ಬೆಂಗಳೂರು:ಇತ್ತೀಚೆಗಷ್ಟೇ ಮುಕ್ತಾಯಗೊಂಡ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಗ್ಗೆ ಬೆಂಗಳೂರು ಮೂಲದ ಉದ್ಯಮಿ ತನಯ್ ಪ್ರತಾಪ್ ಅವರು ಟ್ವೀಟ್​ ಮೂಲಕ ವ್ಯಕ್ತಪಡಿಸಿರುವ ಅಭಿಪ್ರಾಯ ಭಾರೀ ವೈರಲ್​ ಆಗಿದ್ದು, ಪರ-ವಿರೋಧ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಐಪಿಎಲ್​ನ ಒಂದೂ ಪಂದ್ಯವನ್ನು ಮಿಸ್​ ಮಾಡಿಕೊಳ್ಳದ ಕಟ್ಟಾ ಅಭಿಮಾನಿಗಳಿಗೆ ತನಯ್​ ಅವರು ತಮ್ಮ ಟ್ವೀಟ್​ ಅನ್ನು ಸಮರ್ಪಿಸಿದ್ದಾರೆ. ಜನರು ನನ್ನ ಬಳಿ ಸಮಯ ಇಲ್ಲ ಎಂದು ಹೇಳುತ್ತಾರೆ. ಆದರೆ, ಐಪಿಎಲ್​ ಪಂದ್ಯದ ವೇಳೆ ಟಿವಿ ಅಥವಾ ಮೊಬೈಲ್​ ಮುಂದೆ ಅಂಟಿಕೊಂಡಿರುತ್ತಾರೆ. ಒಂದು ದಿನಕ್ಕೆ 4 ಗಂಟೆ ಐಪಿಎಲ್​ ಪಂದ್ಯಕ್ಕಾಗಿ ವ್ಯಯಿಸಲಾಗುತ್ತಿದೆ. 30 ದಿನಕ್ಕೆ 120 ಗಂಟೆಯಾಗುತ್ತಿದೆ. ನಮ್ಮ ಜೀವನದ ಈ ಅತ್ಯಮೂಲ್ಯ ಸಮಯವನ್ನು ವ್ಯರ್ಥ ಮಾಡಲಾಗುತ್ತಿದೆ. ಇದೇ ಸಮಯವನ್ನು ಹೊಸ ಕೌಶಲಗಳನ್ನು ಕಲಿಯುವ ಕಡೆ ವ್ಯಯಿಸಿದರೆ ಅದರಿಂದಾಗು ಪ್ರಯೋಜನಗಳನ್ನು ಕಲ್ಪಿಸಿಕೊಳ್ಳಿ. ಸಮಯವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಜಾಣತನವನ್ನು ಆಯ್ಕೆ ಮಾಡಿಕೊಳ್ಳಿ ಎಂದು ತನಯ್​ ಪ್ರತಾಪ್​ ಟ್ವೀಟ್​ ಮಾಡಿದ್ದಾರೆ.
People often complain about not having enough time, yet they find themselves glued to the IPL for hours on end.
That’s 4 hrs/day, 30 days/month – 120 hrs wasted.
Imagine the possibilities if those hours were spent learning a new skill.
Choose wisely how you invest your time.
— Tanay Pratap (@tanaypratap)May 30, 2023

