ಬಳ್ಳಾರಿ:ಕರೊನಾ ಸೋಂಕು ಯಾವ ರೀತಿ ಹೇಗೆ ಬರುತ್ತದೆ ಎಂದು ತಿಳಿಯುವುದು ಅಸಾಧ್ಯವಾದ ಮಾತು. ಇದೇ ಕಾರಣಕ್ಕೆ ಯಾವುದೇ ಸಭೆ, ಸಮಾರಂಭಗಳನ್ನು ಏರ್ಪಡಿಸಬೇಡಿ ಎಂದು ಸರ್ಕಾರ ಹೇಳುತ್ತಲೇ ಬಂದಿದೆ.
ನಂತರ ನಿಯಮ ಸ್ವಲ್ಪ ಸಡಿಲಿಕೆಗೊಳಿಸಿ ಸಭೆ ಸಮಾರಂಭಗಳಿಗೆ ಕೆಲವೊಂದು ಷರತ್ತು ವಿಧಿಸಿ ಅನುಮತಿಯನ್ನೇನೋ ಸರ್ಕಾರ ನೀಡಿತು. ಅದರೆ ಇದೇ ಸಭೆ-ಸಮಾರಂಭಗಳೇ ಇದೀಗ ಎಷ್ಟೋ ಜನರಿಗೆ ಮುಳುವಾಗತೊಡಗಿದೆ.
ಇದನ್ನೂ ಓದಿ:ಕರೊನಾ ಶಂಕಿತ ಮೃತಪಟ್ಟರೆ ವರದಿಗೆ ಕಾಯಬೇಕಿಲ್ಲ: ಕೇಂದ್ರ ಹೇಳಿರುವುದೇನು?
ಅಂಥದ್ದೇ ಒಂದು ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿಯಿಂದ ವರದಿಯಾಗಿದೆ. ಕೆಲ ದಿನಗಳ ಹಿಂದೆ ಕಂಪ್ಲಿ ಪೊಲೀಸ್ ಠಾಣೆ ಪಿಎಸ್‌ಐ ಅವರಿಗೆ ಗಂಡುಮಗು ಜನಿಸಿತ್ತು. ಮಗನನ್ನು ಕಂಡು ತುಂಬಾ ಖುಷಿಯಾಗಿದ್ದ ಪಿಎಸ್‌ಐ ಕಾರಣ ನಗರದ ಹೊರ ವಲಯದ ಸಮುದಾಯ ಭವನದಲ್ಲಿ ಪಾರ್ಟಿ ಕೊಟ್ಟಿದ್ದರು. ಅದರಲ್ಲಿ ಹಲವಾರು ಮಂದಿ ಭಾಗಿಯಾಗಿದ್ದರು.
ಪಾರ್ಟಿ ಮುಗಿಸಿ ಕೆಲ ದಿನ ಕಳೆದಂತೆ ಅದರಲ್ಲಿ ಭಾಗಿಯಾಗಿದ್ದ ಅದೇ ಠಾಣೆಯ ಕಾನ್ಸ್‌ಟೆಬಲ್‌ ಒಬ್ಬರಿಗೆ ಕರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ. ಪರೀಕ್ಷೆ ಮಾಡಿದಾಗ ಪಾಸಿಟಿವ್‌ ಬಂದಿದೆ. ನಂತರ ಅವರ ಟ್ರಾವಲ್‌ ಹಿಸ್ಟರಿ ನೋಡಿದಾಗ ಪಾರ್ಟಿಗೆ ಹೋಗಿದ್ದ ವಿಷಯ ಬೆಳಕಿಗೆ ಬಂದಿದೆ.
ಠಾಣೆಯ ಬಹುತೇಕ ಎಲ್ಲರೂ ಪಾರ್ಟಿಗೆ ಹೋಗಿದ್ದರಿಂದ ಸೋಂಕಿನ ಭೀತಿಯಿಂದ ಇದೀಗ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಉಳಿದವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಕೆಲಸ ಕಳೆದುಕೊಳ್ಳಲಿದ್ದಾರೆ ಒಂದೇ ಕಂಪನಿಯ 18 ಸಾವಿರ ಇಂಜಿನಿಯರ್‌ಗಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 + fourteen =
Remember me
