ನವದೆಹಲಿ:ಲಡಾಖ್​ನ ಪೂರ್ವ ಭಾಗದ ಗಲ್ವಾನ್​ ಕಣಿವೆ ಪ್ರದೇಶದಲ್ಲಿ ಒಪ್ಪಂದದ ಪ್ರಕಾರ ಚೀನಾ ಯೋಧರು ಹಿಂದೆ ಸರಿಯಬೇಕಿತ್ತು. ಆದರೆ, ಹಾಗೆ ಹಿಂದೆ ಸರಿಯುವಾಗ ಪೀಪಲ್ಸ್​ ಲಿಬರೇಷನ್​ ಆರ್ಮಿಯ (ಪಿಎಲ್​ಎ) ಯೋಧರು ಬೇಕೆಂದೇ ಹೊಸದಾಗಿ ಟೆಂಟ್​ ಹಾಕಲು ಮುಂದಾದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಆರಂಭವಾದ ಮಾತಿನ ಚಕಮಕಿ ಘರ್ಷಣೆಗೆ ಕಾರಣವಾಯಿತು ಎಂದು ಭಾರತ ಸೇನಾಪಡೆಯ ಕಮಾಂಡರ್​ ಒಬ್ಬರು ತಿಳಿಸಿದ್ದಾರೆ.
ಭಾರತದ ಪರ 20 ಯೋಧರು ಹುತಾತ್ಮರಾದರೆ, ಚೀನಾದ ಕಮಾಂಡರ್​, ಡೆಪ್ಯುಟಿ ಕಮಾಂಡರ್​ ಸೇರಿ 43ಕ್ಕೂ ಹೆಚ್ಚು ಜನರು ಹತರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಭಾಗದಲ್ಲಿ ಈ ರೀತಿಯ ಘರ್ಷಣೆಯಾಗಿದ್ದು ಇದೇ ಮೊದಲು. ಇಂಥ ದಾಳಿಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲು ಅಗತ್ಯವಾದ ಸಾಮರ್ಥ್ಯ ಮತ್ತು ಮನೋಬಲ ಭಾರತೀಯರ ಯೋಧರಿಗಿದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಲೇಹ್​ ಮತ್ತು ಶ್ರೀನಗರ ನೆಲೆಗಳಿಗೆ ಯುದ್ಧವಿಮಾನಗಳನ್ನು ರವಾನಿಸಿದ ಭಾರತ
ಪಿಎಲ್​ಎ ಸಹಜವಾಗಿ ನಡೆದುಬಂದು ಗಲ್ವಾನ್​ನಲ್ಲಿನ ಭಾರತೀಯ ಭಾಗವನ್ನು ಅತಿಕ್ರಮಿಸುವ ದುಸ್ಸಾಹ ತೋರಿದರು. ಆದರೆ ಭಾರತೀಯ ಯೋಧರು ಇದಕ್ಕೆ ಪ್ರಬಲ ಪ್ರತಿರೋಧ ಒಡ್ಡಿದರು. ತನ್ನ ದುಸ್ಸಾಹಸಕ್ಕೆ ಅದು ತಕ್ಕುದಾದ ಬೆಲೆ ತೆರಬೇಕಾಯಿತು. ಇದುವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಪಿಎಲ್​ಎ ಮೃತಪಟ್ಟಿರುವ ಅಥವಾ ಗಾಯಗೊಂಡಿರುವ 35 ಯೋಧರು ಮತ್ತು ಅಧಿಕಾರಿಗಳನ್ನು ಸ್ಥಳಾಂತರಿಸಿದೆ. ಪೆಟ್ರೋಲಿಂಗ್​ 14ರ ಬಳಿ ನಿಯೋಜನೆಗೊಂಡಿದ್ದ ಅದರ ಕಮಾಂಡಿಂಗ್​ ಆಫೀಸರ್​, ಡೆಪ್ಯುಟಿ ಕಮಾಂಡಿಂಗ್​ ಆಫೀಸರ್​ ಕೂಡ ಹತರಾಗಿರುವ ಖಚಿತ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.
ಚೀನಾ ಆ ಭಾಗದಲ್ಲಿರುವ ಪರಿಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸುವ ಪೂರ್ವಯೋಜಿತ ಸಂಚು ಹೊಂದಿತ್ತು. ಘರ್ಷಣೆ ಕೂಡ ಆ ಸಂಚಿನ ಭಾಗವಾಗಿತ್ತು. ಹಾಗಾಗಿ ಈ ಘರ್ಷಣೆ ಮತ್ತು ಹಿಂಸೆಗೆ ಅದುವೇ ನೇರಹೊಣೆ ಎಂದು ಭಾರತ ಆರೋಪಿಸಿದೆ.
ಗಲ್ವಾನ್​ ಕಣಿವೆಯಲ್ಲಿನ ಘರ್ಷಣೆಯನ್ನು ಗಮನಿಸಿದಾಗ ಏಕಪಕ್ಷೀಯವಾಗಿ ಪರಿಸ್ಥಿತಿಯನ್ನು ಬದಲಿಸಲು ಇದು ಸೌತ್​ ಚೀನಾ ಮಹಾಸಾಗರ ಅಲ್ಲ ಎಂಬುದು ಚೀನಾಕ್ಕೆ ಮನವರಿಕೆ ಆಗಿರಬೇಕು. ಜತೆಗೆ ಗಡಿ ಮತ್ತು ಸಾರ್ವಭೌಮತ್ವದ ವಿಷಯ ಬಂದಾಗ ಅವನ್ನು ರಕ್ಷಿಸಿಕೊಳ್ಳಲು ಭಾರತ ಯಾವುದೇ ಹಂತಕ್ಕೂ ಹೋಗಬಲ್ಲದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದೆ.
ಕಾಶ್ಮೀರದಲ್ಲಿ ಎರಡು ಕಾರ್ಯಾಚರಣೆ; ಒಟ್ಟು 8 ಉಗ್ರರ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
