ಬೆಂಗಳೂರು:ವರ್ಷಕ್ಕೆ 17 ಲಕ್ಷ ರೂ. ಸಂಬಳದ ಉದ್ಯೋಗದ ಆಫರ್​ ಅನ್ನು ಯಾರಾದರೂ ಬಿಡುತ್ತಾರಾ? ಖಂಡಿತವಾಗಿ ಇಲ್ಲ. ಒಂದು ಬಿಟ್ಟರೆ ಅವರಂಥ ಮುಟ್ಟಾಳ ಯಾರೂ ಇಲ್ಲ ಅಂತಾ ಟೀಕಿಸುತ್ತಾರೆ. ಪ್ರತಿಯೊಬ್ಬ ಟೆಕ್ಕಿಗೂ ಐಟಿ ದಿಗ್ಗಜ ಕಂಪನಿಗಳಾದ ಟಿಸಿಎಸ್​, ಇನ್ಫೋಸಿಸ್​ ಮತ್ತು ವಿಪ್ರೋ ಕಂಪನಿಗಳಲ್ಲಿ ಕೆಲಸ ಮಾಡಬೇಕು ಎಂಬುದು ಕನಸಾಗಿರುತ್ತದೆ. ಆದಾಗ್ಯೂ, ಬೆಂಗಳೂರಿನ ಈ 21 ವರ್ಷದ ಐಟಿ ವೃತ್ತಿಪರ ಮಹಿಳೆ ದೊಡ್ಡ ಐಟಿ ಸಂಸ್ಥೆಗಳ ಉದ್ಯೋಗ ಆಫರ್‌ಗಳನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ ಇತರ 10 ಉದ್ಯೋಗ ಆಫರ್‌ಗಳನ್ನು ಬೇಡ ಎಂದಿದ್ದಾರೆ.
ಇದಕ್ಕೆ ಕಾರಣ ಬೇರೇನೂ ಅಲ್ಲ ಅದು ಇಂಟರ್ನ್ಶಿಪ್​ಗೋಸ್ಕರ. ಹೌದು, ಓದುತ್ತಿರುವುದು ಸತ್ಯ. ರಿತಿ ಕುಮಾರಿ ಅವರು TCS, Infosys ಮತ್ತು Wipro ಸೇರಿದಂತೆ 13 ಉದ್ಯೋಗ ಆಫರ್‌ಗಳನ್ನು ಪಡೆದಿದ್ದಾರೆ ಮತ್ತು ಕಂಪನಿಯೊಂದರಲ್ಲಿ ವಾರ್ಷಿಕ 17 ಲಕ್ಷ ರೂಪಾಯಿಗಳ ಸಂಬಳದ ಆಫರ್​ ಸಹ ನೀಡಲಾಗಿತ್ತು.
ಆದರೆ ತನ್ನ ಹೃದಯ ಹೇಳಿದಂತೆ ಕೇಳುವುದನ್ನು ಬಯಸಿದ ರಿತಿ ಕುಮಾರ್​, ಆಫರ್​ಗಳನ್ನು ಪಡೆಯುವ ಬದಲಾಗಿ ವಾಲ್​ಮಾರ್ಟ್​ ಕಂಪನಿಯಲ್ಲಿ ಇಂಟರ್ನ್ಶಿಪ್​ ಆಯ್ಕೆ ಮಾಡಿಕೊಂಡರು. ಇದೀಗ ಅವರು ವಾರ್ಷಿಕವಾಗಿ 20 ಲಕ್ಷ ರೂ. ಅಧಿಕ ಸಂಪಾದನೆ ಮಾಡುತ್ತಿದ್ದಾರೆ. ಅದು ಕೂಡ ಕೇವಲ 21ನೇ ವಯಸ್ಸಿನಲ್ಲಿ.
