ಅಲಪ್ಪುಳ:ರಾಜಧಾನಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಮಹಿಳೆಯೊಬ್ಬಳಿಗೆ ಆಲ್ಕೋಹಾಲ್​ ನೀಡಿ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಯೋಧನನ್ನು ಕೇರಳ ಪೊಲೀಸರು ಶನಿವಾರ (ಮಾ.18) ಬಂಧಿಸಿದ್ದಾರೆ.
ಬಂಧಿತ ಯೋಧನನ್ನು ಪ್ರತೀಶ್​ ಕುಮಾರ್​ ಎಂದು ಗುರುತಿಸಲಾಗಿದೆ. ದೌರ್ಜನ್ಯಕ್ಕೆ ಒಳಗಾದ ತ್ರಿವೆಂಡ್ರಮ್​ ಮೂಲದ ಮಹಿಳೆ ದೂರು ನೀಡಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಗೆದ್ದರೆ ಕುಕ್ಕರ್ ಬಾಂಬ್ ಎದ್ದು ಕುಳಿತುಕೊಳ್ಳುತ್ತವೆ; ಸಿ.ಟಿ.ರವಿ ವ್ಯಂಗ್ಯ
ಆರೋಪಿ ಪ್ರತೀಶ್ ಕಾಶ್ಮೀರದಲ್ಲಿ ನೆಲೆಸಿರುವ ಯೋಧ. ಈತ ತನ್ನ ಊರಿಗೆ ತೆರಳುತ್ತಿದ್ದ ವೇಳೆ ಉಡುಪಿಯಿಂದ ರಾಜಧಾನಿ ಎಕ್ಸ್‌ಪ್ರೆಸ್ ಹತ್ತಿದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ. ನಂತರ ಅವಳ ಮನವೊಲಿಸಿ ಪಾನೀಯವನ್ನು ನೀಡಿದನು. ಯೋಧನೆಂಬ ನಂಬಿಕೆ ಇಟ್ಟು ಆಕೆ ಪಾನೀಯ ಕುಡಿದ ಬಳಿಕ ಮತ್ತಿನಲ್ಲಿದ್ದಳು. ಈ ವೇಳೆ ಆಕೆಯ ಮೇಲೆ ಪ್ರತೀಶ್​ ದೌರ್ಜನ್ಯ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ರೈಲು ತಿರುವನಂತಪುರಂ ತಲುಪಿದ ನಂತರ ಮಹಿಳೆ ತನ್ನ ಪತಿಗೆ ವಿವರಗಳನ್ನು ಬಹಿರಂಗಪಡಿಸಿದಳು. ಬಳಿಕ ಇಬ್ಬರು ಸೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಆ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಈ ಘಟನೆ ತಿಂಗಳ ಹಿಂದೆಯೇ ನಡೆದಿದ್ದು, ಅಂದಿನಿಂದ ಸಂತ್ರಸ್ತೆ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.(ಏಜೆನ್ಸೀಸ್​)
40ನೇ ವಯಸ್ಸಿಗೆ 2ನೇ ಮದುವೆಯಾದ ಕಿರುತೆರೆ ನಟಿ!

‘ಪುಟಿನ್​ ವಿರುದ್ಧದ ವಾರಂಟ್​ ಟಾಯ್ಲೆಟ್​ ಪೇಪರ್​, ಅದನ್ನು ಎಲ್ಲಿ ಬಳಸುತ್ತಾರೆ ಎಂದು ಹೇಳಬೇಕಾಗಿಲ್ಲ’ ಎಂದ ರಷ್ಯನ್​ ರಾಜಕಾರಣಿ..!

ಬಿಜೆಪಿ ರೌಡಿ ಮೋರ್ಚಾಗೆ ಬಹಿರಂಗ ಚಾಲನೆ ದೊರೆತಿದೆ! ಕಾಂಗ್ರೆಸ್ ಟೀಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 1 =
Remember me
