ಕೋಲ್ಕತಾ:ಪಶ್ಚಿಮ ಬಂಗಾಳದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ರಾಯಗಂಜ್, ಬಾಗ್ಡಾ ಮತ್ತು ರಾಣಾಘಾಟ್ ದಕ್ಷಿಣ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿದೆ.
ಇದನ್ನು ಓದಿ:ಅಟಲ್​ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರೂ ತುರ್ತು ಪರಿಸ್ಥಿತಿ ಹೇರುತ್ತಿದ್ದರು; ಸಂಜಯ್​ ರಾವುತ್​​​ ಹೀಗೆಳಿದ್ದೇಕೆ?
ಇದುವರೆಗಿನ ಮತಗಳ ಎಣಿಕೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ ಮೂರು ಸ್ಥಾನಗಳಲ್ಲಿ ಗೆದ್ದಿದ್ದು, ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ ಎಂದು ಚುನಾವಣಾ ಆಯೋಗದ ಅಧಿಕೃತ ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ. ಉತ್ತರ ದಿನಾಜ್‌ಪುರ ಜಿಲ್ಲೆಯ ರಾಯಗಂಜ್​ನಲ್ಲಿ ಕಲ್ಯಾಣಿ ಅವರು ಭಾರತೀಯ ಜನತಾ ಪಕ್ಷದ ಪ್ರತಿಸ್ಪರ್ಧಿ ಮಾನಸ್ ಕುಮಾರ್ ಘೋಷ್ ಅವರ ವಿರುದ್ಧ 50,077 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ಬಾಗ್ಡಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಟಿಎಂಸಿ ಅಭ್ಯರ್ಥಿ ಮಧುಪರ್ಣಾ ಠಾಕೂರ್​​​ ಅವರು ಟಿಎಂಸಿ ರಾಜ್ಯಸಭಾ ಸಂಸದ ಮತ್ತು ಮಟುವಾ ನಾಯಕಿ ಮಮತಾಬಾಲಾ ಠಾಕೂರ್ ಅವರ ಪುತ್ರಿ. ಮಧುಪರ್ಣಾ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಬಿನಯ್ ಕುಮಾರ್ ಬಿಸ್ವಾಸ್ ವಿರುದ್ಧ 33,455 ಮತಗಳ ಅಂತರದಿಂದ ಗೆದ್ದಿದ್ದಾರೆ.
ಉತ್ತರ 24 ಪರಗಣದ ರಾಣಾಘಾಟ್ ದಕ್ಷಿಣದಲ್ಲಿ ಟಿಎಂಸಿಯ ಮುಕುತ್ ಮಣಿ ಅಧಿಕಾರಿ ಬಿಜೆಪಿ ಅಭ್ಯರ್ಥಿ ಮನೋಜ್ ಕುಮಾರ್ ಬಿಸ್ವಾಸ್ ಅವರನ್ನು 39,048 ಮತಗಳಿಂದ ಸೋಲಿಸಿದರೆ, ಟಿಎಂಸಿಯ ನಾಮನಿರ್ದೇಶಿತ ಅಭ್ಯರ್ಥಿ ಸುಪ್ತಿ ಪಾಂಡೆ ಅವರು ಕೋಲ್ಕತಾದ ಮಾಣಿಕ್ತಾಲಾದಲ್ಲಿ ಪ್ರತಿಸ್ಪರ್ಧಿ ಬಿಜೆಪಿಯ ಕಲ್ಯಾಣ್ ಚೌಬೆಗಿಂತ 31,441 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ ಎನ್ನಲಾಗಿದೆ.
ವಿಧಾನಸಭಾ ಚುನಾವಣೆ 2021ರಲ್ಲಿ ಬಿಜೆಪಿ ರಾಣಾಘಾಟ್ ದಕ್ಷಿಣ ಮತ್ತು ಬಾಗ್ಡಾ ಸೀಟುಗಳನ್ನು ಗೆದ್ದಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಯಗಂಜ್ ಕ್ಷೇತ್ರ ಕೂಡ ಬಿಜೆಪಿ ತೆಕ್ಕೆಗೆ ಸೇರಿತ್ತು. 2021ರಲ್ಲಿ ಮಾಣಿಕ್ತಾಲಾವನ್ನು ಮಾತ್ರ ತೃಣಮೂಲ ಕಾಂಗ್ರೆಸ್​​​​ ಗೆದ್ದುಕೊಂಡಿತು. ಜುಲೈ 10ರಂದು ಪಶ್ಚಿಮ ಬಂಗಾಳದ ಮಾಣಿಕ್ತಾಲಾ, ಬಾಗ್ಡಾ, ರಾಣಾಘಾಟ್ ದಕ್ಷಿಣ ಮತ್ತು ರಾಯಗಂಜ್ ವಿಧಾನಸಭಾ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ಉಪಚುನಾವಣೆಗಳು ನಡೆಯಿತು. (ಏಜೆನ್ಸೀಸ್​​)
ರಾಹುಲ್​ಗಾಂಧಿ ಹೇಳಿದ್ದು ಸರಿ ಎಂದಿದ್ದೇಕೆ ಅಮೇಥಿ ಸಂಸದ ಕಿಶೋರಿ ಲಾಲ್ ಶರ್ಮಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 8 =
Remember me
