ಬೆಂಗಳೂರು:ಯೋಧರೊಬ್ಬರು ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್​ನಲ್ಲೇ ಬರೀ 36 ಗಂಟೆಗಳಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡುವ ಮೂಲಕ ಇಂಡಿಯಾ ಬುಕ್​ ಆಫ್ ರೆಕಾರ್ಡ್ಸ್​ನಲ್ಲಿ ದಾಖಲೆ ಬರೆದಿದ್ದಾರೆ. ಬೆಂಗಳೂರಿನ 515 ಆರ್ಮಿ ಬೇಸ್​ನ ಕ್ರಾಫ್ಟ್ಸ್​​​​ಮ್ಯಾನ್ ರಾಹುಲ್ ಕುಮಾರ್ ಈ ಸಾಧನೆ ಮಾಡಿದ್ದಾರೆ.
ಇವರು ಜುಲೈ 8-9ರ ಒಟ್ಟು 36 ಗಂಟೆಗಳಲ್ಲಿ 650 ಕಿ.ಮೀ. ದೂರವನ್ನು ಕ್ರಮಿಸಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಪುರುಷರ ವಿಭಾಗದಲ್ಲಿ ಅತಿವೇಗದ ಏಕಾಂಗಿ ಸೈಕಲ್ ಸವಾರಿ ಎಂಬ ದಾಖಲೆಯನ್ನು ಇಂಡಿಯನ್ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ಬರೆದಿದ್ದಾರೆ. ಹೊಸೂರು, ಸೇಲಂ, ಮಧುರೈ ಮೂಲಕ ಈ ಪ್ರಯಾಣ ಸಾಗಿದ್ದು, ಇದನ್ನು ಇಂಡಿಯನ್ ಬುಕ್​ ಆಫ್​ ರೆಕಾರ್ಡ್ಸ್​ ಆನ್​ಲೈನ್​ನಲ್ಲೇ ನಿಗಾ ವಹಿಸಿತ್ತು. ಪ್ರಯಾಣದುದ್ದಕ್ಕೂ ಮಳೆಯಾಗುತ್ತಿದ್ದರೂ ಇವರು ಗುರಿಯನ್ನು ಯಶಸ್ವಿಯಾಗಿ ತಲುಪಿದ್ದಾರೆ.
‘ಫಿಟ್​​ನೆಸ್​ ಎ ವೇ ಆಫ್ ಲೈಫ್​’ ಎಂಬುದರ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬ್ರಿಗೇಡಿಯರ್ ಎಂಆರ್​ಕೆ ರಾಜೇಶ್ ಪಣಿಕರ್​, ಬ್ರಿಗೇಡಿಯರ್ ಅಲೋಕ್ ಜೈನ್ ಅವರು ಜು. 8ರ ಬೆಳಗ್ಗೆ 6ಕ್ಕೆ ಬೆಂಗಳೂರಿನ 515 ಆರ್ಮಿ ಬೇಸ್​ ವರ್ಕ್​ಶಾಪ್​ನಲ್ಲಿ ಈ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿದರು. ರಾಹುಲ್ ಜು.9ರಂದು ತಮಿಳುನಾಡಿನ ಕನ್ಯಾಕುಮಾರಿಯನ್ನು ತಲುಪಿದ್ದರು.

ದೇವೇಗೌಡರ ಮನೆಯಲ್ಲಿ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ: ಬೆಂಬಲದ ಕುರಿತು ಸದ್ಯಕ್ಕಿಷ್ಟೇ ತೀರ್ಮಾನ..

ಫುಡ್​ ಡೆಲಿವರಿ ಬಾಯ್ ಆಗಿ ಮನೆ ಮನೆಗೂ ತೆರಳಿದ ನಾಯಕ ನಟ!

ಕನ್ಹಯ್ಯ ಲಾಲ್​ ಕೊಲೆ ಪ್ರಕರಣ; ಇನ್ನೊಬ್ಬ ಆರೋಪಿಯ ಬಂಧನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 17 =
Remember me
