ಚೆನ್ನೈ:ಕರೊನಾ ಸಂಕಷ್ಟದಿಂದಾಗಿ ಕೆಲಸ ಇಲ್ಲದ ಕಾರಣ ವ್ಯಕ್ತಿಯೊಬ್ಬ ನಾಲ್ಕು ತಿಂಗಳಿನಿಂದ ಮನೆ ಬಾಡಿಗೆ ಕಟ್ಟಿರಲಿಲ್ಲ. ಬಾಡಿಗೆ ವಸೂಲಿ ಮಾಡಲು ಮನೆ ಮಾಲೀಕ ಪೊಲೀಸರ ಮೊರೆ ಹೋದ. ಮನೆಗೆ ಇನ್​ಸ್ಪೆಕ್ಟರ್​ ಹೆಂಡತಿ, ಮಕ್ಕಳ ಎದುರೇ ಆತನನ್ನು ಥಳಿಸಿದ. ಪರಿಣಾಮ ಭಾರಿ ದುರಂತವೇ ನಡೆದು ಹೋಯಿತು.
ಇಲ್ಲಿನ ಫುಳಾಲ್​ ಪ್ರದೇಶದಲ್ಲಿ ನೆಲೆಸಿದ್ದ ಶ್ರೀನಿವಾಸ್​ ಪೇಂಟಿಂಗ್​ ಮಾಡಿಕೊಂಡಿದ್ದ. ಕರೊನಾದಿಂದಾಗಿ ವಿಧಿಸಿದ್ದ ಲಾಕ್​ಡೌನ್​ ಕಾರಣ ಕೆಲಸ ಕಳೆದುಕೊಂಡಿದ್ದ. ಹೀಗಾಗಿ ನಾಲ್ಕು ತಿಂಗಳಿನಿಂದ ಆತನಿಗೆ ಸಂಪಾದನೆಯೇ ಇರಲಿಲ್ಲ. ಇದರಿಂದಾಗಿ ಮನೆ ಬಾಡಿಗೆಯನ್ನು ನೀಡಿರಲಿಲ್ಲ.
ಇದನ್ನೂ ಓದಿ;15ನೇ ವರ್ಷಕ್ಕೆ ಮದುವೆ, ಎರಡೂವರೆ ವರ್ಷದ ಮಗುವಿನ ತಾಯಿಯೀಗ ಪಿಯು ಪರೀಕ್ಷೆಯಲ್ಲಿ ಅಗ್ರ ಸಾಧಕಿ
ಇದರಿಂದ ಕೆರಳಿದ ಮನೆ ಮಾಲೀಕ ರಾಜೇಂದ್ರನ್​ ಬಾಡಿಗೆ ವಸೂಲಿ ಮಾಡಿಕೊಳ್ಳಲು ಪೊಲೀಸರ ಮೊರೆ ಹೋಗಿದ್ದ. ಮನೆ ಬಳಿಗೆ ಬಂದ ಇನ್​ಸ್ಪೆಕ್ಟರ್​ ಸ್ಯಾಮ್​ ಬೆನ್ಸನ್​ ಪೇಂಟರ್​ನನ್ನು ಹೆಂಡತಿ ಮಕ್ಕಳ ಎದುರಲ್ಲೇ ಮೈಮೇಲೆ ಬಾಸುಂಡೆ ಬರುವಂತೆ ಥಳಿಸಿದ್ದ.
ತನಗಾದ ಅವಮಾನವನ್ನು ಸಹಿಸಿಕೊಳ್ಳಲಾಗದೇ, ಶ್ರೀನಿವಾಸ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಶೇ.80 ಸುಟ್ಟಗಾಯಗಳಿಂದ ಬಳಲುತ್ತಿರುವ ಶ್ರೀನಿವಾಸನನ್ನು ಕಿಲಿಪಾಕ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ;ಅಕ್ಟೋಬರ್​ನಲ್ಲಿ ರಷ್ಯನ್​ರಿಗೆಲ್ಲ ಕರೊನಾ ಲಸಿಕೆ; ಬೃಹತ್​ ಅಭಿಯಾನಕ್ಕೆ ಸಿದ್ಧತೆ; ನೋಂದಣಿಯೊಂದೇ ಬಾಕಿ
ಲಾಕಪ್​ ಡೆತ್​ ಕಾರಣದಿಂದ ತಮಿಳುನಾಡು ಪೊಲೀಸರು ತೀವ್ರ ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ, ಮತ್ತೊಬ್ಬ ಪೊಲೀಸ್​ ದೌರ್ಜನ್ಯ ಎಸಗಿರುವುದು ಇಲಾಖೆಗೆ ಮತ್ತೊಮ್ಮೆ ಮುಜುಗರ ಉಂಟುಮಾಡಿದೆ. ಸದ್ಯ ಸ್ಯಾಮ್​ ಬೆನ್ಸನ್​ನನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.
ಆರಂಭವಾಗಿದೆ ಕರೊನಾದ ಅಂತ್ಯಕಾಲ; ದೆಹಲಿ ಮುಂಚೂಣಿಯಲ್ಲಿ; ಏನಿದು ಆರ್​-ವ್ಯಾಲ್ಯೂ ಲೆಕ್ಕಾಚಾರ…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − two =
Remember me
