ಪಾಟ್ನಾ:ದೆಹಲಿ ನಂತರ ಬಿಹಾರದಲ್ಲಿ ಸಹ ಮೈ ನಡುಗಿಸುವ ಚಳಿಯ ಜತೆಗೆ ವಾಯು ಮಾಲಿನ್ಯ ದಾಖಲೆಗಳನ್ನು ಮುರಿಯುತ್ತಿದೆ. ಭಾನುವಾರದಂದು ಬೇಗುಸರಾಯ್‌ನಲ್ಲಿ ವಾಯು ಮಾಲಿನ್ಯ ಎಕ್ಯೂಐ -363 ದಾಖಲಾಗಿದೆ.
ಇದನ್ನೂ ಓದಿ:Rashmika Deep Fake Video: ರಶ್ಮಿಕಾ ಮಂದಣ್ಣ ಫೇಕ್​ ವೀಡಿಯೋ ವೈರಲ್​…ಕಿಡಿ ಕಾರಿದ್ದೇಕೆ ಅಮಿತಾಬ್​​ ಬಚ್ಚನ್​?ವಾಯು ಮಾಲಿನ್ಯ ಸೂಚ್ಯಂಕ ಈ ಋತುವಿನಲ್ಲಿಯೇ ಭಾನುವಾರದಂದು ಗಣನೀಯ ಪ್ರಮಾಣದಲ್ಲಿ ಅಪಾಯಕಾರಿ ಮಟ್ಟ ತಲುಪಿದೆ. ಪೂರ್ಣಿಯಾ ಸಹ ವಾಯು ಮಾಲಿನ್ಯದ ವಿಷಯದಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಅಲ್ಲಿ ಮಾಲಿನ್ಯದ ಮಟ್ಟ 315 ದಾಖಲಾಗಿದ್ದರೆ, ಪಾಟ್ನಾದಲ್ಲಿ 241 ದಾಖಲಾಗಿದೆ. ಹವಾಮಾನ ಬದಲಾವಣೆಯಿಂದ ಮಾಲಿನ್ಯ ಹೆಚ್ಚಿದೆ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಡಿ.ಕೆ.ಶುಕ್ಲಾ.
ಹವಾಮಾನ ವೈಪರೀತ್ಯದಿಂದ ಮಾಲಿನ್ಯ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಮಾನವ ಚಟುವಟಿಕೆಗಳನ್ನು ನಿಯಂತ್ರಿಸುವ ಪ್ರಯತ್ನಗಳು ನಡೆಯುತ್ತಿವೆ, ಆದರೆ ಭೌಗೋಳಿಕ ಅಂಶಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.
ವಾಯು ಮಾಲಿನ್ಯದ ಮೇಲೆ ನಿಗಾ ಇಡಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು. ತ್ಯಾಜ್ಯ ಸುಡುವುದನ್ನು ನಿಷೇಧಿಸಲಾಗಿದ್ದರೂ ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸಬೇಕಿದೆ ಎಂದು ಅವರು ಹೇಳುತ್ತಾರೆ.ಪಾಟ್ನಾ ಸೇರಿದಂತೆ 23 ನಗರಗಳಲ್ಲಿ ವಾಯು ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿದೆ.
ಎಕ್ಯೂಐ ಮಟ್ಟ: ದೆಹಲಿ-ಎನ್‌ಸಿಆರ್‌ನಲ್ಲಿ ಉಸಿರುಗಟ್ಟಿಸುವ ಗಾಳಿಯ ನಡುವೆ ಅತ್ಯಂತ ಸ್ವಚ್ಛ ಪರಿಸರ ಹೊಂದಿರುವ ಚೆನ್ನೈ ಮತ್ತು ಬೆಂಗಳೂರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 4 =
Remember me