ಇದೀಗ ತನಯ್​ ಅವರ ಟ್ವೀಟ್​ ಭಾರೀ ಚರ್ಚೆಯಾಗುತ್ತಿದೆ. ಆದರೆ, ಅನೇಕರು ತನಯ್​ ಅವರ ಅಭಿಪ್ರಾಯವನ್ನು ಒಪ್ಪಿಕೊಂಡಿಲ್ಲ. ಎಲ್ಲ ಸಮಯವನ್ನು ಕಲಿಯುವುದಕ್ಕೆ ಮೀಸಲಿಡಲು ಸಾಧ್ಯವಿಲ್ಲ ಎಂದಿದ್ದಾರೆ. ತಮ್ಮಷ್ಟಕ್ಕೆ ತಾವು ಎಂಜಾಯ್​ ಮಾಡಲು ಮತ್ತು ವಿಶ್ರಾಂತಿ ಪಡೆಯಲು ಸಮಯವನ್ನು ಮೀಸಲಿಡಬೇಕಾಗುತ್ತದೆ. ಸ್ವಲ್ಪವಾದರೂ ಎಂಜಾಯ್​ ಮಾಡಲು ಜನರನ್ನು ಬಿಡಬೇಕು ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ.
ಯಾರಾದರೂ ಹೊಸ ಕೌಶಲ್ಯವನ್ನು ಕಲಿಯಲು ದಿನವಿಡಿ ಸಮಯ ವ್ಯಯಿಸಿ, ರಾತ್ರಿಯಲ್ಲಿ ಪಂದ್ಯವನ್ನು ವೀಕ್ಷಿಸಿದರೆ ಏನು? ಸಂತೋಷವಿಲ್ಲದ ಜೀವನವು ಕೆಲಸ ಮಾಡಲು ಪ್ರೇರಣೆಯಿಲ್ಲದ ಕೌಶಲ್ಯದಂತೆಯೇ ಇರುತ್ತದೆ ಎಂದು ಇನ್ನೊಬ್ಬ ನೆಟ್ಟಿಗ ತನಯ್​ ಅವರಿಗೆ ಉತ್ತರ ನೀಡಿದ್ದಾರೆ. ಐಪಿಎಲ್​ ವರ್ಷಕ್ಕೆ ಒಮ್ಮೆ ಬರುತ್ತದೆ. ಸ್ವಲ್ಪ ಎಂಜಾಯ್​ಗಾಗಿ ನೋಡಿದರೆ ತಪ್ಪೇನಿಲ್ಲ. ಆದರೆ, ಐಪಿಎಲ್​ ಹೆಸರಿನಲ್ಲಿ ನಡೆಯುವ ಜೂಜಾಟಗಳಲ್ಲಿ ಭಾಗಿಯಾಗಬಾರದು ಎಂಬ ಅಭಿಪ್ರಾಯಗಳು ಕೇಳಿಬಂದಿವೆ.
ತನಯ್​ ಪ್ರತಾಪ್​ ಅವರ ಟ್ವೀಟ್​ ನೋಡಿ ನಿಮಗೆ ಏನನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.(ಏಜೆನ್ಸೀಸ್​)
Let people enjoy a bit. 🙂 (I don’t watch ipl). Life cannot always be about problems, learning skills blah blah… being happy is the ultimate goal.
— Deepanshu Balyan (@deepanshubalyan)May 30, 2023

Do you know how much you wasted taking bath every day for the past year?
Average human takes 30 mins to bath.
30 mins x 365 (assuming you bath once a day)
That’s 7.6 whole day or 182.5 hours.
Wasted every year. You could have done so much more productive things while…
— Chirag Dodiya (@chiragdotco)May 30, 2023

ಉಚಿತ ಶಿಕ್ಷಣ ಕೊಡಿಸುವ ನೆಪದಲ್ಲಿ ಸಾಲ ಪಡೆದು ಕೋಟಿ ಕೋಟಿ ವಂಚನೆ!

ಇಂದು ವಿಶ್ವ ಕ್ಷೀರ ದಿನ 2023; ಈ ದಿನದ ಮಹತ್ವ, ಉದ್ದೇಶವೇನು ಗೊತ್ತಾ?

ಭೋಗಾಪುರದಲ್ಲಿ ಜೆಟ್ ವಿಮಾನ ಪತನ; ಪ್ಯಾರಾಚೂಟ್ ಬಳಸಿ ಇಬ್ಬರು ಪೈಲಟ್​ಗಳು ಪ್ರಾಣಾಪಾಯದಿಂದ ಪಾರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + seven =
Remember me
