ನವದೆಹಲಿ: ಮಹಾದೇವ್ ಬೆಟ್ಟಿಂಗ್ ಆ್ಯಪ್​ ಪ್ರಕರಣದ ಸೂತ್ರಧಾರಿಗಳಾದ ಸೌರಭ್ ಚಂದ್ರಾಕರ್ ಮತ್ತು ರವಿ ಉಪ್ಪಳ್, ಪಾಕಿಸ್ತಾನಕ್ಕಾಗಿ ಇದೇ ರೀತಿಯ ಆ್ಯಪ್​ ಅಭಿವೃದ್ಧಿಪಡಿಸಲು ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸೋದರ ಮುಸ್ತಕೀಂ ಇಬ್ರಾಹಿಂ ಕಸ್ಕರ್​ನೊಂದಿಗೆ ಕೈಜೋಡಿಸಿದ್ದು ಬೆಳಕಿಗೆ ಬಂದಿದೆ. ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯಿಂದ ಈ ವಿಚಾರ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
ಕಸ್ಕರ್​ನ ರಕ್ಷಣೆಯಲ್ಲಿ ‘ಖೇಲೋಯಾರ್’ ಎಂಬ ಇನ್ನೊಂದು ಆಪ್ ಕಾರ್ಯಾಚರಿಸುತ್ತಿದೆ. ವೈಯಕ್ತಿಕವಾಗಿ ವಿಶ್ವಾಸಾರ್ಹವಾದ ಭದ್ರತಾ ಗಾರ್ಡ್ ಗಳ ವಿವರ ಮತ್ತು 20ರಿಂದ 30 ಬೌನ್ಸರ್​ಗಳನ್ನು ಚಂದ್ರಾಕರ್​ಗೆ ಕಸ್ಕರ್ ಒದಗಿಸಿದ್ದ ಎಂದೂ ಮೂಲಗಳು ತಿಳಿಸಿವೆ. ಚಂದ್ರಾಕರ್ ಬಳಿ ನಾಲ್ಕರಿಂದ ಐದು ಐಷಾರಾಮಿ ಕಾರುಗಳು ಮತ್ತು ಎಸ್​ಯುುವಿಗಳಿದ್ದು ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಮತ್ತಿತರ ಸ್ಥಳಗಳಲ್ಲಿ ಬಿಗಿ ಭದ್ರತೆಯಲ್ಲಿ ಓಡಾಡುತ್ತಿದ್ದಾನೆ. ಆತನಿಗೆ ಒಂದು ಬುಲೆಟ್​ಪ್ರೂಫ್ ರೋಲ್ಸ್​ರಾಯ್ ಕಾರನ್ನು ಕೂಡ ಒದಗಿಸಲಾಗಿದೆ.
ಭೇಟಿ ಸ್ಥಳ ಪರಿಶೀಲನೆ:ಭಾರತೀಯ ಅಧಿಕಾರಿಗಳು ತನಿಖೆ ನಡೆಸುವ ಭೀತಿಯಿಂದಾಗಿ ಚಂದ್ರಾಕರ್ ಪಾರ್ಟಿ ಅಥವಾ ಸಭೆಗಳಿಗೆ ತೆರಳುವ ಸ್ಥಳಗಳನ್ನು ಸೂಕ್ಷ್ಮವಾಗಿ ಪರಿಶೀಲಿ ಸಲಾಗುತ್ತದೆ. ಮಹಾದೇವ್ ಬೆಟ್ಟಿಂಗ್ ಆಪ್ ಕೇಸ್​ನಲ್ಲಿ ಇ.ಡಿ. ಕೆಂಗಣ್ಣಿಗೆ ಬಿದ್ದಾಗಿನಿಂದ ಚಂದ್ರಾಕರ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದಾನೆ. ಹಾಗೂ ಕೆಲವು ಆಯ್ದ ಸೂಟ್​ಗಳು, ಖಾಸಗಿ ಮನೆಗಳು ಅಥವಾ ರೆಸಾರ್ಟ್​ಗಳಲ್ಲಿ ಮಾತ್ರವೇ ಬಹುತೇಕ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಮೂಲಗಳು ವಿವರಿಸಿವೆ.
