ಪಶ್ಚಿಮ ಬಂಗಾಳ:ಸ್ವಲ್ಪ ಸಮಯಗಳ ಕಾಲ ಸೋಶಿಯಲ್ ಮೀಡಿಯಾ ತಡಕಾಡಿದರೂ ಅಸನ್ಸೋಲ್ ನಿವಾಸಿ ಆಶಿಶ್ ಕುಂದು ಮತ್ತು ಅವರ ಪತ್ನಿ ರೂಬಿ ಕುಂದು ಹೆಸರು ಕಾಣಸಿಗುತ್ತದೆ. ಈ ದಂಪತಿಗಳ ಹೆಸರು ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವುದಕ್ಕೆ ಕಾರಣವೂ ಇದೆ. ಅದೇನಪ್ಪಾ ಅಂತೀರಾ?, ಕೇವಲ ಒಂದು ತಿಂಗಳೊಳಗೆ ಆಶಿಶ್ ಕೆಲವು ಮೇಕಪ್ ವಸ್ತುಗಳನ್ನು ಸ್ವತಃ ತಯಾರಿಸಿ, ಇನ್ನು ಕೆಲವನ್ನು ಮಾರುಕಟ್ಟೆಯಿಂದ ತಂದು ಅಬಿರ್ ದೆ ಎಂಬ 9 ವರ್ಷದ ಬಾಲಕನಿಗೆ ಅದ್ಭುತವಾದ ಮೇಕಪ್ ಮಾಡಿದ್ದಾರೆ.
ಹೌದು, ಬಾಲಕನಿಗೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿರುವ ವಿಗ್ರಹ ಬಾಲರಾಮನಂತೆಯೇ ಮೇಕಪ್ ಮಾಡಲಾಗಿದೆ. ಮೇಕಪ್ ಹೇಗಿದೆಯೆಂದರೆ ಥೇಟ್ ರಾಮಲಲ್ಲಾ ಮೂರ್ತಿಯ ಹಾಗೆ ಕಾಣುತ್ತಾನೆ ಬಾಲಕ. ಆಶಿಶ್ ಪ್ರಕಾರ ಜನವರಿ 22, 2024 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯ ಸಮಯದಿಂದಲೂ ರಾಮ ಲಲ್ಲಾನ ವಿಗ್ರಹದ ರೀತಿಯಲ್ಲೇ ಮೇಕಪ್ ಮಾಡುವ ಬಯಕೆಯನ್ನು ಹೊಂದಿದ್ದರು. ಆದರೆ ಕಾರಣಾಂತರಗಳಿಂದ ಅವರ ಆಸೆ ಇದುವರೆಗೂ ಈಡೇರಲಿಲ್ಲ. ಹಾಗೆಯೇ ಇಡೀ ದೇಶವೇ ತಿರುಗಿ ನೋಡುವಂತೆ ರಾಮಲಲ್ಲಾನಿಗಾಗಿ ಏನಾದರೂ ಮಾಡಬೇಕು ಎಂಬ ಆಲೋಚನೆ ಅವರ ಮನಸ್ಸಿನಲ್ಲಿ ಯಾವಾಗಲೂ ಬರುತ್ತಿತ್ತು.

ಏತನ್ಮಧ್ಯೆ, ಶ್ರೀರಾಮನ ಕೃಪೆಯಿಂದ ಆಶಿಶ್ 9 ವರ್ಷದ ಅಬೀರ್ ಅನ್ನು ಭೇಟಿಯಾದರು. ಆಶಿಶ್ ಅವರು ಅಬೀರ್ ಅವರ ಕುಟುಂಬವನ್ನು ಭೇಟಿಯಾಗಿ ಅಬಿರ್ ಅವರಿಗೆ ರಾಮಲಲ್ಲಾ ರೀತಿಯಲ್ಲೇ ಮೇಕಪ್ ಮತ್ತು ಲುಕ್ ನೀಡುವ ಬಯಕೆಯನ್ನು ವ್ಯಕ್ತಪಡಿಸಿದರು. ಅಬಿರ್‌ನ ಮನೆಯವರು ತನ್ನ ಆಫರ್ ತಿರಸ್ಕರಿಸಬಾರದು ಎಂದು ಯೋಚಿಸಿ ಕೈ ಜೋಡಿಸಿ ಮನವಿ ಮಾಡಿದರು. ಆಶಿಶ್ ನ ಪ್ರಸ್ತಾಪಕ್ಕೆ ಅಬೀರ್ ಮನೆಯವರು ಒಪ್ಪಿದರು. ಇದಾದ ನಂತರ ಪತಿ-ಪತ್ನಿ ಇಬ್ಬರೂ ತಮ್ಮ ತಯಾರಿ ಆರಂಭಿಸಿದರು.
