ಬೆಂಗಳೂರು:ಹೊಟೇಲ್​ಗೆ ಊಟಕ್ಕೆ ಹೋದರೆ ಎಷ್ಟು ಬಿಲ್​ ಆಗಬಹುದು. ಇದನ್ನೆಲ್ಲ ಯೋಚನೆ ಮಾಡದೆ ಮೊದಲು ಊಟ ಮಾಡಿ ಮುಗಿಸುತ್ತೇವೆ. ಇದಕ್ಕೆ ನಮ್ಮ ಬಜೆಟ್​ಗೆ ಅನುಗುಣವಾಗಿ ಹೊಟೇಲ್​ ಆಯ್ದುಕೊಂಡಿರುತ್ತವೆ.
ಆದರೆ ಈ ಮನುಷ್ಯ 2019ರಲ್ಲಿ ಊಟಕ್ಕಾಗಿ ಖರ್ಚು ಮಾಡಿರುವುದು ಬರೋಬ್ಬರಿ 2.8 ಲಕ್ಷ ರೂಪಾಯಿಗಳನ್ನು. ಹೌದು, ಇದು ನಡೆದಿರುವುದು ಪ್ರಪಂಚದ ಯಾವುದೋ ಮೂಲೆಯಲ್ಲಿ ಅಲ್ಲ. ಬದಲಿಗೆ ಈತ ಬೆಂಗಳೂರಿನವನು.
2019ರಲ್ಲಿ ಈ ರೀತಿ ಬಿಲ್​ ಬಗ್ಗೆ ಯೋಚನೆ ಮಾಡದೆ ಊಟ ಮಾಡಿದವರ ವಿವರ ಈಗ ಲಭ್ಯವಾಗಿದೆ. ರೆಸ್ಟೂರೆಂಟ್​ ಸೆಲ್ಯೂಷನ್​ ಕಂಪನಿ ಡೈನ್​ ಔಟ್​ ಎಂಬ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಭಾರತ ದೇಶಾದ್ಯಂತದ ವರದಿಗಳಿವೆ.
ಭಾರತ ದೇಶದಲ್ಲಿ ಉಳಿದೆಲ್ಲ ನಗರಗಳಿಗಿಂತ ಬೆಂಗಳೂರಿನಲ್ಲಿ ಹೆಚ್ಚು ಹೊಟೇಲ್​ಗಳಲ್ಲಿ ಊಟ ಮಾಡುವವರು ಹೆಚ್ಚು ಎನ್ನುತ್ತದೆ ಆ ವರದಿ. ಇದೇ ವರದಿಯಲ್ಲಿ ಬೆಂಗಳೂರಿಗನೊಬ್ಬ 2,76,988 ರೂಪಾಯಿಯಷ್ಟು ಬಿಲ್​ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಅದರಲ್ಲೂ ಬೆಂಗಳೂರು ಒಂದರಲ್ಲೇ ಒಂದು ದಿನಕ್ಕೆ 10 ಲಕ್ಷ ಮಂದಿ ಹೊಟೇಲ್​ ಮೇಲೆ ಅವಲಂಬಿತರಾಗಿದ್ದಾರೆ.
ವರದಿ ಪ್ರಕಾರ ವರ್ಷದಲ್ಲಿ 5 ಬಿಲಿಯನ್​ನಷ್ಟು ಮಂದಿ ಹೊಟೇಲ್​ನಲ್ಲಿ ಊಟ ಮಾಡುತ್ತಾರೆ. ಪ್ರತಿ ಗಂಟೆಗೆ 4566 ಟೇಬಲ್​ಗಳು ಊಟಕ್ಕಾಗಿ ಬುಕ್​ ಮಾಡಲಾಗುತ್ತದೆ. 300 ರೂಪಾಯಿಗಳಿಂದ 1600 ರೂಪಾಯಿಗಳವರೆಗೆ ಒಂದು ಊಟಕ್ಕೆ ವ್ಯಯಿಸಲಾಗುತ್ತದೆ ಎನ್ನುತ್ತದೆ ವರದಿ.
ಇನ್ನು ರಾಷ್ಟ್ರ ರಾಜದಾನಿ ದೆಹಲಿ ಕತೆಯೇ ಬೇರೆ ಇದೆ. ಇಲ್ಲಿನ ಒಂದುಮ ಕುಟುಂಬ ವರ್ಷಕ್ಕೆ 179 ಬಾರಿ ಹೊಟೇಲ್​ ಊಟಕ್ಕೆ ತೆರಳುತ್ತಾರೆ. ಜತೆಗೆ 3.5 ಲಕ್ಷ ರೂಪಾಯಿಗಳನ್ನು ಆ್ಯಪ್​ ಬಳಸುವ ಮೂಲಕ ಉಲಿತಾಯ ಮಾಡುತ್ತಾರೆ.
ಇಡೀ ಭಾರತದಲ್ಲಿ ಅತಿ ಹೆಚ್ಚು ಊಟ ಮಾಡುವ ಅಥವಾ ಆರ್ಡರ್​ ಮಾಡಿರುವುದು ನಾರ್ಥ ಇಂಡಿಯನ್​ ಶೈಲಿಯ ಊಟಕ್ಕೆ ಎನ್ನುವುದು ವಿಶೇಷ!(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 20 =
Remember me
