ಬೆಂಗಳೂರು:ನಿನ್ನೆ ನಗರದ ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ಪ್ರತಿಪಕ್ಷಗಳು ಸಭೆ ನಡೆಸಿದ ವೇಳೆ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್​ ಭೇಟಿ ನೀಡಿದ್ದನ್ನು ವಿರೋಧಿಸಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಲು ಬಿಜೆಪಿ ಮತ್ತು ಜೆಡಿಎಸ್​ ನಿರ್ಧರಿಸಿವೆ.
ಸ್ಪೀಕರ್​ ಸ್ಥಾನ ಸಾಂವಿಧಾನಿಕ ಸ್ಥಾನವಾಗಿದ್ದು, ಯಾವುದೇ ಒಂದು ಪಕ್ಷದಲ್ಲಿ ಅವರು ಗುರುತಿಸಿಕೊಳ್ಳುವಂತಿಲ್ಲ. ಆದರೆ, ವಿಪಕ್ಷಗಳ ಸಭೆಯಲ್ಲಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್​ ನಾಯಕರು ಆಕ್ರೋಶ ಹೊರಹಾಕಿದ್ದು, ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿವೆ.
ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಹಿ ಹಾಕಿ ವಿಧಾನಸಭೆ ಕಾರ್ಯದರ್ಶಿಗೆ ಅವಿಶ್ವಾಸ ಗೊತ್ತುವಳಿ ನೋಟಿಸ್​ ನೀಡಿವೆ.
ಇದನ್ನೂ ಓದಿ:ಸೋಲಿನ ಹತಾಶೆಯಿಂದ ಬಿಜೆಪಿ ಮಿತ್ರ ಪಕ್ಷಗಳು ವಿದಾಯ ಕೂಟ ಆಯೋಜಿಸುತ್ತಿದೆ – ಅಖಿಲೇಶ್ ಯಾದವ್ ವ್ಯಂಗ್ಯ
ಊಟಕ್ಕೂ ಬಿಡದೆ ಕಲಾಪ ಮುಂದುವರಿಸಿ ಬಜೆಟ್ ಮೇಲೆ ಚರ್ಚೆಗೆ ಅವಕಾಶ ನೀಡಿದ್ದಕ್ಕೆ ಬಿಜೆಪಿ ಸದಸ್ಯರು ಸ್ಪೀಕರ್​ ವಿರುದ್ಧ ಪ್ರತಿಭಟನೆ ನಡೆಸಿದರು. ಸ್ಪೀಕರ್ ಪೀಠದ ಬಳಿ ಜಮಾಯಿಸಿದ ವಿಪಕ್ಷ ನಾಯಕರು ಹರಿದ ವಿಧೇಯಕಗಳ ಪ್ರತಿಗಳನ್ನು ಎಸೆದರು. ಈ ವೇಳೆ ಸ್ಪೀಕರ್ ಪೀಠದಲ್ಲಿ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಕುಳಿತಿದ್ದರು. ಲಮಾಣಿ ಅವರ ಮುಖದ ಮೇಲೆಯೇ ಬಿಜೆಪಿ ಸದಸ್ಯರು ಹರಿದ ಹಾಳೆಗಳನ್ನು ಎಸೆದರು. ಈ ವೇಳೆ ಮಾರ್ಷಲ್​ಗಳು ಸ್ಪೀಕರ್ ರಕ್ಷಣೆಗೆ ಬಂದು ನಿಂತರು. ಬಳಿಕ ಸದನವನ್ನು ಮಧ್ಯಾಹ್ನ 3ಕ್ಕೆ ಮುಂದೂಡಲಾಯಿತು. ಬಿಜೆಪಿ ಸದಸ್ಯರ ಕಿರಿಕಿರಿ ತಡೆಯದೇ ಸದನ ಮುಂದೂಡಲಾಯಿತು.
ಸ್ಪೀಕರ್ ಮೇಲೆ‌‌ ಪೇಪರ್ ಎಸೆದ ಹಿನ್ನಲೆ ನಾಲ್ವರು ಬಿಜೆಪಿ ಸದಸ್ಯರು ಸಸ್ಪೆಂಡ್ ಆಗುವ ಸಾಧ್ಯತೆ ಇದೆ.(ದಿಗ್ವಿಜಯ ನ್ಯೂಸ್​)
ವಿರೋಧ ಪಕ್ಷಗಳಿಂದ I.N.D.I.A. ಹೆಸರಿನ ಬಳಕೆ: ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಿಜೆಪಿ ನಾಯಕ

“ನನಗೆ ಅದರ ಮೇಲೆ ಯಾವುದೇ ನಿಯಂತ್ರಣವಿಲ್ಲ”: ತನ್ನ ಭಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ ನಟಿ ಹುಮಾ ಖುರೇಷಿ

ಟಿಕೆಟ್ ದರ ಏರಿಕೆ ಕುರಿತು ಸ್ಪಷ್ಟನೆ ನೀಡಿದ ‘ಬ್ರೋ’ ಚಿತ್ರದ ನಿರ್ಮಾಪಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − nine =
Remember me