ಒಂದು ತಿಂಗಳ ತಯಾರಿಆಶಿಶ್ ಮತ್ತು ಅವರ ಪತ್ನಿ ರೂಬಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ. ಹಗಲಿನಲ್ಲಿ ತನ್ನ ಪಾರ್ಲರ್‌ನ ಕೆಲಸವನ್ನು ನೋಡಿಕೊಳ್ಳುತ್ತಿದ್ದ ಆಶಿಶ್, ರಾತ್ರಿ ವೇಳೆ ಅಬೀರ್‌ಗೆ ರಾಮಲಲ್ಲಾ ರೂಪವನ್ನು ನೀಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಸುಮಾರು ಒಂದು ತಿಂಗಳೊಳಗೆ, ಆಶಿಶ್ ಮತ್ತು ರೂಬಿ ಅವರು ಸಿದ್ಧಪಡಿಸಿದ ಮೇಕಪ್ ವಸ್ತುಗಳೊಂದಿಗೆ ಅಬಿರ್‌ಗೆ ಅದ್ಭುತ ಲುಕ್ ನೀಡುವಲ್ಲಿ ಅಂತಿಮವಾಗಿ ಯಶಸ್ವಿಯಾದರು. ಅಬೀರ್ ಧರಿಸಿರುವ ಎಲ್ಲಾ ಆಭರಣಗಳು ಭಾರವಾಗದಂತೆ ಮಾಡಲ್ಪಟ್ಟಿದೆ ಎಂದು ಆಶಿಶ್ ಹೇಳಿದರು. ಆಶಿಶ್ ಅಬೀರ್ ನನ್ನು ಸಂಪೂರ್ಣವಾಗಿ ತಯಾರು ಮಾಡಿ ಜನರ ಮುಂದೆ ತಂದಾಗ ಅಬೀರ್ ನೋಡಿದವರೆಲ್ಲ ಬೆಚ್ಚಿ ಬಿದ್ದಿದ್ದರು. ಏಕೆಂದರೆ ಆ ಬಾಲಕನ್ನು ನೋಡಿದಾಗ ಪ್ರತಿಯೊಬ್ಬರಿಗೂ ಪ್ರತ್ಯಕ್ಷವಾಗಿ ಅಯೋಧ್ಯೆಯ ಶ್ರೀ ರಾಮಲಲ್ಲಾ ನೋಡಿದಂತೆಯೇ ಆಯಿತು.

ತಕ್ಷಣ ಎಲ್ಲರೂ ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ರಾಮಲಲ್ಲಾನ ಹಾಗೆ ಕಾಣುವ ಬಾಲಕನ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಪ್ರಾರಂಭಿಸಿದರು. ಸದ್ಯ ಬಾಲಕನ ರಾಮಲಲ್ಲಾ ಮೇಕಪ್ ವಿಡಿಯೋಗಳು ಮತ್ತು ಫೋಟೋಗಳು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಲು ಪ್ರಾರಂಭಿಸಿವೆ.
ಪರಿಸ್ಥಿತಿ ಸುಧಾರಿಸದಿದ್ದರೆ ಬೆಂಗಳೂರಿನ ನಂತರ ಈ ನಗರಗಳಲ್ಲಿ ನೀರಿಗೆ ಬರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + eleven =
Remember me
