ಗುಂಟೂರು (ಆಂಧ್ರ ಪ್ರದೇಶ):ಗುಂಟೂರು ಮೂಲದ ಯುವತಿಯನ್ನು ಮದುವೆಯಾದ ಟೆಕ್ಕಿಯೊರ್ವ ವಿವಾಹವಾದ ಒಂದೇ ತಿಂಗಳಲ್ಲಿ ಭಾರಿ ಮೊತ್ತದ ವರದಕ್ಷಿಣೆಯೊಂದಿಗೆ ಅಮೆರಿಕಕ್ಕೆ ಪರಾರಿಯಾಗಿರುವ ಘಟನೆ ನಡೆದಿದೆ.
ಯುವತಿಯ ಪಾಲಕರು 54 ಲಕ್ಷ ರೂ. ನಗದು, 55 ಗ್ರಾಂ​ ಚಿನ್ನ ಹಾಗೂ 15 ಲಕ್ಷ ರೂ ಖರ್ಚು ಮಾಡಿ ಮಾರ್ಚ್​ 18ರಂದು ಭಾಸ್ಕರ್​ ರೆಡ್ಡಿ ಎಂಬಾತನಿಗೆ ಭರ್ಜರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಈತ ಅಮೆರಿಕದಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಾನೆ. ನನ್ನ ಮಗಳು ವಿದೇಶದಲ್ಲಿ ನೆಲೆಸುತ್ತಾಳೆಂದು ಸಾಕಷ್ಟು ಕನಸು ಕಟ್ಟಿಕೊಂಡು ಭಾಸ್ಕರ್​ಗೆ ಯುವತಿ ಪಾಲಕರು ಧಾರೆ ಎರೆದು ಕೊಟ್ಟಿದ್ದರು.
ಇದನ್ನೂ ಓದಿ:ಡಿಸ್ಟಿಂಕ್ಷನ್​​ನಲ್ಲಿ ಪಾಸಾದ ಪಿಯು ವಿದ್ಯಾರ್ಥಿನಿಗೆ ಇಂಗ್ಲಿಷ್​ ಪರೀಕ್ಷೇಲಿ 7 ಅಂಕ: ಕನ್ಫ್ಯೂಸ್​ ಆಗ್ಬೇಡಿ ಸುದ್ದಿ ಓದಿ!
ಮೊದಲನೇ ರಾತ್ರಿಯೇ ಹೊಸ ಡ್ರಾಮಾ ಶುರುವಿಟ್ಟುಕೊಂಡ ಆರೋಪಿ ಭಾಸ್ಕರ್​, ನನಗೆ ಆರೋಗ್ಯ ಸರಿಯಿಲ್ಲ ಎಂದಿದ್ದಾನೆ. ಅಲ್ಲದೆ, ಪತ್ನಿಯಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿದಾಗ, ಅನುಮಾನಗೊಂಡ ಪತ್ನಿ, ಗಂಡನ ಬಳಿ ನಿಜ ಹೇಳಿ ಎಂದು ದುಂಬಾಲು ಬಿದ್ದಾಗ ಸತ್ಯಾಂಶವನ್ನು ಭಾಸ್ಕರ್​ ಹೊರಹಾಕಿದ್ದಾನೆ.
