ನವದೆಹಲಿ:ಕುಖ್ಯಾತ ಪಾತಕಿ ವಿಕಾಸ್​ ದುಬೆ ಬಂಧನದ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಇದೊಂದು ಪೂರ್ವಯೋಜಿತ ಕೃತ್ಯ ಎಂದೆಲ್ಲ ಟೀಕಿಸಲಾಗುತ್ತಿದೆ. ಆದರೆ, ಉತ್ತರ ಪ್ರದೇಶ ಸರ್ಕಾರ ಮಾತ್ರ ವಿಕಾಸ್​ ದುಬೆಯ ಬಂಧನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿತ್ತು ಎಂದೇ ಹೇಳಬಹುದಾಗಿದೆ. ಅದಕ್ಕೆ ಈ ಘಟನೆಯೇ ಸಾಕ್ಷಿ.
ವಿಕಾಸ್​ ದುಬೆ ಎಲ್ಲಿದ್ದಾನೆ ಎಂಬ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದಂತೆ ತೋರುತ್ತದೆ. ಆದ್ದರಿಂದ, ಆತನ ಇರುವಿಕೆಯ ಬಗ್ಗೆ ಪೊಲೀಸ್​ ಅಧಿಕಾರಿಗಳಿಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಆದರೆ, ಮಧ್ಯಪ್ರದೇಶ ಸರ್ಕಾರದೊಂದಿಗೆ ಈ ವಿಷಯವನ್ನು ಹಂಚಿಕೊಂಡು, ಆತನ ಬಂಧನಕ್ಕೆ ಸಹಕಾರ ಕೇಳಿತ್ತು ಎನ್ನಲಾಗಿದೆ.
ಈ ಕಾರಣದಿಂದಾಗಿ ಮಧ್ಯಪ್ರದೇಶ ಸರ್ಕಾರ ಉಜ್ಜೈನ್​ನ ಮಹಾಕಾಲ ಪೊಲೀಸ್​ ಠಾಣೆಯ ಮುಖ್ಯಸ್ಥ ಸೇರಿ 8 ಪೊಲೀಸ್​ ಅಧಿಕಾರಿಗಳನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿತ್ತು ಎನ್ನಲಾಗಿದೆ. ಆತನನ್ನು ಬಂಧಿಸಲು ತೆರಳುವಾಗ ಈ ಬಗ್ಗೆ ಆತನಿಗೆ ಮಾಹಿತಿ ನೀಡುವ ಆತಂಕದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರ ಈ ಕ್ರಮ ಕೈಗೊಂಡಿತ್ತು ಎನ್ನಲಾಗಿದೆ.
ಇದನ್ನೂ ಓದಿ:ಕೇರಳದ ಪೊಲೀಸರು ಬಡಗಿ, ಪೇಟಿಂಗ್​ ಮತ್ತು ಡ್ರಮ್​ ಬಾರಿಸುವ ಕೆಲಸ ಆಯ್ಕೆ ಮಾಡಿಕೊಳ್ಳುತ್ತಿರುವುದು ಏಕೆ?
ಇದಕ್ಕೂ ಮುನ್ನ ಮಧ್ಯಪ್ರದೇಶ ಪೊಲೀಸರ ಬಂಧನದಲ್ಲಿರುವ ಕುಖ್ಯಾತ ಪಾತಕಿ ಕಾನ್ಪುರದಲ್ಲಿ ತನ್ನ ಮನೆಯ ಮೇಲೆ ಪೊಲೀಸರು ದಾಳಿ ಮಾಡುತ್ತಾರೆ ಎಂಬ ಬಗ್ಗೆ ಪೊಲೀಸ್​ ಅಧಿಕಾರಿಗಳಿಂದಲೇ ಮಾಹಿತಿ ಸಿಕ್ಕಿತ್ತು ಎಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ ಇಲ್ಲಿಯೂ ಕೂಡ ಅದು ಪುನಾವರ್ತನೆಯಾಗಬಾರದು ಎಂಬ ಕಾರಣಕ್ಕೆ ಮಧ್ಯಪ್ರದೇಶ ಸರ್ಕಾರ ಈ ಕ್ರಮ ಕೈಗೊಂಡಿದ್ದಾಗಿ ಹೇಳಲಾಗಿದೆ.
ವಕೀಲರ ಕಾರಿನಲ್ಲಿ ಪ್ರಯಾಣ: ಕಾನ್ಪುರದಿಂದ ಪರಾರಿಯಾಗಿದ್ದ ವಿಕಾಸ್​ ದುಬೆ ಉಜ್ಜೈನ್​ ತಲುಪಲು ವಕೀಲರೊಬ್ಬರ ಕಾರನ್ನು ಬಳಸಿದ್ದ ಎಂಬುದು ಇದೀಗ ಬಹಿರಂಗವಾಗಿದೆ. ಲಖನೌ ನಿವಾಸಿಯಾದ ವಕೀಲ ಮನೋಜ್​ ಯಾದವ್​ ಅವರ ಪುತ್ರನ ಹೆಸರಿನಲ್ಲಿ ಈ ಕಾರು ನೋಂದಾಯಿಸಲ್ಪಟ್ಟಿದೆ. ಮೂರು ರಾಜ್ಯಗಳ ಸರಹದ್ದನ್ನು ದಾಟಿ ವಿಕಾಸ್​ ದುಬೆ ಉಜ್ಜೈನ್​ ತಲುಪಿದ್ದ ಎನ್ನಲಾಗಿದೆ. ಇದೀಗ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಭಾರತದ ಏಟಿಗೆ ಬೆದರಿದ ಚೀನಾ ಹೇಳ್ತಿದೆ.., ‘ನಾವು ಅಂಥವರಲ್ಲ’…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 12 =
Remember me