ಇದನ್ನೂ ಓದಿ:ಅತ್ಯಾಚಾರ ಪ್ರಕರಣ: ಅಧಿಕಾರಿಯ ಕ್ರೌರ್ಯಕ್ಕೆ ಬಾಲಕಿಯ ವಿದ್ಯಾಭ್ಯಾಸ ಹಾಳು, ಆರೋಪಿ ಖಾಖಾನ ಪತ್ನಿ ಸೀಮಾ ಕಿಶೋರಿ ಬಾಲಕಿಗೆ ಏನೆನೆಲ್ಲಾ ತೊಂದರೆ ಕೊಟ್ರು?
ರಿತಿ ಕುಮಾರಿ ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ ಅವರು 2022 ರ ಜನವರಿಯಿಂದ 2022ರ ಜುಲೈವರೆಗೆ ವಾಲ್‌ಮಾರ್ಟ್‌ನಲ್ಲಿ ಇಂಟರ್ನ್ ಆಗಿದ್ದರು. ತನ್ನ ಇಂಟರ್ನ್‌ಶಿಪ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಅವರು ವಾಲ್‌ಮಾರ್ಟ್ ಗ್ಲೋಬಲ್ ಟೆಕ್ ಇಂಡಿಯಾ (ಬೆಂಗಳೂರು) ನಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್ ಆಗಿ ಸೇರಿಕೊಂಡರು.
ಸ್ಥಿರತೆ ಅಥವಾ ಸವಾಲು ಇವೆರಡರ ನಡುವೆ ಆಯ್ಕೆ ಮಾಡುವುದು ಕಠಿಣ ನಿರ್ಧಾರವಾಗಿತ್ತು. ಆದರೆ ಆ ಸಮಯದಲ್ಲಿ ಯಾರೂ ನನ್ನ ಸವಾಲವನ್ನು ಬೆಂಬಲಿಸದೇ ಇದ್ದಾಗ ನನ್ನ ಸಹೋದರಿ ಹೃದಯ ಮಾತನ್ನು ಅನುಸರಿಸಲು ಸಲಹೆ ನೀಡಿದರು ಎಂದು ಕುಮಾರಿ ಹೇಳಿದರು.
ನಾನು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡಿದ್ದೇನೆ, ನನ್ನ ಪೂರ್ವ-ಪ್ಲೇಸ್‌ಮೆಂಟ್ ಆಫರ್ ಸಂದರ್ಶನಗಳನ್ನು ನೀಡಿದ್ದೇನೆ ಮತ್ತು ಅಂತಿಮವಾಗಿ ವಾಲ್‌ಮಾರ್ಟ್‌ನಿಂದ ಉದ್ಯೋಗವನ್ನು ಪಡೆದುಕೊಂಡಿದ್ದೇನೆ. ಆರಂಭದಲ್ಲಿ ಲಾಭದಾಯಕ ಉದ್ಯೋಗದ ಆಫರ್‌ಗಳನ್ನು ತಿರಸ್ಕರಿಸಿದ್ದಕ್ಕಾಗಿ ನನ್ನ ಮೇಲೆ ಕೋಪಗೊಂಡಿದ್ದ ಪಾಲಕರು ಈಗ ನನ್ನ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ರಿತಿ ಕುಮಾರಿ ಹೇಳಿದರು.(ಏಜೆನ್ಸೀಸ್​)
ಒಮ್ಮೆ ಓಕೆ ಅಂದರೆ ಸಾಕು… ಚಿತ್ರರಂಗದ ಕರಾಳತೆಯನ್ನು ಬಿಚ್ಚಿಟ್ಟ ಹಾಟ್​ ಬ್ಯೂಟಿ ಸಾಧಿಕಾ ವೇಣುಗೋಪಾಲ್​

ಇಬ್ಬರು ಟಾಪ್​ ನಟರ ಸಿನಿಮಾಗೆ ಪ್ರಿಯಾಂಕಾ ಮೋಹನ್ ನಾಯಕಿ​!

ಪೊಲೀಸ್ ಪೇದೆಗೆ ಬೆದರಿಸಿ, ಅಟ್ಟಾಡಿಸಿದ ಮೂವರ ಬಂಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
