ಬೆಂಗಳೂರು:ತುಳುನಾಡಿನ ಗಡಿಯನ್ನು ದಾಟಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳ ನಡೆಯುತ್ತಿದೆ. ನವೆಂಬರ್ ತಿಂಗಳ 25 ಮತ್ತು 26ನೇ ತಾರೀಕಿನಂದು ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ. ಈ ಕ್ಷಣಕ್ಕಾಗಿ ಬೆಂಗಳೂರಿನ ಅರಮನೆ ಮೈದಾನ ಸಿದ್ಧಗೊಂಡಿದೆ.
ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿರುವುದು ಖುಷಿಯ ವಿಷಯ ಅಂದ್ರೆ ಕಂಬಳದ ವೀಕ್ಷಕ ವಿವರಣೆ ತುಳು ಮತ್ತು ಕನ್ನಡ ಭಾಷೆಯಲ್ಲಿ ಇರಲಿದ್ದು, ಜನರಿಗೆ ಎರಡು ಭಾಷೆಗಳ ಶ್ರೀಮಂತಿಕೆ ಪರಿಚಯವಾಗಲಿದೆ.
ಕಂಬಳದ ವೀಕ್ಷಕ ವಿವರಣೆ ತುಳು ಮತ್ತು ಕನ್ನಡ ಭಾಷೆಯಲ್ಲಿ ರಾಜೀವ್​ ಶೆಟ್ಟಿ ಯಡತೂರ್​​, ನಿರಂಜನ್​ ರೈ ಮತನಂತಬೆಟ್ಟು, ಗುಣಪಾಲ ಕದಂಬ ಅವರು ಕಂಬಳದ ವೀಕ್ಷಕ ವಿವರಣೆ ನೀಡಲಿದ್ದಾರೆ.
ಭಾರತದ ಕರ್ನಾಟಕ ರಾಜ್ಯದ ಪಶ್ಚಿಮ ತೀರದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳಲ್ಲಿ ಇದು ಹೆಚ್ಚಾಗಿ ಚಾಲ್ತಿಯಲ್ಲಿದೆ. ತುಳು ಮಾತಾಡುವವರನ್ನು ತುಳುವರು (ತುಳುವಿನಲ್ಲಿ ತುಳುವೆರ್) ಎಂದು ಕರೆಯುತ್ತಾರೆ.
ಕರ್ನಾಟಕದಲ್ಲಿ ಬಳಸಲಾಗುವಕನ್ನಡ ಭಾಷೆಯನ್ನುದೇಶದ ಪ್ರಮುಖ ಭಾಷೆಗಳಲ್ಲಿ ಒಂದಾಗಿ ಭಾರತೀಯ ಸಂವಿಧಾನವು ಗುರುತಿಸಿದೆ. ಕರ್ನಾಟಕದ ಬಹುತೇಕ ಜನರಿಗೆ ಕನ್ನಡವು ಮಾತೃಭಾಷೆಯಾಗಿದೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾ, ಹಾಗೂ ದಮನ್ ಹಾಗೂ ದಿಯುಗಳಲ್ಲಿ ಕನ್ನಡವನ್ನು ಮಾತೃ ಭಾಷೆಯಾಗಿ ಬಳಸುವ ಗಣನೀಯ ಸಂಖ್ಯೆಯ ಜನರಿದ್ದಾರೆ.
ಮಂಗಳೂರಿನಿಂದ ಬರಲಿದೆ ಕೋಣಗಳಿಗೆ ಕುಡಿಯುವ ನೀರು:ಕರಾವಳಿ ಮತ್ತು ಬೆಂಗಳೂರಿನ ವಾತಾವರಣ, ಜೀವನ ಶೈಲಿ, ಆಹಾರ ಪದ್ಧತಿ, ನೀರಿನಲ್ಲಿ ಸಾಕಷ್ಟು ವ್ಯತ್ಯಾಸ ಇರುವುದರಿಂದ ಬೆಂಗಳೂರಿನ ಆಹಾರ, ನೀರು ಕೊಡುವುದರಿಂದ ಕೋಣಗಳ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹೀಗಾಗಿ ಕುಡಿಯಲು ನೀರನ್ನು ಸಹ ಕರಾವಳಿಯಿಂದಲೇ ತರಲು ಉದ್ದೇಶಿಸಲಾಗಿದೆ.
ಕಂಬಳದ ಕೋಣಗಳಿಗೆ ಕುಡಿಯಲು ಮಾಲೀಕರ ಬಾವಿಯ ನೀರನ್ನೇ ನೀಡಲಾಗುತ್ತದೆ. ಕರಾವಳಿಯಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತೆರಳಿದಾಗ ನೀರು ಬದಲಾದರೂ ಭೇದಿ ಆರಂಭವಾಗುತ್ತದೆ. ಹೀಗಾಗಿ ಬೆಂಗಳೂರಿಗೆ ಕರಾವಳಿಯ ಬಾವಿ ನೀರನ್ನೇ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ. ಕೋಣಗಳನ್ನು ಕರೆದುಕೊಂಡು ಹೋಗುವಾಗ ನೀರು ತುಂಬಿದ ಟ್ಯಾಂಕರ್‌ಗಳು ಕೂಡ ಜೊತೆಯಲ್ಲಿ ಸಾಗಲಿವೆ. ವರ್ಷಗಟ್ಟಲೆ ಒಂದೇ ಬಾವಿಯ ನೀರು ಕುಡಿದ ಕೋಣಗಳಿಗೆ ಇಲ್ಲಿನ ನದಿ ನೀರು ಕುಡಿದರೂ ತೊಂದರೆಯಾಗುತ್ತದೆ. ಹುರುಳಿ, ಬೈ ಹುಲ್ಲಿನ ಸಮಸ್ಯೆ ಇಲ್ಲ. ನೀರಿನ ವಿಷಯದಲ್ಲಿ ಅತಿಸೂಕ್ಷ್ಮವಾಗಿ ಇರಬೇಕು’ ಎಂದು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ.
ಊರು ಬಿಟ್ಟು ಬೆಂಗಳೂರು ಕಂಬಳಕ್ಕೆ ಬರುವ ಕೋಣಗಳಿಗೆ ಮಂಗಳೂರಿಂದಲೇ ಬರುತ್ತೆ ಕುಡಿಯುವ ನೀರು;ಯಾಕೆ ಗೊತ್ತಾ?

ಜಾತಿಗಣತಿ ವರದಿ ಸಲ್ಲಿಕೆಯಾಗುವವರೆಗೂ ಊಹೆಗಳ ಮೇಲೆ ಮಾತನಾಡುವುದು ಅರ್ಥಹೀನ : ಸಿದ್ದರಾಮಯ್ಯ



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 9 =
Remember me
