ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಸೈಬರ್​ ವಂಚಕರ ಹಾವಳಿ ಮಿತಿಮೀರಿದ್ದು, ಜನರಿಗೆ ಎಷ್ಟೇ ಎಚ್ಚರಿಸಿದರೂ ಒಂದಲ್ಲ ಒಂದು ರೀತಿ ಇವರ ಬಲೆಗೆ ಸಿಲುಕಿ ಮೋಸ ಹೋಗುತ್ತಿರುತ್ತಾರೆ. ಇದೀಗ ಬೆಂಗಳೂರು ಮೂಲದ ಟೆಕ್ಕಿ ದಂಪತಿ ತಮಗೆ ಬಂದ ಒಂದೇ ಒಂದು ಫೋನ್​ ಕರೆಯಿಂದ ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಪೂರ್ವ ವಿಭಾಗದ ಪೊಲೀಸರು  ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹಣ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದು, ನ್ಯಾಯಾಲಯದ ಅನುಮತಿ ಪಡೆದು ಮಾಲೀಕರಿಗೆ ವಾಪಸ್ಸು ನೀಡಿದ್ದಾರೆ.
ಆನ್​ಲೈನ್​ನಲ್ಲಿ ಒಂದೊಮ್ಮೆ ನಾವು ವಂಚನೆಗೊಳಗಾದರೆ ಹಣ ವಾಪಸ್ ಬರುವುದು ತೀರಾ ಅಪರೂಪ.‌ ಆದರೆ, ಬೆಂಗಳೂರಿನ ಟೆಕ್ಕಿ ದಂಪತಿ ಆನ್‌ಲೈನ್‌ ವಂಚನೆಯೊಂದರಲ್ಲಿ 1.53 ಕೋಟಿ ರೂ. ಕಳೆದುಕೊಂಡಿದ್ದರು. ಇದರಲ್ಲಿ ಹೆಚ್ಚಿನ ಹಣವನ್ನು ಅಂದರೆ 1.40 ಕೋಟಿ ರೂ.ಗಳನ್ನು 50ಕ್ಕೂ ಹೆಚ್ಚು ಖಾತೆಗಳಿಂದ ಪೂರ್ವ ವಿಭಾಗದ ಪೊಲೀಸರು ವಸೂಲಿ ಮಾಡಿಕೊಟ್ಟಿದ್ದಾರೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಹಾಡಿಹೊಗಳುತ್ತಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರಿನ ಬಾಣಸವಾಡಿಯಲ್ಲಿ ವಾಸವಿರುವ ದಂಪತಿಗೆ ವಚಂಕನೊಬ್ಬ ಕರೆ ಮಾಡಿ ಯುಟ್ಯೂಬ್​ನಲ್ಲಿ ವಿಡಿಯೋ ನೋಡಿ ಸಬ್​ಸ್ಕ್ರೈಬ್​ ಮಾಡಿದರೆ 50 ರೂ. ನೀಡುವುದಾಗಿ ಹೇಳಿದ್ದರು. ವಿಡಿಯೋ ಸಬ್​ಸ್ಕ್ರೈಬ್ ಮಾಡಿದ್ದ ಟೆಕ್ಕಿ ದಂಪತಿಗೆ ಹಣ ನೀಡಿದ್ದರು. ನಂತರ ಟೆಲಿಗ್ರಾಂ ಗ್ರೂಪ್​ಗೆ ಆ್ಯಡ್ ಮಾಡಿ ಹೂಡಿಕೆ ಮಾಡಿದರೆ ಡಬಲ್ ಹಣ ನೀಡುವುದಾಗಿ ವಂಚಕರು ದಂಪತಿಗೆ ಆಮಿಷ ಒಡ್ಡಿದ್ದಾರೆ. ಅಷ್ಟೇ ಅಲ್ಲ ಹೂಡಿಕೆ ನಿಜ ಎಂದು ಬಿಂಬಿಸಲು ಈತ ನಕಲಿ ವೆಬ್‌ಸೈಟ್‌ ಒಂದು ತೆರೆದು, ಇದರ ಆಕ್ಸೆಸ್‌ ಕೂಡ ನೀಡಿದ್ದರು.
