ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್​​​ ಕಿರಿಕಿರಿ ಬಗ್ಗೆ ಹೊಸದಾಗಿ ಹೇಳೋದೇನೂ ಇಲ್ಲ. ಎಂದೂ ಮುಗಿಯದ ಟ್ರಾಫಿಕ್ ದಟ್ಟಣೆಗೆ ಬೆಂಗಳೂರು ತುಂಬಾನೇ ಫೇಮಸ್​​​. ಇನ್ನು ಟ್ರಾಫಿಕ್​​ ಜಾಮ್​​ನಲ್ಲಿ ಡ್ಯಾನ್ಸ್​​ ಮಾಡಿದ ವಿಡಿಯೋ, ಟ್ರಾಫಿಕ್​ನಲ್ಲಿ ಸಿಲುಕಿಕೊಂಡ ಮಹಿಳೆ ಬಟಾಣಿ ಸಿಪ್ಪೆಯನ್ನ ಸುಲಿದ ಫೋಟೋ ಎಲ್ಲವೂ ವೈರಲ್​ ಆಗಿತ್ತು. ಇದೀಗ ಮತ್ತೊಂದು ಟ್ವೀಟ್​​ ವೈರಲ್​ ಆಗಿದೆ.
ಬೆಂಗಳೂರಿನ ನಿವಾಸಿ ಪ್ರಕೃತಿ ಶರ್ಮಾ ಟ್ರಾಫಿಕ್​ನಲ್ಲಿ ಪ್ರತಿನಿತ್ಯ ಸಿಲುಕಿಕೊಳ್ಳುವ ಯುವಕ ಯುವತಿಯರಿಗೆ ಡೇಟಿಂಗ್​​ ಟಿಪ್​​ ನೀಡಿದ್ದಾರೆ. ಈಕೆ ಎಕ್ಸ್ (ಟ್ವಿಟ್ಟರ್​​​​​)ನಲ್ಲಿ ಹಂಚಿಕೊಂಡ ಪೋಸ್ಟ್​​​ ಒಂದರಲ್ಲಿ ಈ ಬಗ್ಗೆ ಬರೆದಿದ್ದು, ಅದ್ಭುತ ಡೇಟಿಂಗ್ ಸಲಹೆಯೊಂದನ್ನ ನೀಡಿದ್ದಾರೆ.
ಏನದು ಡೇಟಿಂಗ್​​ ಸಲಹೆ?ಪ್ರಕೃತಿ ಶರ್ಮಾ ಮಾಡಿದ ಪೋಸ್ಟ್​​​ನಲ್ಲಿ ಏನಿದೆ ಅನ್ನೋದಾದ್ರೆ ನೀವು ನಿಮ್ಮ ನಾಳಿನ ಪ್ಲ್ಯಾನ್​​ಗಳನ್ನ ಮೊದಲೇ ಮಾಡಿಕೊಳ್ಳಿ. ನೀವು ಮತ್ತು ನಿಮ್ಮ ಸಂಗಾತಿ ಟ್ರಾಫಿಕ್​​ನಲ್ಲಿ ತುಂಬಾ ಹೊತ್ತು ಸಿಲುಕಿಕೊಳ್ತೀರಿ ಅನ್ನೋದಾದ್ರೆ ಒಟ್ಟಿಗೆ ಪ್ರಯಾಣ ಬೆಳೆಸಿ. ಯಾಕಂದ್ರೆ ಟ್ರಾಫಿಕ್​​​​ನಲ್ಲಿ ಗಂಟೆಗಟ್ಟಲೆ ಸಿಲುಕಿಕೊಂಡಾಗ ನೀವು ಒಂದಷ್ಟು ಮಾತುಕತೆ ನಡೆಸಬಹುದು. ಜತೆಗೆ ಮತ್ತಷ್ಟು ಹತ್ತಿರವಾಗಬಹುದು. ನಿಮ್ಮ ಸಂಗಾತಿ ಕೋಪಗೊಂಡಿದ್ದಾಗ ಅದನ್ನು ಪರಿಹರಿಸಿಕೊಳ್ಳಲು ಇದೊಂದುಇ ಉತ್ತಮ ಅವಕಾಶವೆಂದು ಅದರಲ್ಲಿ ಉಲ್ಲೇಖಿಸಲಾಗಿದೆ.
Bengaluru woman shares dating tips to find love while stuck in traffic. Yay or nay?https://t.co/RU5a80Aohi#NewsInTweetsIndia#NewsInTweetsIn#NewsInTweets
ನೆಟ್ಟಿಗರ ಕಾಮೆಂಟ್​​ ಮತ್ತು ಟ್ರೋಲ್​:ಮಹಿಳೆ ಮಾಡಿರುವ ಈ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಇದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್​​ ಮಾಡಿದ್ದಾರೆ. ಓರ್ವ ಬಳಕೆದಾರರು, ಮಹಿಳೆಯರನ್ನು ಸಂಬಾಳಿಸೋದು ದೊಡ್ಡ ತಲೆ ನೋವು. ಹಾಗಾಗಿ ಟ್ರಾಫಿಕ್​ ಕಿರಿಕಿರಿಯ ಮಧ್ಯೆ ಇದೂ ದೊಡ್ಡ ತಲೆನೋವೇ ಅನ್ನಿಸುತ್ತೆ ಎಂದಿದ್ದಾರೆ.ಈ ರೀತಿಯಾಗಿ ಡೇಟಿಂಗ್​​​​ ಸಲಹೆ ಕೊಟ್ರೆ ಕಾರ್​​ಪೂಲಿಂಗ್​​ ಅಪ್ಲಿಕೇಶನ್‌ಗಳು​​(ಓಲಾ, ಊಬರ್​​) ಡೇಟಿಂಗ್​​ ಅಪ್ಲಿಕೇಶನ್‌ಗಳಷ್ಟೆ ದ್ವಿಗುಣಗೊಳ್ಳಲಿದೆ ಎಂದು ಮತ್ತೊಬ್ಬ ವ್ಯಕ್ತಿ ಕಾಮೆಂಟ್​​ ಮಾಡಿದ್ದಾರೆ.
ಸದ್ಯ ಈ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ನಾನಾ ಕಾಮೆಂಟ್​ಗಳನ್ನ ಪಡೆದುಕೊಳ್ಳುತ್ತಿದ್ದು, ನಾನಾ ಅಭಿಪ್ರಾಯ ವ್ಯಕ್ರತ ಪಡಿಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + two =
Remember me
