ನವದೆಹಲಿ:ಚಂದ್ರನ ಮೇಲೆ ಭೂಮಿ ಖರೀದಿಸಿ ತಮ್ಮ ಮಕ್ಕಳಿಗೆ ಉಡುಗೊರೆ ನೀಡಿದ ಸುದ್ದಿ ಕೇಳಿದ್ದೇವೆ. ಭಾರತದ ಚಂದ್ರಯಾನ-3 ರ ಇತ್ತೀಚಿನ ಯಶಸ್ಸಿನ ನಂತರ, ಇಂತಹ ಸುದ್ದಿಗಳು ಹೆಚ್ಚು ಕುತೂಹಲ ಮೂಡಿಸಿವೆ. ಚಂದ್ರಯಾನ-3 ಯಶಸ್ಸಿನ ನಂತರ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬ ಚಂದ್ರನ ಮೇಲೆ ಎಕರೆಗಟ್ಟಲೆ ಭೂಮಿ ಖರೀದಿಸಿ ತನ್ನ ಪತ್ನಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಪಶ್ಚಿಮ ಬಂಗಾಳದ ಜಾರ್‌ಗ್ರಾಮ್ ಜಿಲ್ಲೆಯ ಸಂಜಯ್ ಮಹತೋ ಮತ್ತು ಅನುಮಿಕಾ ಅವರದು ಪ್ರೇಮ ವಿವಾಹ. ಸಂಜಯ್ ಮಹತೋ ನೀನು ನನ್ನ ಜೊತೆಗಿದ್ದರೆ ಆ ಚಂದಮಾಮವನ್ನು ನಿನಗೆ ಕಾಣಿಕೆಯಾಗಿ ಕೊಡುತ್ತೇನೆ ಎಂದು ಅನುಮಿಕಾಗೆ ಮಾತು ಕೊಟ್ಟಿದ್ದನು.
ಚಂದ್ರಯಾನ-3ರ ಯಶಸ್ಸಿನೊಂದಿಗೆ ಪತ್ನಿಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು, ಸಂಜಯ್ ಅವರ ಜನ್ಮದಿನದಂದು ಪತ್ನಿ ಅನುಮಿಕಾಗೆ ಉಡುಗೊರೆಯಾಗಿ ಚಂದ್ರನ ಮೇಲೆ ಒಂದು ಎಕರೆ ಭೂಮಿಯನ್ನು 10,000 ರೂ.ಗೆ ಖರೀದಿಸಿ ಪತ್ನಿಯ ಹುಟ್ಟುಹಬ್ಬದಂದು ಉಡುಗೊರೆಯಾಗಿ ನೀಡಿದ್ದರು.ಲೂನಾ ಸೊಸೈಟಿ ಇಂಟರ್‌ನ್ಯಾಶನಲ್ ಕಂಪನಿ ಚಂದ್ರನ ಮೇಲಿನ ಜಾಗವನ್ನು ಮಾರಾಟ ಮಾಡುತ್ತಿದೆ. ಸಂಜಯ್ ತನ್ನ ಸ್ನೇಹಿತನ ನೆರವಿನಿಂದ ಲೂನಾ ಕಂಪನಿ ಮೂಲಕ 10 ಸಾವಿರ ರೂ.ಗೆ ಎಕರೆ ಜಮೀನು ಖರೀದಿಸಿ ಪ್ರಮಾಣಪತ್ರವನ್ನು ಪತ್ನಿಗೆ ಉಡುಗೊರೆಯಾಗಿ ನೀಡಿದ್ದಾನೆ.
2020ರಲ್ಲಿ, ರಾಜಸ್ಥಾನದ ಅಜ್ಮೀರ್‌ನಲ್ಲಿ ವ್ಯಕ್ತಿಯೊಬ್ಬರು ತಮ್ಮ ವಿವಾಹ ವಾರ್ಷಿಕೋತ್ಸವದಂದು ತಮ್ಮ ಪತ್ನಿಗೆ ಚಂದ್ರನ ಮೇಲೆ ಮೂರು ಎಕರೆ ಜಾಗವನ್ನು ಖರೀದಿಸಿ ಉಡುಗೊರೆಯಾಗಿ ನೀಡಿದರು. ಆ ವೇಳೆಗೆ ಈ ಸುದ್ದಿ ಸಂಚಲನ ಮೂಡಿಸಿತ್ತು. ಅಷ್ಟೇ ಅಲ್ಲ, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರು 2018 ರಲ್ಲಿ ಚಂದ್ರನ ಇನ್ನೊಂದು ಬದಿಯಲ್ಲಿ ಮೇರ್ ಮಸ್ಕೋವಿಯನ್ಸ್ ಅಥವಾ “ಸೀ ಆಫ್ ಮಸ್ಕೋವಿ” ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಸ್ಥಳವನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ನಟರಾದ ಶಾರುಖ್ ಖಾನ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರಿಂದ ಸ್ಫೂರ್ತಿ ಪಡೆದ ಬೋಧಗಯಾ ನಿವಾಸಿ ನೀರಜ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬದಂದು ಚಂದ್ರನ ಮೇಲೆ ಒಂದು ಎಕರೆ ಭೂಮಿಯನ್ನು ಸಹ ಖರೀದಿಸಿದರು.
ಚಂದ್ರನ ಮೇಲೆ ಜಾಗ ಖರೀದಿಸುತ್ತಿದ್ದೇವೆ ಎಂದು ಸರ್ಟಿಫಿಕೇಟ್ ತೋರಿಸುತ್ತಿದ್ದಾರೆ. ಆ ಪ್ರಮಾಣಪತ್ರಗಳು ಮಾನ್ಯವಾಗಿದೆಯೇ? ಎಂಬುದು ಯೋಚಿಸಬೇಕಾದ ವಿಷಯವೂ ಆಗಿದೆ. ಏಕೆಂದರೆ ಚಂದ್ರನ ಮೇಲಿನ ಜಾಗ ಯಾರಿಗೂ ಸೇರಿದ್ದಲ್ಲ. ಆದರೆ ಕೆಲವು ಕಂಪನಿಗಳು ಚಂದ್ರನ ಮೇಲಿನ ಜಾಗವನ್ನು ಮಾರಾಟ ಮಾಡುತ್ತಿವೆ. ಆ ಜಾಗಕ್ಕಾಗಿ ಬಳಕೆದಾರರಿಗೆ ಪ್ರಮಾಣಪತ್ರವನ್ನು ನೀಡುತ್ತಿವೆ. ಇದರ ಬಗ್ಗೆ ಯೋಚಿಸದೆ ಕೆಲವರು ಖರೀದಿಸಲು ಮುಂದೆ ಬರುತ್ತಾರೆ ಎಂಬುದನ್ನು ಗಮನಿಸಬೇಕು.
ನಯವಾದ ತ್ವಚೆ, ಹೊಳೆಯುವ ಚರ್ಮಕ್ಕೆ ಪಪ್ಪಾಯಿ ಉತ್ತಮ ಆಯ್ಕೆ….

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − fourteen =
Remember me
