ಉತ್ತರಪ್ರದೇಶ:ಮದುವೆಯಾಗಿ ಪತಿ ಮನೆಗೆ ಬರುವಾಗ ಹಣ, ಕಾರು, ಬಂಗಲೆ ಜೊತೆಗೆ ಸೊಸೆ ಬರಬೇಕು ಎಂದು ಕೆಲವು ವರನ ಕುಟುಂಬಸ್ಥರು ಬಯಸುತ್ತಾರೆ. ಇಂದು ವರದಕ್ಷಣೆ ಕುರುಕುಳಕ್ಕೆ ಹೆಚ್ಚಿನ ಮಹಿಳೆಯರು ಪ್ರಾಣ ಕಳೆದುಕೊಳ್ಳುತ್ತಾರೆ. ಇಲ್ಲೊಬ್ಬಳು ಅತ್ತೆ ವರದಕ್ಷಿಣೆ ನೀಡದ್ದಕ್ಕೆ ಸೊಸೆಗೆ ಆ್ಯಸಿಡ್ ಕುಡಿಸಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಇದನ್ನೂ ಓದಿ:ಪತ್ನಿಯನ್ನು ಕೊಂದು ಖಾಲಿ ಬ್ಯಾರಲ್‌ನಲ್ಲಿ ಬಚ್ಚಿಟ್ಟ ಪತಿ !
ಅಂಜುಮ್ (25) ಮೃತ ಮಹಿಳೆ. ಈಕೆ ಉತ್ತರ ಪ್ರದೇಶದ ಉಡಾಲ ಜಾಗೀರ್ ಗ್ರಾಮದ ನಿವಾಸಿ. ವರನ ಕುಟುಂಬಸ್ಥರು ಅಂಜುಮ್ ಪೋಷಕರಿಗೆ ಮದುವೆ ಸಮಯದಲ್ಲಿ 2.50 ಲಕ್ಷ ರೂ. ನಗದು ಹಾಗೂ ಕಾರನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ ಅಂಜುಮ್ ಪೋಷಕರು ಅದನ್ನು ನೀಡುವಲ್ಲಿ ವಿಫಲವಾದ್ದರಿಂದ ಆಕೆಯ ಅತ್ತೆ ಕೋಪದಲ್ಲಿ ಆ್ಯಸಿಡ್ ಕುಡಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:ಪರೀಕ್ಷಾ ಕೇಂದ್ರಕ್ಕೆ ಹೋಗಲು ದಾರಿ ತಪ್ಪಿ ಅಳುತ್ತ ನಿಂತಿದ್ದ ವಿದ್ಯಾರ್ಥಿನಿ: ಜೀರೋ ಟ್ರಾಫಿಕ್​​ನಲ್ಲಿ ಕರೆದೊಯ್ದ ಪೊಲೀಸ್
‘6 ವರ್ಷಗಳ ಹಿಂದೆ ಉಡಾಲ ಜಾಗೀರ್ ಗ್ರಾಮದ ಇಲಿಯಾಸ್ ಎಂಬಾತನನ್ನು ಅಂಜುಮ್ ಮದುವೆಯಾಗಿದ್ದಳು. 15 ದಿನಗಳ ಹಿಂದೆ ಅಂಜುಮ್ ತನ್ನ ಪೋಷಕರ ಮನೆಗೆ ಭೇಟಿ ನೀಡಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ. 2.50 ಲಕ್ಷ ರೂ. ನಗದು ಮತ್ತು ಕಾರು ನೀಡುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ತಿಳಿಸಿದ್ದಳು ಎಂದು ಆಕೆಯ ಸಹೋದರಿ ಹೇಳಿದ್ದಾಳೆ.
ಘಟನೆಗೆ ಸಂಬಂಧಿಸಿ ಅಂಜುಮ್ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಕೆಯ ಪತಿ ಹಾಗೂ ಅತ್ತೆ ವಿರುದ್ಧ ದೂರು ದಾಖಲಿಸಿದ್ದಾರೆ.
ಕ್ರಿಕೆಟ್ ಆಡುತ್ತಲೇ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣ ಬಿಟ್ಟ

VIDEO| ಕೋತಿಯನ್ನು ಮರಕ್ಕೆ ಬಿಗಿದು ಕೊಂದ್ರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + 17 =
Remember me
