ಕೋಲ್ಕತ್ತ:ದೇಶಾದ್ಯಂತ ಕರೊನಾ ಮಹಾಮಾರಿ ಹೆಚ್ಚುತ್ತಿದೆ. ಕೊವಿಡ್​-19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪೊಲೀಸರಿಗಂತೂ ವೈರಸ್​​​ನಿಂದ ಪಾರಾಗುವುದೇ ದೊಡ್ಡ ಸವಾಲಾಗಿದೆ.
ಮಹಾರಾಷ್ಟ್ರ, ಕರ್ನಾಟಕದಲ್ಲಿ ಹಲವು ಪೊಲೀಸ್​ ಸಿಬ್ಬಂದಿ ಸೋಂಕಿನಿಂದ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಖಾಕಿ ಪಡೆಯಲ್ಲಿ ಸಹಜವಾಗಿ ಆತಂಕ ಮನೆ ಮಾಡಿದೆ. ಹೀಗಿರುವಾಗ ಪಶ್ಚಿಮ ಬಂಗಾಳದ ಕೆಲವು ಪೊಲೀಸರು ಕರೊನಾ ವಿರುದ್ಧ ಹೋರಾಟಕ್ಕೆ ಒಂದು ಹೊಸದಾರಿಯನ್ನೇ ಕಂಡುಕೊಂಡಿದ್ದಾರೆ.
ವೆಸ್ಟ್​ಬೆಂಗಾಲ್​ ಪೊಲೀಸ್​ ಸಿಬ್ಬಂದಿ ಕೊವಿಡ್​-19 ಸೋಂಕನ್ನು ಮಣಿಸಲು ಸಾಸಿವೆ ಎಣ್ಣೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಸಾಸಿವೆ ಎಣ್ಣೆಯ ಬಳಕೆ, ಲಿಂಬೆಹಣ್ಣಿನ ರಸ ಮಿಶ್ರಿತ ಬಿಸಿ ನೀರು ಕುಡಿಯುವುದರಿಂದ ಕರೊನಾ ಸೋಂಕಿನಿಂದ ಗುಣಮುಖರಾಗಬಹುದು. ವೈರಸ್​​ ವಿರುದ್ಧ ಚಿಕಿತ್ಸೆಗೆ ಇವೆಲ್ಲ ತುಂಬ ಪರಿಣಾಮಕಾರಿ ಎಂದು ಪೊಲೀಸರು ಅಧಿಕೃತ ಪ್ರಕಟಣೆಯನ್ನೇ ಹೊರಡಿಸಿಬಿಟ್ಟಿದ್ದಾರೆ.
ಸಿಲಿಗುರಿ ಪೊಲೀಸ್​ ಕಮಿಷನರೇಟ್​ ವ್ಯಾಪ್ತಿಯ ಹಲವು ಸಿಬ್ಬಂದಿ ಇದೇ ಮನೆಮದ್ದುಗಳನ್ನು ಅಳವಡಿಸಿಕೊಂಡು ಕರೊನಾದಿಂದ ಪಾರಾಗಿದ್ದಾರೆ ಎಂದೂ ಕೂಡ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ:ಹಾಡುವಾಗ ಛಿದ್ರಗೊಂಡ ಮೆದುಳಿನ ರಕ್ತನಾಳ: ಸಾವು-ಬದುಕಿನ ನಡುವೆ ಮಹಿಳೆಯ ಹೋರಾಟ
ಕರೊನಾ ಬಾರದಂತೆ ನಿಯಂತ್ರಣ ಮತ್ತು ಸೋಂಕಿನಿಂದ ಮುಕ್ತರಾಗಲು ತಾವು ಹೇಗೆ ಸಾಸಿವೆ ಎಣ್ಣೆ ಮತ್ತು ಇತರ ಮನೆಮದ್ದುಗಳನ್ನು ಬಳಸುತ್ತಿದ್ದೇವೆ ಎಂಬುದನ್ನು ಪೊಲೀಸ್​ ಸರ್ಕ್ಯುಲರ್​​ನಲ್ಲಿ ಅವರು ತಿಳಿಸಿದ್ದು, ಹೀಗಿದೆ…ಬೇಯಿಸಿ ಚೆನ್ನಾಗಿ ಹಿಸುಕಿದ ಆಲೂಗಡ್ಡೆ, ಮೆದುವಾದ ಅನ್ನ ಹಾಗೂ ಸಾಸಿವೆ ಎಣ್ಣೆಯನ್ನು ಜಾಸ್ತಿ ಬಳಕೆ ಮಾಡಿದ ಸಲಾಡ್​ಗಳನ್ನು ಸೇವಿಸಬೇಕು.
ಶೀತ ಮತ್ತು ಕೆಮ್ಮನ್ನು ಗುಣಪಡಿಸಲು ಹಿಂದಿನ ಕಾಲದಿಂದಲೂ ಸಾಸಿವೆ ಎಣ್ಣೆಯನ್ನು ಪರಿಣಾಮಕಾರಿ ಮನೆ ಮದ್ದಾಗಿ ಉಪಯೋಗಿಸಲಾಗುತ್ತದೆ. ಈಗ ಅದೇ ಪದ್ಧತಿಯನ್ನು ಕರೊನಾ ವಿರುದ್ಧ ಹೋರಾಟದಲ್ಲೂ ಅಳವಡಿಸಿಕೊಂಡಿದ್ದೇವೆ ಎಂದು ಸಿಲಿಗುರಿ ಪೊಲೀಸ್​ ಕಮಿಷನರೇಟ್​ ತಿಳಿಸಿದೆ.ಇದನ್ನೂ ಓದಿ:ಅಕ್ಟೋಬರ್​ವರೆಗೂ ಬದಲಾಗೋಲ್ಲ ಪಾಕಿಸ್ತಾನದ ಬಣ್ಣ…
ಸಿಲಿಗುರಿ ಪೊಲೀಸ್​ ಆಯುಕ್ತ ತ್ರಿಪುರಾರಿ ಅರ್ಥವ್​ ಅವರು ಕೂಡ ಕರೊನಾ ವಿರುದ್ಧ ಹೋರಾಟಕ್ಕೆ ಇದೇ ದಾರಿಯನ್ನು ಕಂಡುಕೊಂಡಿದ್ದಾರೆ.
ಉತ್ತರ ಬಂಗಾಳ ಡೆಪ್ಯೂಟಿ ಕಮಿಷನರ್​ ಅವರ ಸಂಬಂಧಿ, ಶ್ವಾನದಳ ನಿರ್ವಹಣಾ ಸಿಬ್ಬಂದಿ ಹಾಗೂ ಅವರ ಪತ್ನಿಗೆ ಕೊವಿಡ್​-19 ಕಾಣಿಸಿಕೊಂಡಿತ್ತು. ಅವರೂ ಕೂಡ ಈ ಮೇಲಿನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸೋಂಕಿನಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)ಇದನ್ನೂ ಓದಿ:ವಿಕ್ಟೋರಿಯಾದಿಂದ ತಪ್ಪಿಸಿಕೊಂಡಿದ್ದ ಕರೊನಾ ಸೋಂಕಿತ ಸಿಕ್ಕಿಬಿದ್ದಿದ್ಹೇಗೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
