ಕೊಲ್ಕತ :ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದ ಹಿರಿಯ ಬಂಗಾಳಿ ಚಿತ್ರನಿರ್ದೇಶಕ ಮತ್ತು ಖ್ಯಾತ ಕವಿ ಬುದ್ಧದೇಬ್ ದಾಸ್​ಗುಪ್ತ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಚಿತ್ರರಂಗದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
77 ವರ್ಷ ವಯಸ್ಸಾಗಿದ್ದ ದಾಸ್​​ಗುಪ್ತ ಸ್ವಲ್ಪಕಾಲದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಡಯಾಲಿಸಿಸ್​ ಚಿಕಿತ್ಸೆ ಪಡೆಯುತ್ತಿದ್ದರು. ದಕ್ಷಿಣ ಕೊಲ್ಕತದ ತಮ್ಮ ನಿವಾಸದಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ಅವರು ನಿದ್ದೆಯಲ್ಲೇ ಸಹಜ ಸಾವು ಹೊಂದಿದ್ದಾರೆ.
ದಾಸ್​ಗುಪ್ತ ಅವರ ಐದು ಸಿನಿಮಾಗಳಿಗೆ ಅತ್ಯುತ್ತಮ ಚಲನಚಿತ್ರಕ್ಕಾಗಿ ನೀಡುವ ನ್ಯಾಷನಲ್ ಫಿಲಂ ಅವಾರ್ಡ್​ಗಳು ಲಭಿಸಿವೆ, ಎರಡು ಬಾರಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಮೇ 2008 ರಲ್ಲಿ ಮ್ಯಾಡ್ರಿಡ್​ನಲ್ಲಿ ನಡೆದ ಸ್ಪೈನ್​ ಇಂಟರ್​ನ್ಯಾಷನಲ್​ ಫಿಲಂ ಫೆಸ್ಟಿವಲ್​ನಲ್ಲಿ ಅವರಿಗೆ ಲೈಫ್​​ಟೈಮ್​ ಅಚೀವ್​ಮೆಂಟ್​ ಅವಾರ್ಡ್​ ಲಭಿಸಿತ್ತು. ಬಾಗ್​ ಬಹದೂರ್​, ಲಾಲ್​ ದರ್ಜಾ, ಕಾಲ್​ಪುರುಷ್ ಮತ್ತು ಮಿಥುನ್​ ಚಕ್ರವರ್ತಿ ನಟಿಸಿದ ತಹದೆರ್​​ ಕಥಾ ಅವರು ನಿರ್ದೇಶಿಸಿದ ಜನಪ್ರಿಯ ಚಿತ್ರಗಳು.(ಏಜೆನ್ಸೀಸ್)
ಮಕ್ಕಳಿಗೆ ಕರೊನಾ ಚಿಕಿತ್ಸೆ : ರೆಮ್​ಡೆಸಿವಿರ್ ಬೇಡ, ಸ್ಟಿರಾಯ್ಡ್ ಬಳಕೆಯಲ್ಲಿ ಇರಲಿ ಎಚ್ಚರ

ಹಾಸನ, ಶಿವಮೊಗ್ಗಕ್ಕೆ ಸಿಎಂ ಯಡಿಯೂರಪ್ಪ ಪ್ರವಾಸ

ಲಾಕ್​ಡೌನ್ ವೇಳೆ ಸೀಜ್ ಆದ ವಾಹನಗಳ ರಿಲೀಸ್ ಪ್ರಕ್ರಿಯೆ ಶುರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − four =
Remember me
