ಕೋಲ್ಕತ:ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಹೈವೋಲ್ಟೇಜ್​ ಕ್ಷೇತ್ರವಾದ ನಂದಿಗ್ರಾಮದಲ್ಲಿನ ಕೊನೆಯ ದಿನದ ಚುನಾವಣ ಪ್ರಚಾರವು ನಾಟಕೀಯ ಅಂತ್ಯವನ್ನು ಪಡೆದುಕೊಂಡಿತು. ನಾಮಪತ್ರದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದ ಸಿಎಂ ಮಮತಾ ಬ್ಯಾನರ್ಜಿ ಅವರು ನಿನ್ನೆ ಚುನಾವಣಾ ಪ್ರಚಾರದ ಕೊನೆಯ ದಿನ ವ್ಹೀಲ್​ಚೇರ್​ನಿಂದ ಎದ್ದು ನಿಲ್ಲುವ ಮೂಲಕ ಪ್ರಚಾರಕ್ಕೆ ತೆರೆ ಎಳೆದರು.
ಸಾಲು ಸಾಲು ಚುನಾವಣಾ ಸಮಾವೇಶಗಳ ಬಳಿಕ ಕೊನೆಯ ಹಂತದ ಪ್ರಚಾರದ ವೇಳೆ ಮಮತಾ ಅವರು ರಾಷ್ಟ್ರಗೀತೆಗಾಗಿ ಎದ್ದು ನಿಲ್ಲುತ್ತಾರೆಂದು ಒತ್ತಾಯಿಸಲಾಯಿತು. ಈ ವೇಳೆ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಪಕ್ಷದ ಸುಬ್ರತ್​ ಬಕ್ಷಿ ಮತ್ತು ಡೊಲಾ ಸೆನ್​, ರಾಷ್ಟ್ರಗೀತೆ ವೇಳೆ ಮಮತಾ ಅವರು ಎದ್ದು ನಿಲ್ಲಲು ಸಹಾಯ ಮಾಡಿದರು.
ವ್ಹೀಲ್​ಚೇರ್​ನಿಂದ ಎದ್ದು ನಿಂತ ಮಮತಾ, ರಾಷ್ಟ್ರಗೀತೆ ವೇಳೆ ಒಂದೇ ಕಾಲಿನಲ್ಲಿ ನಿಂತಿದ್ದರು. ಈ ಮೂಲಕ ತಮ್ಮ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಮಮತಾ ಬ್ಯಾನರ್ಜಿ ತೆರೆ ಎಳೆದರು.
ಇದನ್ನೂ ಓದಿರಿ:ಕೊಹ್ಲಿ-ರೋಹಿತ್ ಈಗ ಆಪ್ತಮಿತ್ರರು! ಬಯೋಬಬಲ್‌ನಲ್ಲಿ ಬಗೆಹರಿದ ಭಿನ್ನಾಭಿಪ್ರಾಯ
ಅಂದಹಾಗೆ ಮಾರ್ಚ್​ 11ರಂದು ತಮ್ಮ ಕ್ಷೇತ್ರ ನಂದಿಗ್ರಾಮದಲ್ಲಿ ರೋಡ್​ಶೋ ನಡೆಸುವ ವೇಳೆ ಮಮತಾ ಅವರು ಕಾಲಿಗೆ ನೋವು ಮಾಡಿಕೊಂಡಿದ್ದರು. ಆದರೆ, ಇದು ಭಾರತೀಯ ಜನತಾ ಪಾರ್ಟಿಯ ದುಷ್ಕೃತ್ಯ, ಅವರ ಗೂಂಡಾಗಳು ಮಾಡಿದ ಕೆಲಸ ಎಂದು ಟಿಎಂಸಿ ಮುಖ್ಯಸ್ಥ ಆರೋಪಿಸಿದ್ದರು. ಆದರೆ, ಪ್ರತ್ಯಕ್ಷದರ್ಶಿಗಳ ಪ್ರಕಾರ ಕಾರಿನ ಬಾಗಿಲಿನಿಂದಾಗಿ ಈ ಅಚಾತುರ್ಯ ನಡೆಯಿತು ಎಂದು ಹೇಳಲಾಗಿದೆ.
