ಪಶ್ಚಿಮ ಬಂಗಾಳ:ಕಲವರು ಪ್ರಾಣಿ ಮತ್ತು ಪಕ್ಷಿಗಳು ಎಂದರೆ ಎಲ್ಲಿಲ್ಲದ ಪ್ರೀತಿ ಹೊಂದಿರುತ್ತಾರೆ. ತಮ್ಮ ಮನೆಯ ಕುಟುಂಬಸ್ಥರು ಹಾಗೂ ಮನೆ ಮಂದಿಯಂತೆ ನೋಡುವವರಿದ್ದಾರೆ. ಹೀಗೆ ವ್ಯಕ್ತಿಯೊಬ್ಬರು ತನ್ನ ಮುದ್ದಿನ ಗಿಳಿ ನಿಧನವಾದ ಹಿನ್ನೆಲೆ ಅಂತಿಮ ವಿಧಿವಿಧಾನಗಳನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿ ಸುದ್ದಿಯಾಗಿದ್ದಾರೆ.
ಪಶ್ಚಿಮ ಬಂಗಾಳದ ಹೆಬ್ರಾದ ಆಯ್ರಾ ಗ್ರಾಮದ ನಿವಾಸಿ ಮಜುಂದಾರ್ ಕಳೆದ 25 ವರ್ಷಗಳಿಂದ ಗಿಳಿಯೊಂದನ್ನು ಸಾಕಿದ್ದ. ಪ್ರೀತಿಯಿಂದ ಭಕ್ತೋ ಎಂದು ಹೆಸರಿಟ್ಟಿದ್ದರು. ಆದರೆ ಅದು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಸಾವನ್ನಪ್ಪಿದೆ.
ಇದನ್ನೂ ಓದಿ:ಚಾಕಲೇಟ್‌ ರ್‍ಯಾಪರ್​​​ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 16.5 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ!
ನಡೆದಿದ್ದೇನು?:ಗಿಳಿಯನ್ನು ಮನೆ ಸದಸ್ಯನಂತೆ ನೋಡಿಕೊಂಡಿದ್ದ ಮಜುಂದಾರ್ ಕುಟುಂಬವು ಹಿಂದೂ ಸಂಪ್ರದಾಯಗಳ ಪ್ರಕಾರ ಅದರ ಅಂತ್ಯಕ್ರಿಯೆಯನ್ನು ನಡೆಸಲು ನಿರ್ಧರಿಸಿತ್ತು. ಅಂತ್ಯಸಂಸ್ಕಾರ ನಡೆಸಲು ಸ್ಥಳೀಯರು ಸಹಾಯ ಮಾಡಿದ್ದರು.
ಮಜುಂದಾರ್ ಕುಟುಂಬವು ಅರ್ಚಕರನ್ನು ಕರೆದು ಹಿಂದೂ ಸಂಪ್ರದಾಯದಂತೆ ಗಿಳಿಯ ಅಂತಿಮ ವಿಧಿಗಳನ್ನು ನೆರವೇರಿಸಿದರು. ಪಾರ್ಥಿವ ಶರೀರವನ್ನು ನೈಹಟಿಯ ಹೂಗ್ಲಿ ನದಿ ಘಾಟ್‍ಗೆ ಕೊಂಡೊಯ್ಯಲಾಯಿತು. ಅಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು. ಈ ವೇಳೆ 25 ಜನರನ್ನು ಕರೆಸಿ ಊಟ ಹಾಕಿಸಿದ್ದಾರೆ.
ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ, ತುಳಸಿ ಗೌಡ ಅವರನ್ನು ಭೇಟಿಯಾದ ನರೇಂದ್ರ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
