ಕಲ್ಕತ್ತ: ಇನ್ನೇನು ಕೆಲವೇ ತಿಂಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಲಿದೆ. ತೀವ್ರ ಜಿದ್ದಾಜಿದ್ದಿ ಕಣವಾಗಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಆಡಳಿತಾರೂಢ ಟಿಎಂಸಿ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ತೀವ್ರ ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.
ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಹವಣಿಸುತ್ತಿರುವ ಬಿಜೆಪಿ, ತನ್ನ ಸಿಎಂ ಅಭ್ಯರ್ಥಿಯಲ್ಲಿ ಗೊಂದಲ ಮೂಡಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಹೊರಗಿನವರು ಸಿಎಂ ಆಗುತ್ತಾರೆ ಎಂದು ಊಹಾಪೋಹ ಎದ್ದಿದೆ. ಈ ಹಿನ್ನೆಲೆಯಲ್ಲಿ ಈ ಸಾರಿ ಚುನಾವಣೆಯ ಸ್ಲೋಗನ್ ಬಿಡುಗಡೆ ಮಾಡಿರುವ ಟಿಎಂಸಿ, ಬಿಜೆಪಿಗೆ ಎದಿರೇಟು ನೀಡಿದೆ.
‘Bengal Wants Its Own Daughter’ ಎಂಬ ಸ್ಲೋಗನ್ ಟಿಎಂಸಿ ಅನಾವರಣಗೊಳಿಸಿದೆ. ಬಂಗಾಳಕ್ಕೆ ತನ್ನ ಮನೆ ಮಗಳು ಬೇಕೆ ಹೊರತು ಹೊರಗಿನವರು ಅಲ್ಲ ಎಂಬ ಸಂದೇಶವನ್ನು ಇದು ರವಾನಿಸಿದೆ. ಈ ಸ್ಲೋಗನ್ ಇರುವ ಬ್ಯಾನರ್ ಹೋರ್ಡಿಂಗ್ಸ್​ಗಳು ಕಲ್ಕತ್ತದ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾರ್ಥ್ ಚಟರ್ಜಿ ಅವರು, ಬಂಗಾಳಕ್ಕೆ ಹೊರಗಿನವರ ಅವಶ್ಯಕತೆ ಇಲ್ಲ. ಹೊರಗಿನವರು ಇಲ್ಲಿ ಅಶಾಂತಿ ಸೃಷ್ಟಿಸಲು ಬಿಡುವುದಿಲ್ಲ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ್ ಚಟರ್ಜಿ ಹೇಳಿದ್ದಾರೆ.
ಡ್ರಗ್ಸ್​ ಸಾಗಾಣೆಯಲ್ಲಿ ಸಿಕ್ಕಿಬಿದ್ದ ಪಶ್ಚಿಮ ಬಂಗಾಳ ಬಿಜೆಪಿ ಯುವ ನಾಯಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − eight =
Remember me
