ಉತ್ತರಪ್ರದೇಶ:ನೋಯ್ಡಾ ಮತ್ತು ಗುರುಗ್ರಾಮ್‌ನಲ್ಲಿ ನಡೆದ ರೇವ್ ಪಾರ್ಟಿಗಳಲ್ಲಿ ಅಳಿವಿನಂಚಿನಲ್ಲಿರುವ ಹಾವುಗಳ ವಿಷವನ್ನು ಸರಬರಾಜು ಮಾಡುತ್ತಿದ್ದಾರೆ ಎಂಬ ಆರೋಪದಡಿ ಖ್ಯಾತ ಯೂಟ್ಯೂಬರ್​, ಬಿಗ್​ಬಾಸ್​ ಒಟಿಟಿ 2 ವಿಜೇತ ಎಲ್ವಿಶ್ ಯಾದವ್ ವಿರುದ್ಧ ಯುಪಿ ಪೊಲೀಸರು ಇಂದು ಎಫ್​ಐಆರ್​ ದಾಖಲಿಸಿದರು.
ಇದನ್ನೂ ಓದಿ:ಸ್ಯಾಂಡಲ್​ವುಡ್​​​ ನಟಿ ಮಿಲನಾ ನಾಗ್​​ರಾಜ್​​​​ ಸಿಂಪಲ್​​​​ ಲುಕ್​​ಗೆ ಫ್ಯಾನ್ಸ್​​​ ಫಿದಾ, ಚೂಡಿದಾರ್​​​​ನಲ್ಲಿ ಮುದ್ದಾಗಿ ಕಾಣಿಸಿಕೊಂಡ ನಟಿ
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದೆ ಮತ್ತು ಪೀಪಲ್ ಫಾರ್ ಅನಿಮಲ್ಸ್ (PFA) ಸಂಸ್ಥಾಪಕಿ ಮೇನಕಾ ಗಾಂಧಿ, “ಆತನನ್ನು ತಕ್ಷಣವೇ ಬಂಧಿಸಬೇಕು. ಇದು ಗ್ರೇಡ್-1 ಅಪರಾಧ, ಅಂದರೆ ಏಳು ವರ್ಷಗಳ ಜೈಲು ಶಿಕ್ಷೆ. ಪಿಎಫ್‌ಎ ಬಲೆ ಬೀಸಿ ಈ ಜನರನ್ನು ಹಿಡಿದಿದೆ. ಅವನ ವೀಡಿಯೊಗಳಲ್ಲಿ ಅಳಿವಿನಂಚಿನಲ್ಲಿರುವ ಹಾವುಗಳನ್ನು ಬಳಸಿರುವುದು ಕಂಡುಬಂದಿದೆ. ಈತ ನೋಯ್ಡಾ ಮತ್ತು ಗುರುಗ್ರಾಮ್‌ನಲ್ಲಿ ಹಾವಿನ ವಿಷವನ್ನು ಮಾರಾಟ ಮಾಡಿದ್ದಾನೆ ಎಂಬುದು ನಮಗೆ ತಿಳಿದುಬಂದಿದೆ” ಎಂದಿದ್ದರು. ಈ ಹೇಳಿಕೆಗೆ ಇದೀಗ ಎಲ್ವಿಶ್​ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಕಾವೇರಿ ಜಲವಿವಾದ; ತಮಿಳುನಾಡಿಗೆ ನವೆಂಬರ್ 23ರ ವರೆಗೂ 2.6 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಆದೇಶಿಸಿದ CWMA
ಮೇನಕಾ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಎಲ್ವಿಶ್​, “ಈ ಹಿಂದೆ ಅವರು ಇಸ್ಕಾನ್ ವಿರುದ್ಧ ಆರೋಪ ಮಾಡಿದಂತೆಯೇ ತಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಯುಪಿ ಪೊಲೀಸರು ಈ ಆರೋಪಗಳನ್ನು ಸರಿಯಾಗಿ ಸಾಬೀತುಪಡಿಸಿದರೆ, ನಾನು ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧನಿದ್ದೇನೆ” ಎಂದು ಹೇಳಿದ್ದಾರೆ.
Shocked To See Such People Sitting On Such Posts. Jis Hisab Se Ilzaam Lagaye Hai madam ne us hisab ki maafi bhi tayar rakhe🙏🏻https://t.co/jSpaQM0vQs
— Elvish Yadav (@ElvishYadav)November 3, 2023

“ಮೊದಲ ಇಸ್ಕಾನ್, ಈಗ ನಾನು?, ಕ್ಷಮೆಯಾಚಿಸಲು ಸಿದ್ಧರಾಗಿರಿ” ಎಂದು ಮೇನಕಾ ಗಾಂಧಿಗೆ ಎಲ್ವಿಶ್​ ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್).
ಬಿಗ್​ಬಾಸ್​ ವಿನ್ನರ್​ ವಿರುದ್ಧ ದಾಖಲಾಯ್ತು FIR!​; ತಕ್ಷಣವೇ ಬಂಧಿಸಬೇಕು ಎಂದ ಸಂಸದೆ ಮೇನಕಾ ಗಾಂಧಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 − 2 =
Remember me
