ಪ್ರಸ್ತುತ ವೆಸ್ಟ್ ಇಂಡೀಸ್​ವಿರುದ್ಧ ಟೆಸ್ಟ್​ ಮ್ಯಾಚ್​ನ ನಾಯಕತ್ವ ವಹಿಸಿಕೊಂಡಿದ್ದ ಇಂಗ್ಲೆಂಡ್​ ತಂಡದ ಕ್ಯಾಪ್ಟನ್ ಬೆನ್​ ಸ್ಟೋಕ್ಸ್​, ಇಂದು ಎರಡನೇ ಇನ್ನಿಂಗ್ಸ್​ನ ಮೂರನೇ ಮ್ಯಾಚ್​ನಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಜಂಟಿ ಮೂರನೇ ವೇಗದ ಅರ್ಧಶತಕ ಸಿಡಿಸುವ ಮೂಲಕ ಬೆನ್​ ದಿಗ್ಗಜರ ಸಾಲಿಗೆ ಸೇರಿದ್ದಾರೆ. ಈ ಐತಿಹಾಸಿಕ ದಾಖಲೆ ನಿರ್ಮಿಸಿದ ಸ್ಟೋಕ್ಸ್​​ಗೆ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ತಡೆಗೋಡೆಗೆ ಡಿಕ್ಕಿ ಹೊಡೆದು ಕಾರು ಪಲ್ಟಿ : ಮಕ್ಕಳ ಸಹಿತ 6 ಪ್ರಯಾಣಿಕರು ಪಾರು
Fastest fifties in Test Matches (by balls)
21 – Misbah Ul Haq v 🇦🇺, 201423 – David Warner v 🇵🇰, 201724 – Jacques Kallis v 🇿🇼, 200524 – Ben Stokes v 🏝️, 2024*25 – Shillingford v 🇳🇿, 2014#ENGvWI
— CricBeat (@Cric_beat)July 28, 2024

ಈ ಹಿಂದಿನಿಂದಲೂ ಇಂತಹ ದಾಖಲೆಗಳನ್ನು ನಿರ್ಮಿಸುವಲ್ಲಿ ಮುಂದಿರುವ ಇಂಗ್ಲೆಂಡ್​ ಆಟಗಾರರು, ಅಭಿಮಾನಿಗಳ ಹುಬ್ಬೇರಿಸುವಲ್ಲಿ ನಿಸ್ಸಿಮರು ಎಂದೇ ಹೇಳಬಹುದು. ಇಂದು ನಡೆದ ವೆಸ್ಟ್ ಇಂಡೀಸ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಕೇವಲ 24 ಎಸೆತಗಳಲ್ಲಿ 9 ಬೌಂಡರಿ, ಒಂದು ಸಿಕ್ಸರ್​ ಸಿಡಿಸುವ ಮೂಲಕ ವೇಗದ ಅರ್ಧಶತಕ ಬಾರಿಸಿದರು. ಅಂತಿಮವಾಗಿ 27 ಎಸೆತಕ್ಕೆ 57 ರನ್​ ಕಲೆಹಾಕಿದ ಸ್ಟೋಕ್ಸ್​, ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿ ಹೊರಹೊಮ್ಮಿದರು.
ಇಂಗ್ಲೆಂಡ್ ಪರ ಓಪನಿಂಗ್ ಬಂದ ಸ್ಟೋಕ್ಸ್​ ಅರ್ಧಶತಕ (57)  ಬಾರಿಸುವ ಮೂಲಕ ವೆಸ್ಟ್​ ಇಂಡೀಸ್​ ಬೌಲರ್​ಗಳಿಗೆ ಬೆವರಿಳಿಸಿದ್ದಾರೆ. 10 ವಿಕೆಟ್​ಗಳ ಜಯ ಸಾಧಿಸಿದ ಇಂಗ್ಲೆಂಡ್​, 3-0 ಅಂತರದಿಂದ ಕೆರಿಬಿಯನ್​ ಪಡೆಯನ್ನು ಕ್ಲೀನ್ ಸ್ವೀಪ್​ ಮಾಡಿದೆ. ಸರಣಿಯಲ್ಲಿ 7 ವಿಕೆಟ್‌ಗಳನ್ನು ಕಬಳಿಸಿದ ಆರ್ಕ್ ವುಡ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × three =
Remember me
