ಬೆಂಗಳೂರು:ಪೂಜೆಯ ಸಮಯದಲ್ಲಿ ನಮ್ಮ ಕುಟುಂಬ ದೇವರಿಗೆ ಆವಕಾಡೊ ಅರ್ಪಿಸಲಾಯಿತು ಎಂದು ಪೋಸ್ಟ್​ ಮಾಡುವ ಮೂಲಕ ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ಕಿಡಿ ಹೊತ್ತಿಸಿದ್ದಾರೆ.
ಸಾಮಾನ್ಯವಾಗಿ ದೇವರಿಗೆ ಆವಕಾಡೊ ಇಡುವುದಿಲ್ಲ. ಅಲ್ಲದೆ, ಆವಕಾಡೊ ತುಂಬಾ ದುಬಾರಿ ಕೂಡ ಹೌದು. ಬಾಳೆಹಣ್ಣು, ಸೇಬು, ದ್ರಾಕ್ಷಿ, ಕಿತ್ತಳೆ ಹಾಗೂ ದಾಳಿಂಬೆ ಸೇರಿದಂತೆ ಮುಂತಾದ ಹಣ್ಣುಗಳನ್ನು ಇಡುವುದು ಸಹಜ. ಆದರೆ, ಆವಕಾಡೊವನ್ನು ಎಲ್ಲಿಯೂ ಇಡುವುದಿಲ್ಲ. ಆದರೆ, ಧರ್ಮೇಶ್​ ಬಾ (Dharmesh Ba) ಹೆಸರಿನ ಎಕ್ಸ್​ ಬಳಕೆದಾರ ತಮ್ಮ ಮನೆಯಲ್ಲಿ ಪೂಜೆಯ ಸಮಯದಲ್ಲಿ ದೇವರಿಗೆ ಆವಕಾಡೊ ಇಡಲಾಯಿತು ಎಂದು ಪೋಸ್ಟ್​ ಮಾಡಿದ್ದಾರೆ. ಇದೀಗ ಈ ಪೋಸ್ಟ್​ ವೈರಲ್​ ಆಗಿದ್ದು, ನೆಟ್ಟಿಗರು ಬಗೆ ಬಗೆಯ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ.
ಧರ್ಮೇಶ್​ ಮಾಡಿರುವ ಪೋಸ್ಟ್​ನಲ್ಲಿ ಅವರ ಮನೆಯ ಪೂಜಾ ಮಂದಿರದಲ್ಲಿ ಅವರ ಕುಟುಂಬವು ದೇವರಿಗೆ ಅರ್ಪಿಸಿದ ಎರಡು ಆವಕಾಡೊಗಳ ಚಿತ್ರವನ್ನು ಒಳಗೊಂಡಿದೆ. ಸದ್ಯ ನಮ್ಮ ಪಾಲಕರು ಊರಿನಲ್ಲಿದ್ದಾರೆ ಮತ್ತು ಅವರು ದೇವರಿಗೆ ಅರ್ಪಿಸುವುದನ್ನು ಬಾಳೆಹಣ್ಣಿನಿಂದ ಆವಕಾಡೊಗೆ ಅಪ್​ಗ್ರೇಡ್​ ಮಾಡಲಾಗಿದೆ ಎಂದು ಧರ್ಮೇಶ್​ ಬರೆದುಕೊಂಡಿದ್ದಾರೆ.
Parents are in town and their offerings to God have been upgraded to avocado from bananas.pic.twitter.com/vSgnsjFYor
— Dharmesh Ba (@dharmeshba)July 30, 2024

