ಮುಂಬೈ:ಎಂಟು ಪೊಲೀಸರನ್ನು ಕೊಂದ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಪೊಲೀಸ್​ ಎನ್​ಕೌಂಟರ್​ಗೆ ಬಲಿಯಾಗಿದ್ದಾನೆ. ಪೊಲೀಸರು ಕಾರ್ಯಾಚರಣೆ ಬಗ್ಗೆ ದೇಶಾದ್ಯಂತ ಭಾರಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ವಿಕಾಸ್​ ದುಬೆ ಹತ್ಯೆ ಇಷ್ಟೊಂದು ಚರ್ಚೆ ಹಾಗೂ ಕೋಲಾಹಲ ಮೂಡಿಸಿದ್ದು ಏಕೆ ಗೊತ್ತೆ? ಆತ ಬ್ರಹ್ಮಣನಾಗಿರುವುದು….!
ಇದನ್ನೂ ಓದಿ;ಎಂಟು ಪೊಲೀಸರನ್ನು ಕೊಂದ ವಿಕಾಸ್​ ದುಬೆಯದ್ದು ಮನೆಯಲ್ಲ, ಮದ್ದುಗುಂಡಿನ ಕಾರ್ಖಾನೆ; ಇಡೀ ಪ್ರದೇಶ ಸ್ಫೋಟಕ್ಕೆ ಸಂಚು
ಇದು ಕಾಂಗ್ರೆಸ್​ ಸಂಸದ ಹುಸೇನ್​ ದಳವಾಯಿ ಕಂಡುಕೊಂಡಿರುವ ಸತ್ಯ. ಅವರ ಪ್ರಕಾರ ವಿಕಾಸ್​ ದುಬೆ ಬ್ರಾಹ್ಮಣ ಜಾತಿಗೆ ಸೇರಿದವನಾದ ಕಾರಣ ರಾಷ್ಟ್ರವ್ಯಾಪಿ ಆತನ ಹತ್ಯೆ ತಲ್ಲಣಗಳನ್ನು ಮೂಡಿಸಿದೆ. ಈವರೆಗಿನ ಪ್ರಮುಖ ಎನ್​ಕೌಂಟರ್​ಗಳಲ್ಲಿ ದಲಿತರು ಹಾಗೂ ಮುಸ್ಲಿಮರು ಹತ್ಯೆಗೀಡಾಗಿದ್ದಾರೆ ಎಂದು ಹೇಳಿದ್ದಾರೆ.
ದುಬೆ ಹತ್ಯೆ ಪರಿಣಾಮ ಏನಾಗಿದೆ ಎಂದರೆ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕುರ್ಚಿಯಿಂದ ಕೆಳಗಿಳಿಯಬೇಕಾದ ಸನ್ನಿವೇಶ ಎದುರಾಗಿದೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ ವ್ಯಾಖ್ಯಾನಿಸಿದ್ದಾರೆ.
ಇದನ್ನೂ ಓದಿ;ಕಾಂಗ್ರೆಸ್​ ಶಾಸಕರಿಗೆ 15 ಕೋಟಿ ರೂ. ಆಫರ್​; ರಾಜಸ್ಥಾನದಲ್ಲೂ ಆಪರೇಷನ್​ ಕಮಲ?
ಉತ್ತರಪ್ರದೇಶದ ಕಾನ್ಪುರ ಭಿಕ್ರೂ ಗ್ರಾಮದಲ್ಲಿ ಎಂಟು ಪೊಲೀಸರನ್ನು ಕೊಂದಿದ್ದ ವಿಕಾಸ್​ ದುಬೆ ಮಧ್ಯಪ್ರದೇಶದ ಉಜ್ಜೈನ್​ ಮಹಾಕಾಲ ಮಂದಿರದಲ್ಲಿ ಸೆರೆಯಾಗಿದ್ದ. ಆತನನ್ನು ಅಲ್ಲಿಂದ ಕಾನ್ಪುರಕ್ಕೆ ಕರೆತರುವಾಗ ವಾಹನ ಪಲ್ಟಿಯಾಗಿತ್ತು. ಆಗ ಪೊಲೀಸರ ಬಂದೂ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ ದುಬೆಯನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು.
ಮಸೀದಿಯಾಗಿ ಮಾರ್ಪಡುತ್ತಿದೆ 6ನೇ ಶತಮಾನದ ವಿಶ್ವ ಪ್ರಸಿದ್ಧ ವಸ್ತು ಸಂಗ್ರಹಾಲಯ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − seven =
Remember me
