ನವದೆಹಲಿ:ಲಾಕ್​ಡೌನ್​ ಕಾಲದಲ್ಲಿ ಎಲ್ಲವೂ ಸ್ಥಬ್ದವಾಗಿತ್ತು. ಆದರೆ, ಜೇನು ನೊಣಗಳಿಗೆ ಇನ್ನಿಲ್ಲದ ಕೆಲಸ ಬಂದೆರಗಿತ್ತು ಎಂದರೆ ನಂಬಲೇಬೇಕು….!
ಸಾಮಾನ್ಯವಾಗಿ ಮಾರ್ಚ್​ನಿಂದ ಮೇ ವರೆಗಿನ ಅವಧಿಯನ್ನು ಜೇನು ಸಾಕಣೆದಾರರು ಶುಷ್ಕ ಅವಧಿ ಅಥವಾ ಅಷ್ಟೊಂದು ಜೇನು ಪಡೆಯಲಾಗದ ಕಾಲಮಾನ ಎಂದೇ ಪರಿಗಣಿಸುತ್ತಾರೆ. ಆದರೆ, ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಅಂದರೆ ಶೇ.30ರಿಂದ 40ರವರೆಗೆ ಹೆಚ್ಚು ಜೇನು ಸಂಗ್ರಹಿಸಿದ್ದಾಗಿ ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಲಾಕ್​ಡೌನ್​.
ಕಳೆದ ಮೂರು ತಿಂಗಳಿನಿಂದ ಉಂಟಾಗಿದ್ದ ಮಾಲಿನ್ಯರಹಿತ ವಾತಾವರಣ ಹಾಗೂ ಕ್ರಿಮಿನಾಶಕಗಳ ಸಿಂಪಡನೆ ಇಲ್ಲದಿರುವುದು ಹಾಗೂ ಪ್ರಶಾಂತ ಪರಿಸರ ಜೇನು ನೊಣಗಳ ಚಟುವಟಿಕೆಯನ್ನು ಇಮ್ಮಡಿಸಿದೆ. ಇದರಿಂದಾಗಿ ಜೇನು ಸಂಗ್ರಹ ಹೆಚ್ಚಾಗಿದೆ ಎನ್ನುವುದು ತಜ್ಞರ ಅಭಿಮತ.
ಇದನ್ನೂ ಓದಿ;ಎಚ್ಚರ…. ಭಾರತದ ವಿರುದ್ಧ ಸೈಬರ್​ ದಾಳಿಗಿಳಿದ ಚೀನಾ…! ಬ್ಯಾಂಕಿಂಗ್​ ವ್ಯವಸ್ಥೆ, ಎಟಿಎಂಗಳೇ ಗುರಿ
ಹಿಮಾಚಲ ಪ್ರದೇಶ, ಉತ್ತರಪ್ರದೇಶ ಹಾಗೂ ಕಾಶ್ಮೀರದಲ್ಲಿ ಜೇನು ಸಾಕಣೆಗೆ ತೋಟಗಳನ್ನು ಮಾಡಿಕೊಂಡಿರುವ ವಿಜಯ್​ ಕಸನಾ ಕೂಡ ಇದನ್ನೇ ಹೇಳುತ್ತಾರೆ. ಈ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಜೇನು ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ವಿನಯ್​ಕುಮಾರ್​ ಕೂಡ ಇದನ್ನು ಅನುಮೋದಿಸುತ್ತಾರೆ. ಉಳಿದ ಅವಧಿಯಲ್ಲಿ ಪ್ರತಿ ಜೇನು ಪೆಟ್ಟಿಗೆಯಿಂದ 15ರಿಂದ 20 ಕೆಜಿ ಸಂಗ್ರಹವಾದರೆ, ಲಾಕ್​ಡೌನ್​ ಅವಧಿಯಲ್ಲಿ ಈ ಪ್ರಮಾಣ 30ರಿಂದ 40 ಕೆಜಿಗೆ ಏರಿತ್ತು ಎನ್ನುತ್ತಾರೆ.ಜೇನು ಸಾಕಣೆ ಪ್ರಮುಖವಾಗಿರುವ ಬಿಹಾರ, ಉತ್ತರಪ್ರದೇಶ, ರಾಜಸ್ಥಾನ, ಪಂಜಾಬ್​, ಉತ್ತರಾಖಂಡ್​ ಹಿಮಾಚಲ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಈ ವಿದ್ಯಮಾನ ಗಮನಿಸಲಾಗಿದೆ.
ಇದನ್ನೂ ಓದಿ;ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದೆ ಎಚ್ಚರಿಕೆ …! ಈ ಚೀನಿ ಆ್ಯಪ್​ಗಳಿದ್ದರೆ ಅಪಾಯ
ಭಾರತದಲ್ಲಿ 207-18ನೇ ಸಾಲಿನಲ್ಲಿ 1.05 ಲಕ್ಷ ಮೆಟ್ರಿಕ್​ ಟನ್​ ಜೇನು ಉತ್ಪಾದಿಸಲಾಗಿದ್ದು, ಈ ಬಾರಿ ಇದು ಹೆಚ್ಚಳವಾಗುವ ಸಂಭವವಿದೆ.
https://www.vijayavani.net/ghaziabad-crematorium-goes-defunct-body-of-covid-patient-lies-half-burnt-for-29-hours/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 5 =
Remember me
