ಪನ್ನಾ:ಕರಡಿಗಳು ದಾಳಿ ನಡೆಸುವುದು ಸಾಮಾನ್ಯ ಸಂಗತಿಯಾಗಿದೆ. ಆಗ್ಗಾಗ್ಗೆ ಕಾಡು ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ನಡೆಸುವ ಘಟನೆಗಳನ್ನು ಕೇಳುತ್ತಿರುತ್ತೇವೆ. ಆದರೆ ಇಲ್ಲಿ ಕರಡಿ ದಾಳಿ ಮಾಡಿದ ಬಳಿಕ ಮಾಡಿರುವ ಕೆಲಸವನ್ನು ಕೇಳಿದರೆ ಎಂತಹವರೂ ಬೆಚ್ಚಿ ಬೀಳುತ್ತಾರೆ.
ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಇಂತಹ ಆಘಾತಕಾರಿ ಘಟನೆಯೊಂದು ನಡೆದುಹೋಗಿದೆ. ಗಂಡ-ಹೆಂಡತಿ ಮೇಲೆ ದಾಳಿ ನಡೆಸಿದ್ದ ಕರಡಿ, ಇಬ್ಬರನ್ನು ತಿಂದಿರುವ ಭೀಕರ ದೃಶ್ಯ ಸೆರೆಯಾಗಿದೆ.
ದೇವಸ್ಥಾನಕ್ಕೆ ಹೋಗಿದ್ದ ದಂಪತಿ ವಾಪಸ್ ಬರುವ ಮಾರ್ಗದಲ್ಲಿ ಕರಡಿ ದಾಳಿ ಮಾಡಿದೆ. ಈ ಭೀಕರ ದಾಳಿಗೆ ಸಿಲುಕಿದ ಇಬ್ಬರು ಸಾವನ್ನಪ್ಪಿದ್ದು, ನಂತರ ಅಲ್ಲೇ ಕುಳಿತ ಕರಡಿ ಇಬ್ಬರನ್ನು ತಿನ್ನುತ್ತಿರುವ ದೃಶ್ಯ ವೈರಲ್​ ಆಗಿದೆ. ಮೃತ ದಂಪತಿಯನ್ನು ಮುಕೇಶ್ ರೈ ಹಾಗೂ ಅವರ ಪತ್ನಿ ಗುಡಿಯಾ ರೈ ಎಂದು ಗುರುತಿಸಲಾಗಿದೆ.
ಅಂದಹಾಗೆ ಇಬ್ಬರು ದಂಪತಿ ಕಿರುಚಿದ ಶಬ್ದಕ್ಕೆ ಸ್ಥಳೀಯರು ಓಡಿ ಬಂದಿದ್ದಾರೆ. ಅಷ್ಟರಲ್ಲೇ ಇಬ್ಬರ ಪ್ರಾಣವೂ ಹಾರಿಹೋಗಿತ್ತು. ನಂತರ ಇಬ್ಬರ ದೇಹದ ಮಾಂಸವನ್ನು ಕಿತ್ತು ತಿನ್ನುತ್ತಿದ್ದ ದೃಶ್ಯವನ್ನು ದೂರದಿಂದ ಓರ್ವ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾನೆ.
ಇನ್ನು ಈ ಜಾಗಕ್ಕೆ ಭೇಟಿ ನೀಡಿದ ಪೊಲೀಸರು ಅಳಿದುಳಿದ ಈ ದಂಪತಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇದೇ ಮಾರ್ಗದಲ್ಲಿ ಹಿಂದೆಯೂ ಕರಡಿಗಳ ದಾಳಿ ನಡೆದಿದ್ದು,ಮನುಷ್ಯರನ್ನು ತಿಂದು ಹಾಕಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಏನೇ ಆದರೂ ಕರಡಿ ದಾಳಿಗೆ ಸಿಲುಕಿದ ದಂಪತಿ ಮಾತ್ರ ಶೋಚನೀಯ ಸ್ಥಿತಿಯಲ್ಲಿ ಸಾವನ್ನಪ್ಪಿರುವುದು ದುರಂತವೇ ಸರಿ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen + two =
Remember me