ನಾನೊಬ್ಬ ಗೇ (ಸಲಿಂಗಕಾಮಿ). ಅಮೆರಿಕದಲ್ಲಿ ನನಗೊಬ್ಬ ಬಾಯ್​ಫ್ರೆಂಡ್ ಇದ್ದಾನೆ. ಅಮೆರಿದಲ್ಲಿ ಇದೆಲ್ಲ ಸಾಮನ್ಯ. ಹೇಳಬೇಕೆಂದರೆ ನನಗೆ ಹೆಣ್ಣೆಂದರೆ ಇಷ್ಟವಿಲ್ಲ. ನನ್ನ ಬಾಯ್​ಫ್ರೆಂಡ್​ಗಾಗಿ ನಾನು ಮದುವೆಯಾಗಿದ್ದೇನೆ. ಅಮೆರಿಕಕ್ಕೆ ತೆರಳಿದ ಬಳಿಕ ನಿನ್ನನ್ನು ಅವನಿಗೆ ಬಿಟ್ಟುಕೊಡುವೆ. ಮೂವರು ಸೇರಿ ಎಂಜಾಯ್​ ಮಾಡೋಣ ಎಂದಿದ್ದಾನೆ.​ ಅಮೆರಿಕದಲ್ಲಿ ವಾಸ, ಒಳ್ಳೆಯ ಉದ್ಯೋಗ, ಕೈತುಂಬಾ ಸಂಬಳ ಅದ್ಧೂರಿ ಜೀವನ ಎಂದೆಲ್ಲಾ ಕನಸು ಕಟ್ಟಿಕೊಂಡು, ಉತ್ಸಾಹದಿಂದಲೇ ಮದುವೆಯಾಗಿ, ಮೊದಲ ರಾತ್ರಿಯ ದಿನದ ಮಧುರ ಕ್ಷಣಗಳಿಗೆ ಎದುರು ನೋಡುತ್ತಿದ್ದ ಯುವತಿಗೆ ಗಂಡನ ಮಾತುಕೇಳಿ ಒಂದು ಕ್ಷಣ ಕುಸಿದು ಬಿದ್ದಿದ್ದಾಳೆ.
ಮದುವೆಯಾದ ನಾಲ್ಕು ದಿನದಲ್ಲೇ ನಾನೊಬ್ಬ ನಪುಸಂಕ ಎಂದು ಹೇಳಿಕೊಂಡಿರುವ ಭಾಸ್ಕರ್​, ನನ್ನನ್ನು ಪಾಲಕರು ಒತ್ತಾಯ ಮಾಡಿದ್ದಕ್ಕಾಗಿ ನಾನು ನಿನ್ನನ್ನು ಮದುವೆಯಾದೆನು. ನಿನ್ನ ಮಗನಿಗೆ 31 ವರ್ಷ ಆಯ್ತು ಇನ್ನು ಏಕೆ ಮದುವಯಾಗಿಲ್ಲ ಎಂದು ನಮ್ಮ ಮನೆಯವರನ್ನು ಎಲ್ಲರೂ ಕೇಳುತ್ತಿದ್ದರು. ಹೀಗಾಗಿ ಮ್ಯಾರೇಜ್​ ಸ್ಟೇಟಸ್​ಗಾಗಿ ನಾನು ಮದುವೆಯಾದೆ. ನಾನೇನು ಬೆದರಿಕೆ ಹಾಕುವುದಿಲ್ಲ. ಅಮೆರಿಕದಲ್ಲಿ ನಾವಿಬ್ಬರು ಲಿವಿಂಗ್​ ರಿಲೇಶನ್​ನಲ್ಲಿ ಇರೋಣ ಎಂದು ಹೇಳಿದ್ದಾಗಿ ಸಂತ್ರಸ್ತ ಯುವತಿ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ:VIDEO| ಒಳ್ಳೆಯವನಂತೆ ನಟಿಸಿ ಮಹಿಳೆಯರಿಗೆ ಮೋಸ: ಸರ್ಕಾರಿ ವೈದ್ಯನ ವಿರುದ್ಧ ತಿರುಗಿಬಿದ್ದ ಪತ್ನಿ!