ಭಾರತದಲ್ಲಿ ಸಾಂಪ್ರದಾಯಿಕ ಪೂಜೆಗಳ ಸಂದರ್ಭದಲ್ಲಿ ಬಾಳೆಹಣ್ಣು, ಸೇಬು ಮತ್ತು ಕಿತ್ತಳೆಯಂತಹ ಹಣ್ಣುಗಳನ್ನು ನೀಡಲಾಗುತ್ತದೆ. ಆದಾಗ್ಯೂ, ಆವಕಾಡೊವನ್ನು ನೀಡುವ ಈ ಕುಟುಂಬದ ಆಯ್ಕೆಯೇ ವಿಭಿನ್ನವಾಗಿದೆ. ಅಂದಹಾಗೆ ಈ ಆವಕಾಡೊ ಹಣ್ಣು ಆಧುನಿಕತೆ, ಆರೋಗ್ಯ-ಪ್ರಜ್ಞೆಯ ಜೀವನಶೈಲಿಗೆ ಹೆಚ್ಚು ಸಂಬಂಧಿಸಿದೆ. ಹೀಗಾಗಿ ದೇವರ ನೈವೇದ್ಯಕ್ಕೆ ಈ ಹಣ್ಣನ್ನು ಇಟ್ಟಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈವಿಧ್ಯಮಯ ಪ್ರತಿಕ್ರಿಯೆಗಳನ್ನು ಗಳಿಸಿದೆ.
ಕೆಲ ನೆಟ್ಟಿಗರು ಆವಕಾಡೊ ಬಳಕೆಯನ್ನು “ಅನವಶ್ಯಕ” ಎಂದು ಹೇಳಿದರೆ, ಇತರರು ಇದನ್ನು ಹಳೆಯ ಆಚರಣೆಗೆ ನಿರುಪಯುಕ್ತ ಮತ್ತು ಇದೊಂದು ಮನರಂಜನಾ “ಅಪ್​ಗ್ರೇಡ್​” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಆವಕಾಡೊ ಅರ್ಪಿಸುವ ಮೂಲಕ ಭಕ್ತಿಯ ಮಟ್ಟ ಮೇಲಕ್ಕೆ ಹೋಗಿದೆ ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.

ಅಂದಹಾಗೆ ಹಿಂದು ಪೂಜೆಗಳಲ್ಲಿ ದೇವರಿಗೆ ಕೃತಜ್ಞತೆಯ ಸೂಚಕವಾಗಿ ಹಣ್ಣುಗಳು, ಹೂವುಗಳು ಮತ್ತು ಸಿಹಿತಿಂಡಿಗಳನ್ನು ಸಾಮಾನ್ಯವಾಗಿ ಅರ್ಪಿಸಲಾಗುತ್ತದೆ. ಅಲ್ಲದೆ, ಅಕ್ಕಿ, ತೆಂಗಿನಕಾಯಿ ಮತ್ತು ಧೂಪವನ್ನು ಸಹ ದೇವರಿಗೆ ಅರ್ಪಿಸಲಾಗುತ್ತದೆ.(ಏಜೆನ್ಸೀಸ್​)
ಯಾವಾಗಲೂ ಸೀರಿಯಸ್​ ಆಗಿರುತ್ತಿದ್ದ ಗಂಭೀರ್​​ ಈ ಪರಿ ನಗಲು ಕಾರಣ ಯಾರು ಗೊತ್ತಾ? ನಿಜಕ್ಕೂ ಅಚ್ಚರಿಪಡ್ತೀರಾ!

ಸೂರ್ಯಕುಮಾರ್​, ರಿಂಕು ರೀತಿ ಮತ್ತೊಬ್ಬ ಬ್ಯಾಟರ್​ನನ್ನು ಬೌಲರ್​ ಆಗಿ ಬದಲಾಯಿಸಿದ ಗೌತಮ್​ ಗಂಭೀರ್​!​

ವಯನಾಡು ಭೂಕುಸಿತ: ಸಾವಿನ ಸಂಖ್ಯೆ 308ಕ್ಕೆ ಏರಿಕೆ, ಬದುಕುಳಿದವರ ಶೋಧಕ್ಕೆ ಡ್ರೋನ್ ಆಧಾರಿತ ರಾಡಾರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
