ಕೋಲ್ಕತ:ಭಾರತೀಯ ನಿರಾಶ್ರಿತರ ಹಿತಾಸಕ್ತಿಗಳನ್ನು ನೀವು ಏಕೆ ನೋಯಿಸುತ್ತಿದ್ದೀರಿ? ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕೇಂದ್ರ ಗೃಹ ಸಚಿವ ಅಮಿತ್​ ಷಾ ಪ್ರಶ್ನೆ ಮಾಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಗಲಭೆ ಸೃಷ್ಟಿಸುವುದು, ರೈಲುಗಳನ್ನು ಸುಡುವುದು ಯಾವ ನ್ಯಾಯ? ಇದೇ ಕಾರಣಕ್ಕೆ ಕಳೆದ ವಾರ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ 43 ಜನ ಪ್ರಾಣ ಬಿಡಬೇಕಾಯಿತು ಎಂದರು.
ಕಾನೂನಿನ ವಿಮರ್ಶಕಿಯಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ದೀದಿ ಅವರ ಪ್ರತಿಭಟನೆಯಿಂದ ಯಾವುದೇ ಪ್ರಯೋಜನವಿಲ್ಲ. “ಮಮತಾ ದೀದಿ ನಿಮ್ಮಿಂದ ಇದನ್ನು ತಡೆಯಲು ಸಾಧ್ಯವಿಲ್ಲ” ಎಂದು ವ್ಯಂಗ್ಯವಾಡಿದರು.
ನೆರೆ ರಾಷ್ಟ್ರಗಳಲ್ಲಿರುವ ಹಿಂದು ಸಮುದಾಯ ಭಯದಲ್ಲಿದೆ. ಅವರಿಗೆ ಬೆದರಿಕೆ, ಕೊಲೆ ಹಾಗೂ ಅತ್ಯಾಚಾರದಂತಹ ಕೃತ್ಯಗಳ ಬಗ್ಗೆ ಭಯವಿದೆ. ಅಂತಹವರಿಗೆ ಭಾರತೀಯ ಪೌರತ್ವ ನೀಡುವದರಲ್ಲಿ ತ್ತಪ್ಪೇನಿದೆ ಎಂದು ಪ್ರಶ್ನಿಸಿದ ಷಾ, ನೀವು ಭಾರತದ ಒಳನುಸುಳುವವರ ಬಗ್ಗೆ ಮಾತ್ರ ಏಕೆ ಕಾಳಜಿ ವಹಿಸುತ್ತೀರಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಕೋಲ್ಕತ್ತಾದಲ್ಲಿ ಇಂದು ಅಮಿತ್​ ಷಾ ಬೃಹತ್​ ರ‍್ಯಾಲಿ: ತೃಣಮೂಲ, ಎಡ ಪಕ್ಷಗಳಿಂದ ಪ್ರತಿಭಟನೆಗೆ ಕರೆ
ಸ್ಥಳಿಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಕೋಲ್ಕತಕ್ಕೆ ಬಂದಿಳಿದ ಅಮಿತ್​ ಷಾ ಅವರು ಕೆಲ ವಿದ್ಯಾರ್ಥಿಗಳಿಂದ ಪ್ರತಿಭಟನೆ ಎದುರಿಸಬೇಕಾಯಿತು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತೆ ಎಂದು ಭವಿಷ್ಯ ನುಡಿದರು.
“ಬಂಗಾಳಿಗರಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ 18 ಸ್ಥಾನಗಳನ್ನು ಗೆಲ್ಲಿಸಿದ್ದೀರಿ. ಆದರೆ ಮಮತಾ ಹೇಳುತ್ತಿದ್ದರು, ಬಿಜೆಪಿಯವರು ಠೇವಣಿ ಕಳೆದುಕೊಳ್ಳುತ್ತಾರೆ ಎಂದು. ಮಮತಾ ಅವರೇ, 2021ರ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ” ಎಂದರು.
“ಇನ್ನು ಅನ್ಯಾಯ ಸಾಕು” (no more injustice) ಹಾಗೂ “ಅಕ್ಕನಿಗೆ ಹೇಳು” (Didi-ke bolo) ಅಭಿಯಾನಗಳಿಗೆ ಚಾಲನೆ ನೀಡಿದರು. ಈ ಎರಡೂ ಅಭಿಯಾನಗಳಿಗೆ ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಇದಕ್ಕೆ ಸಾರ್ವಜನಿಕರು ಕರೆ ಮಾಡಬಹುದು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + fifteen =
Remember me
