ಪಶ್ಚಿಮ ಬಂಗಾಳ: ಭಾರೀ ದುರಂತವೊಂದನ್ನ ತಪ್ಪಿಸಿ ರೈಲಿನಲ್ಲಿದ್ದ ಪ್ರಯಾಣಿಕರನ್ನ ರಕ್ಷಿಸಲು ಪುಟ್ಟ ಬಾಲಕನೊಬ್ಬ ಸೂಪರ್​​​ ಪ್ಲ್ಯಾನ್​​​ ಒಂದನ್ನ ಮಾಡಿದ್ದಾನೆ. ಏನು ಅಂತೀರಾ?12 ವರ್ಷದ ಬಾಲಕನೊಬ್ಬ ತನ್ನ ಕೆಂಪು ಟೀ ಶರ್ಟ್ ಅನ್ನು ಧ್ವಜವಾಗಿ ಬಳಸಿ ಹಾನಿಗೊಳಗಾದ ರೈಲು ಹಳಿಗಳ ಭಾಗಕ್ಕೆ ವೇಗವಾಗಿ ಚಲಿಸುತ್ತಿರುವುದನ್ನ ತಡೆ ಹಿಡಿದಿದ್ದಾನೆ. ಕಳೆದ ಗುರುವಾರ ಪಶ್ಚಿಮ ಬಂಗಾಳದ ಮಾಲ್ಡಾದ ರೈಲ್ವೆ ಯಾರ್ಡ್ ಬಳಿ ಈ ಘಟನೆ ನಡೆದಿದ್ದು, ಚಾಲಕನಿಗೆ ಎಚ್ಚರಿಕೆ ನೀಡುವ ಮೂಲಕ ದೊಡ್ಡ ರೈಲು ಅಪಘಾತವನ್ನೇ ಈ ಪುಟ್ಟ ಬಾಲಕ ತಪ್ಪಿಸಿದ್ದಾನೆ.
ಮುರ್ಸಲೀನ್ ಶೇಖ್ ಎಂಬ ಹುಡುಗ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕನ ಮಗ. ಘಟನೆ ವೇಳೆ ಮುಸಲೀನ್ ಕೆಲ ಕಾರ್ಮಿಕರೊಂದಿಗೆ ಹೊಲದಲ್ಲಿ ಕಾಲ ಕಳೆಯುತ್ತಿದ್ದ.
ರೈಲ್ವೆ ಹಳಿಗಳ ಒಂದು ಭಾಗ ಹಾನಿಗೊಳಗಾಗಿರುವುದನ್ನ ಕಂಡು ತಕ್ಷಣ ಆ ಹುಡುಗ ತನ್ನ ಕೆಂಪು ಟೀ ಶರ್ಟ್ ತೆಗೆದು ಮುಂದೆ ಬರುತ್ತಿದ್ದ ರೈಲಿಗೆ ಕೈ ಬೀಸತೊಡಗಿದ್ದಾನೆ. ರೈಲಿನ ಲೊಕೊಮೊಟಿವ್ ಪೈಲಟ್ ಸಿಗ್ನಲ್ ಗುರುತಿಸಿ ತುರ್ತು ಬ್ರೇಕ್ ಹಾಕಿದ್ದರಿಂದ ಭಾರೀ ಅಪಘಾತವನ್ನ ತಪ್ಪಿಸಿದ್ದಾನೆ.
ಘಟನೆಯ ಕುರಿತು ಮಾತನಾಡಿದ ಈಶಾನ್ಯ ಗಡಿ ರೈಲ್ವೆಯ ವಕ್ತಾರ ಸಬ್ಯಸಾಚಿ ಡಿ, ಮಾಲ್ಡಾದ ರೈಲ್ವೆ ಯಾರ್ಡ್​​​ನಲ್ಲಿ 12 ವರ್ಷದ ಮಗು ತನ್ನ ಕೆಂಪು ಶರ್ಟ್ ಅನ್ನು ರೈಲಿಗೆ ಬೀಸಿದ್ದರಿಂದ ಚಾಲಕ ತಕ್ಷಣವೇ ರೈಲನ್ನ ನಿಲ್ಲಿಸಿ ಹಾನಿಗೊಳಗಾದ ಹಳಿಗಳ ಮೇಲೆ ರೈಲು ಚಲಿಸೋದನ್ನ ತಡೆ ಹಿಡಿದಿದ್ದಾನೆ.
ಮಳೆಯಿಂದಾಗಿ ರೈಲು ಹಳಿ ಹಾಳಾಗಿದ್ದರಿಂದ ಮಗು ಈ ರೀತಿ ಮಾಡಿದೆ.ಇದರಿಂದಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಜನರ ಜೀವ ಉಳಿದಂತಾಗಿದೆ ಎಂದು ಮಗುವಿನ ಕುರಿತಂತೆ ಶ್ಲಾಘನೆಯ ಮಾತುಗಳನ್ನಾಡಿದ್ದಾರೆ.
ಇನ್ನು ಹಾನಿಗೊಳಗಾದ ಹಳಿಯ ಭಾಗವನ್ನು ಸರಿಪಡಿಸಿ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × one =
Remember me
