ಕೋಲ್ಕತ್ತಾ:ಕುಟುಂಬದೊಳಗಿನ ರಾಜಕೀಯ ವೈಷಮ್ಯವಾಗಿ ಪರಿಣಮಿಸಿದ ಪರಿಣಾಮ ಮಗನೊಬ್ಬ ತನ್ನ ಹೆತ್ತ ತಂದೆಯನ್ನು ಹತ್ಯೆಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಬಳಿ ನಡೆದಿದೆ.ಇದನ್ನೂ ಓದಿ:ರೈತರನ್ನು ಚಿಂತೆಗೀಡು ಮಾಡಿದ ರಾಸುಗಳ ಮಾರಕ ಕಾಯಿಲೆ: ಲಕ್ಷಣ, ಮುಂಜಾಗ್ರತಾ ಕ್ರಮಗಳು ಇಲ್ಲಿವೆ…ಬುರಾನ್ ಮುರ್ಮು(52) ಎಂಬಾತನೇ ಮೃತ ದುರ್ದೈವಿಯಾಗಿದ್ದು, ಮಗ ಬಿಪ್ಲಬ್ ಮುರ್ಮು ಮತ್ತು ಸೊಸೆ ಶರ್ಮಿಳಾ ಮುರ್ಮು ಜತೆಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದನು. ಭಾನುವಾರ ಬೆಳಿಗ್ಗೆ ಕೋಣೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬುರಾನ್​ನ ಮೃತದೇಹ ಪತ್ತೆಯಾಗಿದ್ದು, ದೇಹದ ಮೇಲೆ ಅನೇಕ ಗಾಯದ ಗುರುತುಗಳು ಕಂಡು ಬಂದಿವೆ.ಹಲವು ದಿನಗಳ ಹಿಂದೆ ಬಂಗಾಳಲ್ಲಿ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಬಿಪ್ಲವ್​ನ ಹೆಂಡತಿಯು ಟಿಎಂಸಿ ಅಬ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಳು. ಈ ವೇಳೆ ಬುರಾನ್​ ಬಿಜೆಪಿಗೆ ಬೆಂಬಲವನ್ನು ನೀಡಿ, ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಆದರೆ ಚುನಾವಣಾ ಫಲಿತಾಂಶ ಬಳಿಕ ಶರ್ಮಿಳಾ ಬಿಜೆಪಿ ಅಭ್ಯರ್ಥಿವ ವಿರುದ್ಧ 56 ಮತಗಳ ಅಂತರದಿಂದ ಸೋತಿದ್ದಳು.ಇದನ್ನೂ ಓದಿ:ವೀರಾಂಜನೇಯ ಸ್ವಾಮಿ ದೇವಸ್ಥಾನದ ಹೊಸ್ತಿಲಿಗೆ ಮುಖವಿಟ್ಟು ಕೊನೆಯುಸಿರೆಳೆದ ಕೋತಿಈ ಹಿನ್ನೆಲೆಯಲ್ಲಿ ತಂದೆ-ಮಗನ ನಡುವೆ ವಾಗ್ವಾದ ನಡೆದಿತ್ತು. ಅಲ್ಲದೇ, ಬುರಾನ್ ಮೇಲೆ ಅತನ ಮಗ ಮತ್ತು ಇತರ ತೃಣಮೂಲ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಶರ್ಮಿಳಾಳನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಪುತ್ರ ಬಿಪ್ಲಬ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eleven − 1 =
Remember me