ಪಾಕ್​ಗೆ ಪಲಾಯನ:ಸೋದರ ದಾವೂದ್ ಇಬ್ರಾಹಿಂ ಮತ್ತು ಆತನ ಇತರ ಕುಟುಂಬ ಸದಸ್ಯರೊಂದಿಗೆ ಕಸ್ಕರ್ 1986ರಲ್ಲಿ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ ಎನ್ನಲಾಗಿದೆ. ಆಗಿನಿಂದ ಆತ ಯುಎಇ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವೆ ಸ್ಥಳ ಬದಲಾವಣೆ ಮಾಡುತ್ತಿರುತ್ತಾನೆ. ಗ್ಯಾಂಗ್​ಸ್ಟರ್ ದಾವೂದ್​ಗೆ ಆರು ಸೋದರರಿದ್ದು ಆ ಪೈಕಿ ನೂರಾ, ಹುಮಾಯೂನ್ ಮತ್ತು ಸಬೀರ್ ಎಂಬ ಮೂವರು ಮೃತರಾಗಿದ್ದಾರೆ. ಅನೀಸ್, ಇಕ್ಬಾಲ್ ಮತ್ತು ಕಸ್ಕರ್ ಉಳಿದ ಮೂರು ಸೋದರರು. ಇಕ್ಬಾಲ್ ಭಾರತದಲ್ಲಿ ವಾಸಿಸುತ್ತಿದ್ದು ಅನೀಸ್ ಮತ್ತು ಕಸ್ಕರ್ ಕರಾಚಿಯಲ್ಲಿ ದಾವೂದ್​ನೊಂದಿಗೆ ನೆಲೆಸಿದ್ದಾರೆ.
ಕ್ರಿಕೆಟ್ ಕೂಟಕ್ಕೆ ಪ್ರಾಯೋಜಕತ್ವ:ಶ್ರೀಲಂಕಾದ ಟಿ20 ಕ್ರಿಕೆಟ್ ಟೂರ್ನಿಯಾದ ಲಂಕಾ ಪ್ರೀಮಿಯರ್ ಲೀಗ್​ನ ಪ್ರಾಯೋಜಕತ್ವ ವಹಿಸಿರುವವರಲ್ಲಿ ‘ಖೇಲೋಯಾರ್’ ಗೇಮಿಂಗ್ ಆಪ್ ಕೂಡ ಒಂದಾಗಿದೆ. ಈ ವರ್ಷ ಜುಲೈನಲ್ಲಿ ಈ ಟೂರ್ನಿ ನಡೆದಿತ್ತು. ಗೋವಿಂದ, ನೀಲ್ ನಿತಿನ್ ಮುಂತಾದ ನಟರು ಮತ್ತಿತರರನ್ನು ಖೇಲೋಯಾರ್ ಆಪ್ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ.
ಏನಿದು ಖೇಲೋಯಾರ್ ಆ್ಯಪ್?:ಮಹಾದೇವ್ ಬುಕ್ ಆಪ್​ನಂತೆಯೇ ಇರುವ ಒಂದು ಆನ್​ಲೈನ್ ವೇದಿಕೆಯಾಗಿದೆ ‘ಖೇಲೋಯಾರ್’. ಇದರಲ್ಲಿ ಪಾಕಿಸ್ತಾನಿ ರೂಪಾಯಿಗಳಲ್ಲಿ ಆಡುವ ಮೂಲಕ ಬಹುಮಾನ ಗೆಲ್ಲಬಹುದಾಗಿದೆ. ಸಿಂಧ್ ಪ್ರಾಂತ್ಯಕ್ಕೆ ಸೇರಿದ ಕಸ್ಕರ್​ನ ಆಪ್ತ ಸಹಾಯಕನೊಬ್ಬ ಚಂದ್ರಾಕರ್ ಮತ್ತು ಉಪ್ಪಳ್ ನೇತೃತ್ವದಲ್ಲಿ ಈ ಆಪ್​ಅನ್ನು ನಡೆಸುತ್ತಾನೆ. ಮಹಾದೇವ್ ಬೆಟ್ಟಿಂಗ್ ಆಪ್, 60ಕ್ಕೂ ಅಧಿಕ ಬೆಟ್ಟಿಂಗ್ ಗೇಮಿಂಗ್ ಆಪ್​ಗಳು ಮತ್ತು ಸೈಟ್​ಗಳನ್ನು ಅಕ್ರಮವಾಗಿ ನಡೆಸುತ್ತಿರುವುದು ಇ.ಡಿ. ತನಿಖೆಯಿಂದ ಬಯಲಾಗಿದೆ. 1997ರಲ್ಲಿ ಪಾಕಿಸ್ತಾನ ಮಂಜೂರು ಮಾಡಿದ್ದ ಪಾಸ್​ಪೋರ್ಟ್ ಬಳಸಿಕೊಂಡು ಕಸ್ಕರ್ ದುಬೈಯ ನಿವಾಸಿ ವೀಸಾ (ರೆಸಿಡೆಂಟ್ ವೀಸಾ) ಹೊಂದಿದ್ದಾನೆಂದು ಮೂಲಗಳು ಹೇಳಿವೆ.
ಯಾವುದಕ್ಕೂ ನಾಳೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದಾ?; ವ್ಯಕ್ತಿಯೊಬ್ಬರಿಂದ ಆತಂಕಕಾರಿ ಪೋಸ್ಟ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
