ಕೋಲ್ಕತ:ಫೇಸ್​ಬುಕ್​ನಲ್ಲಿ ಫ್ರೆಂಡ್​ ಆದ ವ್ಯಕ್ತಿಯೊಬ್ಬ, ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ನಾಟಕವಾಡಿ, ಮದುವೆಯಾದ ನಂತರ ಯುವತಿಯ ಬಂಗಾರವನ್ನೆಲ್ಲ ಕದ್ದು ಓಡಿ ಹೋಗಿರುವ ಘಟನೆ ಕೋಲ್ಕತದಲ್ಲಿ ನಡೆದಿದೆ.
ಇದನ್ನೂ ಓದಿ:ಕೃಷಿ ಕಾಯ್ದೆ ತಡೆಗೆ ಸುಪ್ರೀಂ ಸೂಚನೆ; ನೀವು ತಡೆಯದಿದ್ದರೆ ನಾವೇ ತಡೆಯುತ್ತೇವೆ ಎಂದ ಸುಪ್ರೀಂ
ಕೋಲ್ಕತ ಮೂಲದ ಮಹಿಳೆಯೊಬ್ಬಳಿಗೆ ಹಿಮಾಚಲ ಮೂಲದ ವ್ಯಕ್ತಿಯ ಪರಿಚಯ ಫೇಸ್​ಬುಕ್​ ಮೂಲಕ ಆಗಿದೆ. ಈ ವಿಚಾರ ಯುವತಿಯ ಮನೆಯವರಿಗೂ ತಿಳಿದಿತ್ತು. ಅದಾದ ನಂತರ ಆತ ಇದ್ದಕ್ಕಿದ್ದಂತೆ ಮದುವೆ ಮಾಡಿಕೋ ಎಂದು ಹಟ ಹಿಡಿದಿದ್ದಾನೆ. ನೀನು ಮದುವೆಯಾಗದಿದ್ದರೆ ನಾನು ಬ್ಲೇಡ್​ನಿಂದ ಕತ್ತು ಕೊಯ್ದುಕೊಂಡು ಸಾಯುತ್ತೇನೆ ಎಂದು ಹೆದರಿಸಿದ್ದಾನೆ. ಅದಕ್ಕೂ ಆಕೆ ಒಪ್ಪದಿದ್ದಾಗ, ನೇರವಾಗಿ ಕೋಲ್ಕತಕ್ಕೆ ಬಂದು ಯುವತಿ ಎದುರೇ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕವಾಡಿದ್ದಾನೆ. ಅದಾದ ನಂತರ ಯುವತಿಯ ಮನೆಯವರು ಇಬ್ಬರ ಮದುವೆ ಮಾಡಿ ಕಳುಹಿಸಿಕೊಟ್ಟಿದ್ದಾರೆ.
ಮದುವೆಯಾದ ವ್ಯಕ್ತಿ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಒಂದು ವರ್ಷ ಸಂಸಾರ ಚೆನ್ನಾಗಿಯೇ ನಡೆದಿದೆ. ಅದಾದ ಮೇಲೆ ಇದ್ದಕ್ಕಿದ್ದಂತೆ ಒಂದು ದಿನ ಆತ ಮನೆಯಲ್ಲಿದ್ದ ಒಂದು ಲಕ್ಷ ರೂಪಾಯಿ ಮತ್ತು ಹೆಂಡತಿಯ ಆಭರಣವನ್ನು ತೆಗೆದುಕೊಂಡು ಓಡಿ ಹೋಗಿದ್ದಾನೆ. ಅದಾದ ಮೇಲೆ ಆಕೆಯೊಂದಿಗಿನ ಸಂಪರ್ಕ ಸಂಪೂರ್ಣವಾಗಿ ಕಡಿದುಕೊಂಡಿದ್ದಾನೆ. ಈ ವಿಚಾರವಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಯುವತಿ ಆತನ ತಂದೆ ತಾಯಿಯ ಮನೆಗೂ ಹೋಗಿದ್ದಾಳೆ. ಆದರೆ ಅವರೂ ಕೂಡ ಅಲ್ಲಿಂದ ಪರಾರಿಯಾಗಿದ್ದು, ಮನೆಗೆ ಬೀಗ ಹಾಕಿರುವುದು ಕಂಡು ಬಂದಿದೆ.
ಇದನ್ನೂ ಓದಿ:ಟಿವಿ, ಫ್ರಿಜ್ ಖರೀದಿಗೂ ಪ್ರಾಧ್ಯಾಪಕರ ಪರದಾಟ
ಇದೀಗ ಹಿಮಾಚಲ ಪ್ರದೇಶ ಪೊಲೀಸರು ಮತ್ತು ಕೋಲ್ಕತ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. (ಏಜೆನ್ಸೀಸ್​)
ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − one =
Remember me