ಇನ್ನು ಎಲ್ಲ ಗೊತ್ತಿದ್ದರೂ ಅದನ್ನು ಮುಚ್ಚಿಟ್ಟು ನಿಮ್ಮ ಮಗನಿಗೆ ನನ್ನ ಮಗಳ ಜತೆ ಏಕೆ ಮದುವೆ ಮಾಡಿದ್ರಿ ಎಂದು ಭಾಸ್ಕರ್​ ಪಾಲಕರನ್ನು ಪ್ರಶ್ನಿಸಿದ್ರೆ ಬೆದರಿಕೆವೊಡ್ಡುತ್ತಾರೆ ಎಂದು ಯುವತಿಯ ಪಾಲಕರು ಆರೋಪಿಸಿದ್ದಾರೆ. ನೀವು ಇದನ್ನೆಲ್ಲಾ ಬಹಿರಂಗ ಪಡಿಸಿದ್ರೆ ಅಥವಾ ಪೊಲೀಸ್​ ಠಾಣೆಗೆ ದೂರು ನೀಡಿದರೆ, ನಿಮ್ಮನ್ನು ಸರ್ವನಾಶ ಮಾಡುತ್ತೇವೆ. ನಮಗೆ ದೊಡ್ಡ ದೊಡ್ಡ ರೌಡಿಗಳ ಸಂಪರ್ಕವಿದೆ ಎಂದು ಬೆದರಿಸಿದ್ದಾಗಿ ಯುವತಿ ಮಾಧ್ಯಮವೊಂದರಲ್ಲಿ ಬಹಿರಂಗಪಡಿಸಿದ್ದಾಳೆ.
ಮದುವೆಯಾದ ಸ್ವಲ್ಪ ದಿನದಲ್ಲೇ ಭಾಸ್ಕರ್​ ಅಮೆರಿಕಕ್ಕೆ ಹಾರಿದ್ದಾನೆ. ಬಳಿಕ ಒಂದು ವಾರ ಯುವತಿಯೊಂದಿಗೆ ಫೋನ್​ ಸಂಪರ್ಕದಲ್ಲಿದ್ದ ನಂತರ ಸಂಪರ್ಕ ಕಡಿದುಕೊಂಡಿದ್ದಾನೆ. ಇದೀಗ ಎರಡು ತಿಂಗಳಾದರೂ ಆತನ ಸುಳಿವಿಲ್ಲ. ಅಲ್ಲದೆ, ಯುವತಿ ಮಾವನ ಮನೆಗೆ ಹೋದರೆ ಏನೇನೂ ನೆಪ ಹೇಳಿ ತವರಿಗೆ ಕಳುಹಿಸುತ್ತಾರೆ. ಅಲ್ಲದೆ, ಇನ್ನು ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯ ಮಾಡುತ್ತಾರೆ. ವಿಚ್ಛೇದನ ನೀಡುವಂತೆ ನಮ್ಮ ಮಾವ ಹಿಂಸಿಸುತ್ತಿದ್ದಾರೆ ಎಂದು ದೂರಿದ್ದಾಳೆ.
ಇದೀಗ ಯುವತಿ ಪಾಲಕರು ಗುಂಟೂರು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ನ್ಯಾಯ ದೊರಕಿಸಿ ಕೊಡುವಂತೆ ಗುಂಟೂರು ಗ್ರಾಮಾಂತರ ಪೊಲೀಸ್​ ವರಿಷ್ಠಾಧಿಕಾರಿ ಬಳಿ ಮನವಿ ಮಾಡಿಕೊಂಡಿದ್ದಾರೆ.(ಏಜೆನ್ಸೀಸ್​)
ಇದನ್ನೂ ಓದಿ:ಹೆಂಡ್ತಿಗೆ ಬೇಲ್‌ ಸಿಕ್ರೆ, ಗಂಡನನ್ನು ಮನೆಗೆ ಕಳಿಸಿದ ಪೊಲೀಸರು! ಮುಂದೇನಾಯ್ತು?
ಪ್ರಯೋಗ ಸಿದ್ಧಾಂತಕ್ಕೆ ಶಿವಪ್ರಸಾದ್ ಶ್ರೀಕಾರ ; ಸಿದ್ಧಾರ್ಥ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಾಲಕೃಷ್ಣ.ಪಿ.ಶೆಟ್ಟಿ ಬಣ್ಣನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 1 =
Remember me
