ಬೆಂಗಳೂರು: ಓಲಾ, ಊಬರ್​​​ನಲ್ಲಿ ಹೀಗೆ ವಿವಿಧ ಅಗ್ರಿಗೇಟರ್ಸ್​​ ಆಪ್​ನಲ್ಲಿ ಕ್ಯಾಬ್​ ಅಥವಾ ಆಟೋ ಬುಕ್​​ ಮಾಡೋದು ಸಿಕ್ಕಾಪಟ್ಟೆ ಕಾಸ್ಟ್ಲಿ ಅನ್ನೋದು ಜನಾಭಿಪ್ರಾಯ.ಇನ್ನು ಅಪರಿಚಿತರೊಂದಿಗೆ ಆಟೋದಲ್ಲಿ ಪ್ರಯಾಣ ಮಾಡಿ ಕೊನೆಗೆ ಹಣ ನೀಡುವ ಸಂದರ್ಭದಲ್ಲಿ ಕೆಲವೊಂದು ಸಾರಿ ಒಬ್ಬರಿಗೆ ಜಾಸ್ತಿ ಅಥವಾ ಕಡಿಮೆ ಬರುವುದುಂಟು ಇದರಿಂದ ಗೊಂದಲವಾಗುತ್ತದೆ. ಹೆಚ್ಚಾಗಿ ಈ ಸಂದರ್ಭ ನಿರ್ಮಾಣ ಆಗೋದು ಶೇರ್​ ಆಟೋಗಳಲ್ಲಿ. ಈ ತೊಂದರೆಯನ್ನ ನಿವಾರಿಸೋಕೆ ಇದೀಗ ಬೆಂಗಳೂರಿನ ನಿವಾಸಿ 54 ವರ್ಷದ ಷಣ್ಮುಗಂ ಎಂಬುವವರು ಶೇರ್​​ ಆಟೋ ಮೀಟರ್​​ (Share Auto Meter) ತಯಾರಿಸಿದ್ದಾರೆ.
ಷಣ್ಮುಗಂ ಮಗಳು ಸಾಫ್ಟ್​​ವೇರ್​​ ಇಂಜಿನಿಯರ್​​​ ಆಗಿದ್ದು, ಕೊರೊನಾ ಮೊದಲನೇ ಅಲೆಯಲ್ಲಿ ಷಣ್ಮುಗಂ ಮಗಳ ಸಹಾಯದಿಂದ ಈ ಶೇರ್​​ ಆಟೋ ಮೀಟರನ್ನ ತಯಾರಿಸಿದ್ದಾರೆ.
ಹೈದರಾಬಾದ್‌, ಕೊಲ್ಕತ್ತಾ ನಗರಗಳಲ್ಲಿ ಈ ಶೇರ್​​ ಆಟೋಗಳನ್ನ ಜನರು ಬಳಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೂ ಕಾಲಿಡಲಿವೆ. ಈ ಶೇರಿಂಗ್​ ಆಟೋರಿಕ್ಷಾಗಳಿಗೆ ಈ ಮೀಟರ್​​​​​ ಅಳವಡಿಸುವುದರಿಂದ ಇದರಿಂದ ಚಾಲಕರಿಗೆ ಹೆಚ್ಚು ಲಾಭವಾಗುತ್ತದೆ. ಆಟೋ ಚಾಲಕರು ಕಡಿಮೆ ಪ್ರಯಾಣದಲ್ಲಿ ಹೆಚ್ಚು ಹಣವನ್ನು ಗಳಿಸಬಹುದು. ಚಾಲಕರು ಮತ್ತು ಪ್ರಯಾಣಿಕರಿಗೆ ತೊಂದರೆಯಾಗದ ಸರಿಯಾದ ಬೆಲೆ ನಿಗದಿ ಪಡಿಸುವಂತಹ ಮೀಟರ್​​ ಈಗಾಗಲೇ ತಯಾರಿಯಾಗಿದ್ದು, ಈ ಮೀಟರ್​​ಗಳ ಅಳವಡಿಕೆಗೆ ಕಾನೂನು ತೊಡಕು ಉಂಟಾಗಿದೆ.
ಆಟೋರಿಕ್ಷಾಗಳಲ್ಲಿ ಈ ಮೀಟರನ್ನ ಅಳವಡಿಸಲು ಸಾಧ್ಯವೇ?ಈ ಬಗ್ಗೆ ಮಾತನಾಡಿದ ಷಣ್ಮುಗಂ ಈ ಮೀಟರ್​​ ಅನ್ನು ಆಟೋರಿಕ್ಷಾಗಳಲ್ಲಿ ಅಳವಡಿಸಲು ಅನುಮತಿ ನೀಡುವಂತೆ ಆರ್‌ಟಿಒ ಸಿಬ್ಬಂದಿಯನ್ನು ಭೇಟಿ ಮಾಡಿದೆ. ಕಳೆದ ತಿಂಗಳು ಆಟೋರಿಕ್ಷಾ ಚಾಲಕರ ಒಕ್ಕೂಟ (ARDU) ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ ಸಭೆಯಲ್ಲಿ ನನ್ನ ಮೀಟರ್ ಬಗ್ಗೆ ಚರ್ಚಿಸಿದ್ದಾರೆ. ಅಲ್ಲಿಯೂ ಕಾನೂನು ತೊಡಕು ಅಡ್ಡ ಬಂತು ಎಂದು ಹೇಳಿದರು.ಆದರೆ ಅವರು ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡುವವರೆಗೆ ಆಟೋರಿಕ್ಷಾಗಳಲ್ಲಿ ಈ ಮೀಟರ್​​ ಅಳವಡಿಸಲು ಸಾಧ್ಯವಿಲ್ಲ ಅಂತ ಜಾರಿಕೊಂಡರು ಎಂದು ಷಣ್ಮುಗಂ ಹೇಳಿದ್ದಾರೆ.
ಕೆಲ ವರ್ಷಗಳ ಕಾಲ ಖಅಸಗಿ ಕಂಪೆನಿಯೊಂದರಲ್ಲಿ ಕಾರ್ಯ ನಿರ್ವಹಿಸಿರುವ ಷಣ್ಮುಗಂ, 10ನೇ ತರಗತಿವರೆಗು ಮಾತ್ರ ಓದಿದ್ದಾರೆ. ಗಮನಾರ್ಹ ವಿಚಾರ ಅಂದ್ರೆ ಕೆಲ ದಿನಗಳ ಕಾಲ ಆಟೋ ಚಾಲಕನಾಗಿಯೂ ಕಾರ್ಯ ನಿರ್ವಹಿಸಿರುವ ಇವರು ಮೀಟರ್ ತಯಾರಿಕಾ ಕಂಪನಿಯಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 3 =
Remember me
