ಬೆಂಗಳೂರು: ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದ ಪಾಕಿಸ್ತಾನದ​ ಮಗುವಿಗೆ ಬೆಂಗಳೂರು ವೈದ್ಯರು ಮರುಜೀವ ನೀಡಿದ್ದಾರೆ. ಆಸ್ಟಿಯೋಪೆಟ್ರೋಸಿಸ್​​ ಎಂಬ ಅಣುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ಮಗು ಮಾರಣಾಂತಿಕ ಸ್ಥಿತಿಗೆ ತಲುಪಿತ್ತು.
ಮಗುವಿನಲ್ಲಿ ಕಂಡು ಬಂದ ಕಾಯಿಲೆ ಇನ್ಫಾನ್ಟೈಲ್​ ಅಸ್ಟಿಯೋಪೆಟ್ರೆಸಿಸ್​​ ಎಂಬುದು ಮಾರ್ಬಲ್​ ಮೂಳೆ ರೋಗವಾಗಿದೆ. ಈ ಸಮಸ್ಯೆಗೆ ತುತ್ತಾದವರು ಅನೇಕ ಮೂಳೆಗಳ ಬಿಗಿತನ, ದೃಷ್ಟಿ ಹೀನತೆ, ಕಿವಿ ಕೇಳದಿರುವಿಕೆ ಮತ್ತು ಅಸ್ಥಿಮಜ್ಜೆ ಸಮಸ್ಯೆಗೆ ಒಳಗಾಗಿ ಅವರ ಜೀವಿತಾವಧಿಯೇ ತಗ್ಗುತ್ತದೆ. ಇಂತಹ ಮಗುವಿಗೆ ಹೊಸ ರೀತಿಯ ಬೋನ್ ಮ್ಯಾರೊ ಟ್ರಾನ್ಸ್​​​ಪ್ಲಾಂಟ್​​ ಟೆಕ್ನಿಕ್​​ ಮೂಲಕ ಚಿಕಿತ್ಸೆ ನೀಡಲಾಗಿದೆ.
ದಶಕಗಳ ಬಳಿಕ ಪಾಕಿಸ್ತಾನ ದಂಪತಿಗೆ ಸಮವೀಯ ಎಂಬ ಮಗು ಜನಿಸಿದೆ. ಬೆಂಗಳೂರಿನ ಹೆಲ್ತ್ ಸಿಟಿಗೆ ಕರೆತಂದಾಗ ಆಕೆಗೆ ಕೇವಲ 5 ತಿಂಗಳಾಗಿತ್ತು. ನಾಲ್ಕು ತಿಂಗಳ ಟ್ರಾನ್ಸ್​​​ಪ್ಲಾಂಟೇಶನ್​​ ಬಳಿಕ ಮಗುವು ಶೇ 100 ರಷ್ಟು ದಾನಿಗಳ ಕೋಶದಿಂದ ರೋಗ ಮುಕ್ತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ಮೂಳೆಗಳು ಪುನರ್​ ಮಾದರಿಯತ್ತ ಸಕಾರಾತ್ಮಕ ಪ್ರತಿಕ್ರಿಯೆ ತೋರುತ್ತಿದೆ.
ಮಗುವಿನ ತಂದೆ ಜುನೈದ್​​ ಅಲಿ ಮಾತನಾಡಿ, ವೈದ್ಯರಿಗೆ ಮತ್ತು ತಜ್ಙರಿಗೆ ಧನ್ಯವಾದ ತಿಳಿಸಿದ್ದಾರೆ. ಮಗಳನ್ನು ಕಾಳಜಿ ತೋರಿ ಬಹಳ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ವೈದ್ಯರು ನಮ್ಮ ಕುಟುಂಬದಂತೆ ಎಂದುಯ ಹೇಳಿದ್ದಾರೆ.
ಮಗು ಇದೀಗ ಎಲ್ಲರಂತೆ ಸಾಮಾನ್ಯವಾಗಿರಲಿದ್ದು, ಅಪರೂಪದ ಕಾಯಿಲೆಯಿಂದ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
