ಬೆಂಗಳೂರು:ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್​ ಶುರುವಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಟಿಯಲ್ಲಿ ಮುಸ್ಲಿಂ ವ್ಯಾಪಾರ ಬಹಿಷ್ಕರಿಸುವ ಕೂಗು ಕೇಳಿಬಂದಿದೆ. ಆದರೆ, ಈ ಬಹಿಷ್ಕಾರದ ವಿರುದ್ಧ ಮುಸ್ಲಿಂ ಮುಖಂಡ ಮೊಹಮ್ಮದ್ ಖಾಲಿದ್ ಅವರು ಆಕ್ರೋಶ ಹೊರಹಾಕಿದ್ದಾರೆ.
ವಿಡಿಯೋ ತುಣುಕೊಂದನ್ನು ಹಂಚಿಕೊಂಡಿರುವ ಖಾಲಿದ್​, ಮುಸ್ಲಿಂ ವ್ಯಕ್ತಿ ತಪ್ಪು ಮಾಡಿದರೆ ಯಾವೊಬ್ಬ ಮುಸ್ಲಿಮರು ಕೂಡ ಅವರ ಪರವಾಗಿ ನಿಲ್ಲುವುದಿಲ್ಲ. ಆದರೆ, ಬೇರೆ ಧರ್ಮಗಳಲ್ಲಿ ತಪ್ಪು ಮಾಡಿದವರ ಪರವಾಗಿ ನಿಲ್ಲೋದನ್ನು ನಾವು ನೋಡಿದ್ದೇವೆ. ಮುಸ್ಲಿಂ ಮಹಿಳೆ ಮೇಲೆ ರೇಪ್ ಮಾಡಿದ 12 ಜನರು ಜೈಲಿಂದ ಹೊರಗಡೆ ಬಂದಾಗ ಸ್ವಾಗತ ಮಾಡಿದ್ದಾರೆ. ಮುಸ್ಲಿಂರನ್ನು ಕೊಂದು ಜೈಲಿಂದ ಹೊರಗಡೆ ಬಂದವರಿಗೆ ರಾಜ್ಯಾತಿಥ್ಯ ನೀಡಿ, ರಾಜಕೀಯ ವ್ಯಕ್ತಿಯಾಗಿ ಬೆಳೆಸಿದ್ದಾರೆ.
ಆದರೆ, ಮುಸ್ಲಿಂ ಸಮುದಾಯದಲ್ಲಿ ಯಾರೇ ತಪ್ಪು ಮಾಡಿದರೂ ನಾವು ಅವರ ಪರವಾಗಿ ನಿಲ್ಲುವುದಿಲ್ಲ. ತಪ್ಪು ನಡೆದಾಗ ಮೌನವಾಗಿ‌ ಇರುತ್ತೇವೆ. ಮುಸ್ಲಿಂ ವ್ಯಾಪಾರ ವಿರೋಧ ಮಾಡ್ತೀರಾ ಅಂದರೆ, ಮುಸ್ಲಿಂ ರಾಷ್ಟ್ರಗಳಿಂದ ನೀವು ಯಾವುದನ್ನು ಖರೀದಿ ಮಾಡ್ಬೇಡಿ. ಒಂದು ಸಮಾಜ ಶಾಂತಿಯಿಂದ ಇರಬೇಕು ಅಂದ್ರೆ ಎಲ್ಲಾ ಜಾತಿಯವರು ಅನ್ಯಮಿತವಾಗಿರಬೇಕು. ಅದು ಅವಶ್ಯಕತೆ ಕೂಡ ಹಾಗೂ ಅನಿವಾರ್ತೆ ಕೂಡ. ಇಲ್ಲಾಂದ್ರೆ ಎಲ್ಲಾ ಮುಸ್ಲಿಮರನ್ನು ಕೊಂದು ಹಿಂದು ರಾಷ್ಟ್ರ ನಿರ್ಮಾಣ ಮಾಡಿ ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿ ಭದ್ರಕೋಟೆಯಲ್ಲಿ ಭಾರತ್​ ಜೋಡೋ ಯಾತ್ರೆ: ರಾಹುಲ್​ ಜತೆ ಕೈಜೋಡಿಸಿದ ಸಹೋದರಿ ಪ್ರಿಯಾಂಕಾ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಖತರ್ನಾಕ್​ ದಂಪತಿ ಬಂಧನ!

ಹಣದ ವಿಚಾರವಾಗಿ ಬೆದರಿಕೆ ಹಾಕಿ ಕೆಟ್ಟದಾಗಿ ನಿಂದನೆ: ಹಾಸ್ಯ ಕಲಾವಿದೆ ನಯನಾ ವಿರುದ್ಧ ದೂರು ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
