ಕೋಲ್ಕತ್ತಾ:ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ವ್ಯಾಪಾರಿಯಾಗಿರುವ ಸುಬ್ರತಾ ಸರ್ಕಾರ್​ ಎಂಬಾತ ಬೈಕ್​ ಖರೀದಿಸಬೇಕೆಂಬ ಹಲವು ವರ್ಷಗಳ ಕನಸನ್ನು ಈಡೇರಿಸಿಕೊಂಡಿದ್ದಾರೆ.
ಸತತ ಆರು ವರ್ಷಗಳಿಂದ ಸಂಗ್ರಹಿಸಿದ್ದ 2 ರೂ. ನಾಣ್ಯಗಳನ್ನೇ ನೀಡಿ 1.8 ಲಕ್ಷ ರೂ.ಬೆಲೆಯ ಬೈಕ್​ ಖರೀದಿಸಿದ್ದಾರೆ. 2016ರಲ್ಲಿ ನೋಟು ಅಮಾನ್ಯೀಕರಣಗೊಂಡ ಬಳಿಕ ನೋಟು ಅಭಾವದಿಂದಾಗಿ ನಾಣ್ಯಗಳನ್ನೇ ಸಂಗ್ರಹಿಸಿ ಬೈಕ್​ ಖರೀದಿಸಿದ್ದಾರೆ.
ಚಿಲ್ಲರೆ ವ್ಯಾಪಾರಿಯಾಗಿರುವ ಸುಬ್ರತ ಸರ್ಕಾರ್​​ಗೆ ನೋಟು ನಿಷೇಧ ಬಳಿಕ ಬರೀ ನಾಣ್ಯಗಳ ಚಲಾವಣೆಯೇ ಹೆಚ್ಚಿತಂತೆ. ಇದಕ್ಕಾಗಿಯೇ ತಾನು ನಾಣ್ಯಗಳನ್ನೇ ಸಂಗ್ರಹಿಸಿ ಬೈಕ್​ ಖರೀದಿಸಬೇಕೆಂದು ಅಂದೇ ಪಣ ತೊಟ್ಟಿದ್ದರು. ಅಂತೆಯೇ ನಾಣ್ಯಗಳಿಂದಲೇ ಬೈಕ್​ ಖರೀದಿಸಿದ್ದಾರೆ.
ಚೀಲಗಳಲ್ಲಿ ತುಂಬಿಕೊಂಡು ಶೋ ರೂಂಗೆ ಬಂದಿದ್ದ ಸರ್ಕಾರ್​ನನ್ನು ನೋಡಿ ಗಾಬರಿಯಾದ ಸಿಬ್ಬಂದಿ ನಂತರ ಬೈಕ್​ ಖರೀದಿಗೆ ಬಂದಿರುವುದಾಗಿ ತಿಳಿಸಿದ್ದಾರೆ. ಈತ ನೀಡಿದ್ದ ನಾಣ್ಯಗಳನ್ನು ಎಣಿಸುವಷ್ಟರಲ್ಲಿ ಸಿಬ್ಬಂದಿಗೆ ಸಾಕಾಗಿ ಹೋಯಿತು. ಕೊನೆಗೂ ಈ ವ್ಯಾಪಾರಿಯ ಕನಸು ನೆರವೇರಿತು.(ಏಜೆನ್ಸೀಸ್​)
ಲಲಿತ್​ ಮೋದಿ ಜತೆಗೆ ಸುಷ್ಮಿತಾ ಡೇಟಿಂಗ್​: ಮಾಜಿ ಪ್ರಿಯಕರನಿಂದ ಅಚ್ಚರಿಯ ಹೇಳಿಕೆ!

ಮಹಾರಾಷ್ಟ್ರದಲ್ಲಿ ಮುಂದುವರಿದ ಭಾರೀ ಮಳೆ: ಶತಕ ದಾಟಿದ ಸಾವಿನ ಸಂಖ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 9 =
Remember me