ಇದನ್ನೂ ಓದಿ:ವ್ಯಾಜ್ಯ ಬಗೆಹರಿಸಲು 5 ಕೆಜಿ ಆಲೂಗಡ್ಡೆಗೆ ಬೇಡಿಕೆಯಿಟ್ಟ ಸಬ್ ​ಇನ್ಸ್​​ಪೆಕ್ಟರ್​; ಸೇವೆಯಿಂದ ಅಮಾನತು, ಕಾರಣ ಹೀಗಿದೆ
ಮೊದಲಿಗೆ 3 ಲಕ್ಷ ರೂ. ಹೂಡಿದ ದಂಪತಿ ಲಾಭಾಂಶ ಪಡೆದಿದ್ದರು. ನಂತರ ಹಂತಹಂತವಾಗಿ ಕೋಟ್ಯಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದಾರೆ. ಕೆಲವು ತಿಂಗಳ ನಂತರ ಒಂದಿಷ್ಟು ಹಣವನ್ನು ಹಿಂಪಡೆಯಲು ನೋಡಿದರೆ, ಹಣ ತೆಗೆಯಲು ಆಗುತ್ತಿರಲಿಲ್ಲ. ಅಷ್ಟೇ ಅಲ್ಲ ನಕಲಿ ವೆಬ್‌ಸೈಟ್‌ನ ಆಕ್ಸೆಸ್‌ ಕೂಡ ಹೋಗಿದೆ. ಕೊನೆಗೆ ಅವರನ್ನು ವಂಚಕರು ಬ್ಲಾಕ್​ ಮಾಡಿದ್ದು, ತಾವು ವಂಚನೆಗೆ ಸಿಲುಕಿರುವುದು ದಂಪತಿಗೆ ತಿಳಿದಿದೆ. ಕೂಡಲೇ ದಂಪತಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ 1.40 ಕೋಟಿ ರೂ. ವಸೂಲಿ ಮಾಡಿದ್ದು, ಬಾಕಿ ಹಣವನ್ನು ವಸೂಲಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ದಂಪತಿ ದೂರು ನೀಡುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಬ್ಯಾಂಕ್​ನವರನ್ನು ಸಂಪರ್ಕಿಸಿ  ಈ ವಂಚನೆ ಜಾಲವನ್ನು ಪತ್ತೆ ಹಚ್ಚಿದರು. ಈ ಹಗರಣದಲ್ಲಿ ಭಾಗಿಯಾಗಿದ್ದ 50ಕ್ಕೂ ಹೆಚ್ಚು ಖಾತೆಗಳನ್ನು ಬ್ಲಾಕ್‌ ಮಾಡಿದರು. ತಕ್ಷಣ ಕಾರ್ಯಪ್ರವೃತ್ತವಾಗಿದ್ದರಿಂದ ಒಂದಿಷ್ಟು ಮೊತ್ತ ವಾಪಸ್‌ ಪಡೆಯಲು ಸಾಧ್ಯವಾಗಿದೆ. ಆರೋಪಿ ಲಂಡನ್​ನಲ್ಲಿ ಈ ವಂಚನೆ ಜಾಲವನ್ನು ನಡೆಸುತ್ತಿದ್ದ. ಈತ ಹಣ ಸ್ವೀಕರಿಸಲು ಉತ್ತರ ಭಾರತೀಯರ ಒಂದಿಷ್ಟು ಖಾತೆಗಳನ್ನು ಬಾಡಿಗೆಗೆ ಪಡೆದಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪ್ರಕರಣದ ಕುರಿತು ಮಾತನಾಡಿದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಪ್ರತಿ ಸೈಬರ್‌ ಕ್ರೈಂನಲ್ಲೂ ತನಿಖಾ ತಂಡ ಮೂರು ಸೂತ್ರಗಳನ್ನು ಪಾಲಿಸುತ್ತದೆ. ಹಣದ ವ್ಯವಹಾರವನ್ನು ಹಿಂಬಾಲಿಸಿ, ಖಾತೆಗಳನ್ನು ನಿರ್ಬಂಧಿಸುವುದು. ದೂರುದಾರರಿಂದ ಸರಿಯಾದ ಸಮಯದಲ್ಲಿ ಮಾಹಿತಿ ಪಡೆಯುವುದು, ಗೋಲ್ಡನ್ ಅವರ್‌ನಲ್ಲಿ ದೂರನ್ನು ದಾಖಲಿಸುವುದು. ಇವೆಲ್ಲದರ ಜೊತೆಗೆ ಕೆಲಸ ತ್ವರಿತವಾಗಿ ಪೂರ್ಣಗೊಳ್ಳಲು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ಬಾಂಧವ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 + two =
Remember me
