ಸಿಕರ್​:ಮೋದಿ ಜಿಂದಾಬಾದ್​ ಮತ್ತು ಜೈಶ್ರೀರಾಮ್​ ಎನ್ನಲು ನಿರಾಕರಿಸಿದ್ದಕ್ಕೆ 52 ವರ್ಷದ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ರಾಜಸ್ಥಾನದ ಸಿಕರ್​ ಎಂಬಲ್ಲಿ ಶನಿವಾರ ನಡೆದಿದೆ. ಥಳಿಸಿದ್ದಲ್ಲದೆ ಆತನ ದಾಡಿಯನ್ನು ಹಿಡಿದೆಳೆದು ಪಾಕಿಸ್ತಾನಕ್ಕೆ ಹೋಗು ಎಂದಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಗಫರ್​ ಅಹ್ಮದ್​ ಕಚ್ಛಾವಾ ಹಲ್ಲೆಗೊಳಗಾದ ವ್ಯಕ್ತಿ. ಅವರ ಹೇಳಿದನ್ನು ನಿರಾಕರಿಸಿದ್ದಕ್ಕೆ ನನ್ನ ವಾಚ್​ ಮತ್ತು ಹಣವನ್ನು ಕಸಿದುಕೊಂಡರು. ನನ್ನ ದವಡೆಗೆ ಒಡೆದು ಹಲ್ಲು ಮುರಿದಿದ್ದಲ್ಲದೆ, ಕಣ್ಣು ಊದುವಂತೆ ಮುಖದ ಮೇಲೆ ಹಲ್ಲೆ ಮಾಡಿದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಹಿಂದುವೆಂದು ಮದುವೆಯಾಗಿ ಮೋಸಹೊದ ಮಹಿಳೆ ಮಾಡಿದ್ದೇನು?
ಎಫ್​ಐಆರ್​ ಪ್ರಕಾರ ಶುಕ್ರವಾರ ಮುಂಜಾನೆ 4ಕ್ಕೆ ಕಚ್ಛಾವಾ ಪಕ್ಕದ ಹಳ್ಳಿಗೆ ಪ್ರಯಾಣಿಕರನ್ನು ಬಿಟ್ಟು ಬರುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳನ್ನು ನನ್ನನ್ನು ನಿಲ್ಲುವಂತೆ ಹೇಳಿ ಟೊಬ್ಯಾಕೋ ಕೇಳಿದರು. ತಕ್ಷಣ ಅವರು ಕೇಳಿದ್ದನ್ನು ಕೊಟ್ಟರೂ ಸಹ ತೆಗೆದುಕೊಳ್ಳಲು ನಿರಾಕರಿಸಿದರು. ಬದಲಾಗಿ ಮೋದಿ ಜಿಂದಾಬಾದ್​ ಮತ್ತು ಜೈಶ್ರೀರಾಮ್​ ಪಠಣ ಮಾಡುವಂತೆ ಹೇಳಿದರು. ನಾನು ನಿರಾಕರಿಸಿದ್ದಕ್ಕೆ ದಂಡದಿಂದ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಕಚ್ಛಾವಾ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಿಕರ್​ನ ಹಿರಿಯ ಪೊಲೀಸ್​ ಅಧಿಕಾರಿ ಪುಷ್ಪೇಂದ್ರ ಸಿಂಗ್​, ಶುಕ್ರವಾರ ದೂರು ದಾಖಲಿಸಿಕೊಂಡೆವು. ಪ್ರಕರಣ ಸಂಬಂಧ ಇಬ್ಬರ ಆರೋಪಿಗಳನ್ನು ಬಂಧಿಸಲಾಗಿದೆ. ಪಾನಮತ್ತ ಸ್ಥಿತಿಯಲ್ಲಿ ಸಂತ್ರಸ್ತ ವ್ಯಕ್ತಿಯೊಂದಿಗೆ ಆರೋಪಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದಿದ್ದಾರೆ.
ಇದನ್ನೂ ಓದಿ:ಬಹುಮಾನದ ಆಸೆ ತೋರಿಸಿ ಫೇಸ್​ಬುಕ್, ಇನ್​ಸ್ಟಾಗ್ರಾಂ ಗೆಳೆಯರಿಂದ ಯುವತಿಗೆ ಧೋಖಾ
ಬಂಧಿತರನ್ನು ಶಂಭು ದಯಾಳ್ ಜಟ್​​ (35) ಮತ್ತು ರಾಜೇಂದ್ರ ಜಟ್​ (30) ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು 6 ಗಂಟೆಯಲ್ಲೇ ಅವರನ್ನು ಬಂಧಿಸಲಾಗಿದೆ. ಸಂತ್ರಸ್ತನಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದನ್ನು ಸಹ ಆರೋಪಿಗಳು ಒಪ್ಪಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ಯುಪಿಎಸ್​ಸಿ ಕಷ್ಟವಲ್ಲ ಈಸಿ: ಇಲ್ಲಿವೆ ರಾಜ್ಯದ ಸಾಧಕರು ಕೊಟ್ಟಿರುವ ಟಿಪ್ಸ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 3 =
Remember me
