ಬೆಂಗಳೂರು: ಸಿಲಿಕಾನ್​​ ಸಿಟಿ ಬೆಂಗಳೂರನ್ನ ಐಟಿ ಹಬ್​​ ಎಂದೇ ಕರೆಯಲಾಗುತ್ತೆ. ಬೆಂಗಳೂರಿನಲ್ಲಿ ಐಟಿ ಕೆಲಸ ಮಾಡುತ್ತಿರುವ ಜನರಂತೂ ತಂತ್ರಜ್ಞಾನದೊಂದಿಗೆ ಆಳವಾದ ಸಂಪರ್ಕವನ್ನ ಹೊಂದಿರುತ್ತಾರೆ. ಇತ್ತೀಚೆಗೆ, ಬೆಂಗಳೂರಿನಲ್ಲಿ ಟೆಕ್ಕಿಯಾಗಿರುವ ಮಹಿಳೆಯೊಬ್ಬರು ತಮ್ಮ ಕೆಲಸದಲ್ಲಿ ಅನುಭವಿಸುತ್ತಿರುವ ಕೋಡಿಂಗ್​ ಸಮಸ್ಯೆ ಬಗ್ಗೆ ಟಿಂಡರ್​​ ಎಂಬ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಸಹಾಯ ಪಡೆಯಲು ಯೋಚಿಸಿದ್ದಾರೆ.
ಮಹಿಳೆಯ ಟಿಂಡರ್ ಪ್ರೊಫೈಲ್ ಅನ್ನು ರೆಡ್ಡಿಟ್ಟ್​​​​​ನಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಈ ವಿಷಯ ಎಲ್ಲೆಡೆ ವೈರಲ್​ ಆಗುತ್ತಿದೆ. 27 ವರ್ಷ ವಯಸ್ಸಿನ ವಂದನಾ ಎಂಬ ಹುಡುಗಿ, ನಾನು ನನ್ನ ಕೆಲಸದಲ್ಲಿ ಕೋಡಿಂಗ್​​​ ಮಾಡಲು ಆಗುತ್ತಿಲ್ಲ. ನಾನು ಟೆಕ್​​​ ಸಮಸ್ಯೆಯನ್ನ ಎದುರಿಸುತ್ತಿದ್ದೇನೆ. ಪೈಥಾನ್ ಎಂಬ ಪ್ರೋಗ್ರಾಮಿಂಗ್​​ಗೆ ಸಂಬಂಧಿಸಿದ ಟೆಕ್ಸ ಮಸ್ಯೆಯನ್ನ ಕಳೆದ ಮೂರು ದಿನಗಳಿಂದ ಅನುಭವಿಸುತ್ತಿದ್ದೇನೆ.
ನಾನು ಕೆಲಸ ಮಾಡುತ್ತಿರುವ ಕೋಡ್ ವಿಂಡೋಸ್ ಮತ್ತು ಲಿನಕ್ಸ್ ಕಂಪ್ಯೂಟರ್‌ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಆದರೆ ಅದು ಮ್ಯಾಕ್‌ಗೆ ಬಂದಾಗ ತೊಂದರೆ ಉಂಟು ಮಾಡುತ್ತಿದೆ.
ಕೋಡಿಂಗ್ ಸಮಸ್ಯೆಯೊಂದಿಗೆ ತನಗೆ ಸಹಾಯ ಮಾಡುವ ಯಾರನ್ನಾದರೂ ನಾನು ಡೇಟ್​​​ ಮಾಡುತ್ತೇನೆ. ಈ ಸಮಸ್ಯೆಯೊಂದಿಗೆ ನಿಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ ಡೇಟ್​​​​ ಮಾಡುವಂತಿಲ್ಲ ಎಂದು ತನ್ನ ಪ್ರೊಪೈಲ್​ನಲ್ಲಿ ಬರೆದುಕೊಂಡಿದ್ದಾಳೆ.
ಸಾಮಾನ್ಯವಾಗಿ ಡೇಟಿಂಗ್​ ಆ್ಯಪ್​​​ನಲ್ಲಿ ಪರಿಚಯವಾದವರು ಮತ್ತೊಬ್ಬರು ಹೆಸರು, ಕೆಲಸ, ವಿಳಾಸ ಅನ್ನೋದರ ಕುರಿತು ಮಾತನಾಡಿಕೊಳ್ಳುತ್ತಾರೆ. ಆದ್ರೆ ಈ ಮಹಿಳೆ, ಸಮಸ್ಯೆಯನ್ನು ಭೇದಿಸಲು ಯಾರಾದರೂ ಸಹಾಯ ಮಾಡಿದರೆ ಡೇಟ್‌ಗೆ ಹೋಗುವ ಕಲ್ಪನೆ ನನ್ನದು ಎಂದಿದ್ದಾಳೆ.
ಬೆಂಗಳೂರು ನಿವಾಸಿಗಳು ತಮ್ಮ ತಂತ್ರಜ್ಞಾನದ ಗೀಳಿನಿಂದ ಇಂಟರ್ನೆಟ್ ಅನ್ನು ಅಚ್ಚರಿಗೊಳಿಸಿದ್ದು ಇದೇ ಮೊದಲಲ್ಲ. ಇದೀಗ ಹುಡುಗಿಯರೂ ಡೇಟಿಂಗ್​​​ಗೂ ತಂತ್ರಜ್ಞಾನದ ಸಮಸ್ಯೆ ಪರಿಹರಿಸಬಲ್ಲ ಹುಡುಗರನ್ನೇ ಹುಡುಕಲು ಮುಂದಾಗಿದ್ದಾರೆ. ಒಟ್ಟಾರೆಯಾಗಿ ಮಹಿಳೆಯ ಈ ರೀತಿಯ ವಿಚಿತ್ರ ಪ್ರೊಪೈಲ್​ಗೆ ನೆಟ್ಟಿಗರು ನಾನಾ ರೀತಿತಯ ಕಮೆಂಟ್​​​ಗಳನ್ನ ಮಾಡ ತೊಡಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 1 =
Remember me
