ನವದೆಹಲಿ: ಪ್ರೇಮಿಗಳ ದಿನಾಚರಣೆಯ ದಿನವೇ ಸುಪ್ರೀಂ ಕೋರ್ಟ್​ನಲ್ಲಿ ಬಾಂಬ್​ ಭೀತಿ ಆವರಿಸಿತ್ತು. ಭದ್ರತಾ ಸಿಬ್ಬಂದಿ ಸುಪ್ರೀಂ ಕೋರ್ಟ್ ಆವರಣಕ್ಕೆ ಧಾವಿಸಿದ್ದು, ಒಮ್ಮಿಂದೊಮ್ಮೆಗೆ ಎಲ್ಲೆಡೆ ಆತಂಕದ ವಾತಾವರಣ ಕಾಣಿಸಿಕೊಂಡಿತ್ತು.
ಸುಪ್ರೀಂ ಕೋರ್ಟ್​ನ ಕೋರ್ಟ್​ ನಂಬರ್ 4ರ ಪ್ರದೇಶದಲ್ಲಿ ಈ ಆತಂಕ ಸೃಷ್ಟಿಯಾಗಿತ್ತು. ಸಾಮಾನ್ಯವಾಗಿ ಈ ಪ್ರದೇಶ ಜನಜಂಗುಳಿಯಿಂದ ಕೂಡಿರುತ್ತದೆ. ಬಾಂಬ್ ಭೀತಿಯ ಕಾರಣಕ್ಕೆ ಆ ಪ್ರದೇಶವನ್ನು ಶುಕ್ರವಾರ ರಕ್ಷಣಾ ಸಿಬ್ಬಂದಿ ಸುತ್ತುವರಿದಿದ್ದರು. ಲಖನೌ ನ್ಯಾಯಾಲಯದ ಆವರಣದಲ್ಲಿ ನಿನ್ನೆಯಷ್ಟೇ ಕಚ್ಚಾ ಬಾಂಬ್ ಸ್ಫೋಟಗೊಂಡ ಕಾರಣ, ಸುಪ್ರೀಂ ಕೋರ್ಟ್ ಆವರಣದಲ್ಲೂ ಅಂಥದ್ದೇ ಆತಂಕ ಸೃಷ್ಟಿಯಾಗಿತ್ತು.
ಈ ಆತಂಕಕ್ಕೆ ಕಾರಣವಾಗಿದ್ದು ಬ್ಯಾಗ್ ಒಂದರಿಂದ ಕೇಳಿಬಂದಿದ್ದ ಬೀಪ್ ಶಬ್ದ. ಆ ಶಬ್ದ ಬಹಳ ಹೊತ್ತು ಅಲ್ಲಿದ್ದವರನ್ನು ಭೀತಿಗೀಡುಮಾಡಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಭದ್ರತಾಪಡೆ ಸಿಬ್ಬಂದಿ ಅಲ್ಲಿದ್ದವರನ್ನೆಲ್ಲ ತೆರವು ಗೊಳಿಸಿ, ಬೀಪ್ ಶಬ್ದ ಬರುತ್ತಿದ್ದ ಬ್ಯಾಗನ್ನು ಪರಿಶೀಲಿಸಿದೆ.
ಇದನ್ನೂ ಓದಿ:ಲಖನೌ ನ್ಯಾಯಾಲಯದಲ್ಲಿ ಬಾಂಬ್​ ಸ್ಫೋಟ: ಮೂವರು ವಕೀಲರಿಗೆ ಗಾಯ, ಮೂರು ಕಚ್ಚಾ ಬಾಂಬ್​ ಪತ್ತೆ
ವಾರಸುದಾರರು ಇಲ್ಲದ ಬ್ಯಾಗ್​ ಅದಾಗಿತ್ತು. ಅದರೊಳಗೆ ಇದ್ದ ಪವರ್ ಬ್ಯಾಂಕ್​ ಬೀಪ್ ಸದ್ದು ಮಾಡುತ್ತಿತ್ತು. ಇದು ಬಿಟ್ಟು ಬೇರೇನೂ ಆಗಲಿಲ್ಲ. ಸದ್ಯ ಈ ಬ್ಯಾಗನ್ನು ಕಂಟ್ರೋಲ್ ರೂಮ್​ನಲ್ಲಿ ಇರಿಸಲಾಗಿದೆ. ಕೋರ್ಟ್ ಆವರಣದಲ್ಲಿ ಇಷ್ಟೆಲ್ಲ ಕೋಲಾಹಲ ನಡೆಯುತ್ತಿದ್ದರೂ, ಕೋರ್ಟ್​ನ ನಿತ್ಯ ಕಲಾಪಕ್ಕೆ ಯಾವುದೇ ಅಡ್ಡಿ ಆಗಿಲ್ಲ ಎಂದು ಭದ್ರತಾ ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − eight =
Remember me