Mamata Banerjee on her feet for the first time since March 10 after she injured her feet. She said she will stand with support from her party workers while singing the national anthem as she ends her campaign in#Nandigrampic.twitter.com/dCRS26OPDX
— ইন্দ্রজিৎ | INDRAJIT (@iindrojit)March 30, 2021

ಏಪ್ರಿಲ್​ 1ರಂದು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಎರಡನೇ ಹಂತದ ಮತದಾನದಲ್ಲಿ ಹೈವೋಲ್ಟೇಜ್​ ಕ್ಷೇತ್ರ ನಂದಿಗ್ರಾಮವೂ ಸೇರಿದೆ. ಏಕೆಂದರೆ ಇದು ಹಾಲಿ ಮುಖ್ಯಮಂತ್ರಿ ಮಮತಾ ಅವರು ಸ್ಪರ್ಧಿಸುತ್ತಿರುವ ಕ್ಷೇತ್ರವಾಗಿದೆ. ಇವರ ವಿರುದ್ಧ ಬಿಜೆಪಿಯಿಂದ ಸುವೆಂದು ಅಧಿಕಾರಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಇಬ್ಬರ ನಡುವೆ ಪ್ರವಲ ಪೈಪೋಟಿ ಇದೆ. ಸುವೆಂದು ಅಧಿಕಾರಿ ಅವರು ಈ ಹಿಂದೆ ಟಿಎಂಸಿಯಲ್ಲಿ ಮಮತಾ ಅವರ ನಂಬಿಕಸ್ಥರಾಗಿದ್ದರು. ಆದರೆ, ಪಕ್ಷ ತೊರೆದು ಕಳೆದ ವರ್ಷ ಬಿಜೆಪಿಗೆ ಸೇರಿದ್ದಾರೆ. ಹೀಗಾಗಿ ಈ ಚುನಾವಣೆ ಬಹಳ ಕುತೂಹಲ ಮೂಡಿಸಿದೆ.
ನಂದಿಗ್ರಾಮ್ ಚುನಾವಣಾ ಪ್ರಚಾರದ ಕೊನೆಯ ದಿನ, ಮಮತಾ ಬ್ಯಾನರ್ಜಿ ಅವರು ಸಾರ್ವಜನಿಕ ಸಮಾವೇಶಗಳನ್ನು ನಡೆಸಿದರೆ, ಅವರ ಎದುರಾಳಿ ಸುವೆಂದು ಅಧಿಕಾರಿಯು, ಕೇಂದ್ರ ಗೃಹ ಸಚಿವ ಅಮಿತ್ ಷಾರೊಂದಿಗೆ ಕ್ಷೇತ್ರದ ರೋಡ್​ ಶೋನಲ್ಲಿ ಭಾಗವಹಿಸಿದರು.
ಇದನ್ನೂ ಓದಿರಿ:ಏರ್​ಪೋರ್ಟ್​ನಲ್ಲಿ ಕ್ಯಾಬ್​ ಚಾಲಕನಿಂದ ಆತ್ಮಹತ್ಯೆ ಯತ್ನ; ಕಾರಣದ ಸುಳಿವು ನೀಡಿತು ಚಾಲಕರ ಈ ಆಕ್ರೋಶ?
ಅಂದಹಾಗೆ ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮನತದಾನ ನಡೆಯಲಿದೆ. ಏಪ್ರಿಲ್​ 29ಕ್ಕೆ ಮತದಾನ ಮುಗಿಯಲಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ.(ಏಜೆನ್ಸೀಸ್​)
ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಸೋಲಿನ ಭೀತಿ?

‘ಬಿಜೆಪಿಯವರಿಗೆ ಸೌಟು, ಪೊರಕೆಯೇ ಬುದ್ಧಿ ಕಲಿಸಲಿದೆ’ ಗೆದ್ದೇ ಗೆಲ್ತಾರಂತೆ ದೀದಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − two =
Remember me
