ಮುಂಬೈ:ಮಧ್ಯರಾತ್ರಿ ಸುಂದರ ಯುವತಿಯರ ಕಿತಾಪತಿಯಿಂದ ನೆರೆಮನೆವಾಸಿಗಳ ನಿದ್ರೆಗೆ ಭಂಗ ಉಂಟಾಗುತ್ತಿರುವ ವಿಚಿತ್ರ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ತಡರಾತ್ರಿ ಯುವತಿಯರು ನೆರೆಮನೆಯ ಡೋರ್​ಬೆಲ್​ ರಿಂಗ್​ ಮಾಡಿ ತೊಂದರೆ ಕೊಡುತ್ತಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಯುವತಿಯರ ಕೃತ್ಯಕ್ಕೆ ಭಾರಿ ಟೀಕೆಗಳು ವ್ಯಕ್ತವಾಗಿವೆ.
ಶ್ರೇಷ್ಠ್ ಪೊದ್ದಾರ್ ಎಂಬುವರು ಸಿಸಿಟಿವಿ ಫೂಟೇಜ್ ಅನ್ನು ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆ 2.30 ಕ್ಕೆ ಸಂಭವಿಸಿರುವುದಾಗಿ ತಿಳಿಸಿದ್ದಾರೆ. ಹೆಚ್ಚಾಗಿ 55 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಹಿರಿಯ ನಿವಾಸಿಗಳು ವಾಸವಿರುವ ಕಟ್ಟಡದಲ್ಲಿ ಇಬ್ಬರು ವಿದ್ಯಾವಂತ ಹುಡುಗಿಯರು ಪ್ರವೇಶಿಸಿ, ಮನೆ ಬಾಗಿಲುಗಳನ್ನು ಲಾಕ್ ಮಾಡಲು ಮತ್ತು ಡೋರ್​ಬಿಲ್​ ಬಾರಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸಿಸಿಟಿವಿ ಇರುವುದು ಗೊತ್ತಿದ್ದರೂ ಈ ಕೃತ್ಯ ಎಸಗಿದ್ದಾರೆ.
ಸಮೀಪದ ಫ್ಲ್ಯಾಟ್‌ಗಳಲ್ಲಿ ಇತ್ತೀಚೆಗೆ ದರೋಡೆ ಯತ್ನಗಳು ಮತ್ತು ಕೊಲೆಗಳಂತಹ ಪ್ರಕರಣಗಳಿಂದ ಸ್ಥಳೀಯ ನಿವಾಸಿಗಳು ಭಯದಲ್ಲಿರುವಾಗಲೇ ಇಂತಹ ಕುಚೇಷ್ಠೆ ಮತ್ತಷ್ಟು ಭೀತಿ ಉಂಟುಮಾಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಹೊರಗಡೆಯಿಂದ ಬಾಗಿಲುಗಳನ್ನು ಬಂದ್​ ಮಾಡುವುದು ಸ್ವೀಕಾರಾರ್ಹವಲ್ಲ, ವಿಶೇಷವಾಗಿ ಬೆಂಕಿಯ ಅವಘಡದಂತಹ ತುರ್ತು ಸಂದರ್ಭಗಳಲ್ಲಿ ಸಂಭವನೀಯ ಅಪಾಯಗಳನ್ನು ಪರಿಗಣಿಸಿ, ಯುವತಿಯರ ವಿರುದ್ಧ ಕಠಿಣ ಕಾನೂನು ಕ್ರಮ ಅಗತ್ಯವಿದೆ ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಘಟನೆಯ ಸಂದರ್ಭದಲ್ಲಿ ಯುವತಿಯರು ಮದ್ಯದ ಅಮಲಿನಲ್ಲಿದ್ದಿರಬಹುದು ಎಂಬ ಸಂಶಯವೂ ಇದೆ. ವಿಡಿಯೋ ನೋಡಿದರೆ ಆ ಸುಳಿವು ಸಿಗುತ್ತಿದೆ. ಆ ಇಬ್ಬರು ಯುವತಿಯರು ಯಾರೆಂಬುದನ್ನು ಸ್ಥಳೀಯರು ಪತ್ತೆಹಚ್ಚಿದ್ದು, ತಮಾಷೆಗಾಗಿ ಮಾಡಿದ್ದಕ್ಕೆ ಯಾವುದೇ ದೂರು ದಾಖಲಿಸಲು ಹೋಗಿಲ್ಲ. ಆದರೆ, ಇಬ್ಬರಿಗೂ ಬುದ್ಧಿವಾದ ಹೇಳಿ ಕಳುಹಿಸಲಾಗಿದೆ.(ಏಜೆನ್ಸೀಸ್​)
ನೀರೆಂದು ಭಾವಿಸಿ ಆ್ಯಸಿಡ್ ಕುಡಿದ್ರಾ? ಹೇಗಿದ್ದಾರೆ ಮಯಾಂಕ್​? ಒಂದೇ ಒಂದು ಮಾತು ಬಾಯಿಂದ ಹೊರ ಬಂದಿಲ್ಲ

ಬೇವನ್ನು ಪ್ರತಿ ದಿನ ಈ ರೀತಿ ಸೇವನೆ ಮಾಡುವುದರಿಂದ ಯಾವುದೇ ರೋಗ ನಿಮ್ಮ ಬಳಿ ಸುಳಿಯುವುದೇ ಇಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + seven =
Remember me
