದಗಿಸುವಲ್ಲಿ ಏಕತಾನತೆಯ ಧೋರಣೆ ಅನುಸರಿಸಲಾಗುತ್ತಿರುವುದು ಸರಿಯಲ್ಲ. ಪರಿಹಾರ ನೀಡುವಲ್ಲಿ ಜೀವನದ ವಾಸ್ತವತೆಗಳನ್ನೂ ಪರಿಗಣನೆಗೆ ತೆಗೆದುಕೊಳ್ಳುವುದು ಅಗತ್ಯ ಎಂದು ನ್ಯಾಯಪೀಠ ಹೇಳಿದೆ.
ದೆಹಲಿಯ ಡೇಟಾ ಎಂಟ್ರಿ ನೌಕರನೊಬ್ಬ ಅಪಘಾತದಲ್ಲಿ ಒಂದು ಕೈ ಕಳೆದುಕೊಂಡ ಪ್ರಕರಣದ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ. -ಠಿ; 7.70 ಲಕ್ಷ ಪರಿಹಾರವನ್ನು -ಠಿ; 19.65 ಲಕ್ಷಕ್ಕೆ ಏರಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
