ಜಿನೇವಾ/ನವದೆಹಲಿ:ಕೋವಿಡ್ ಅಂತಿಮ ರೂಪಾಂತರಿ ಒಮಿಕ್ರಾನ್ ಎಂದು ಭಾವಿಸಲಾಗಿದೆ. ಆದರೆ, ಕೋವಿಡ್ ಸಂಕಷ್ಟ ಕೊನೆಗೊಳ್ಳುವ ಹಂತಕ್ಕೆ ತಲುಪಿಲ್ಲ. ಬದಲಾಗಿ ಅದು ಮುಂದುವರಿದಿದೆ. ಜಾಗತಿಕ ಮಟ್ಟದಲ್ಲಿ ಸದ್ಯ ಸರಾಸರಿ ಮೂರು ಸೆಕೆಂಡ್​ಗೆ 100 ಕೇಸ್​ಗಳು ದೃಢೀಕರಿಸಲ್ಪಡುತ್ತಿವೆ. 12 ಸೆಕೆಂಡ್​ಗೆ ಒಬ್ಬರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ)ಗಂಭೀರ ಎಚ್ಚರಿಕೆ ಸಂದೇಶ ರವಾನಿಸಿದೆ.
ಡಬ್ಲ್ಯುಎಚ್​ಒದ 150ನೇ ಎಕ್ಸಿಕ್ಯೂಟಿವ್ ಬೋರ್ಡ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧನೋಮ್ ಘಬ್ರಿಯೆಸಸ್ ಈ ಎಚ್ಚರಿಕೆ ನೀಡಿದರು. ಕೋವಿಡ್ ಕೊನೆಯ ವೇರಿಯೆಂಟ್ ಒಮಿಕ್ರಾನ್ ಎಂಬ ಊಹೆಗೆ ಅಥವಾ ನಿರ್ಧಾರಕ್ಕೆ ಬರುವುದು ಸದ್ಯದ ಪರಿಸ್ಥಿತಿಯಲ್ಲಿ ತುಂಬ ಅಪಾಯಕಾರಿ ಬೆಳವಣಿಗೆ. ಕೇವಲ ಒಂಭತ್ತು ವಾರಗಳ ಹಿಂದಷ್ಟೆ ಒಮಿಕ್ರಾನ್ ವೇರಿಯೆಂಟ್ ಮೊದಲು ಪತ್ತೆ ಆಗಿರುವಂಥದ್ದು. ಈಗ ಈ ಸೋಂಕಿನ ಪ್ರಮಾಣ 80 ದಶಲಕ್ಷಕ್ಕೂ ಹೆಚ್ಚು. 2020ರಲ್ಲಿ 12 ತಿಂಗಳಲ್ಲಿ ದೃಢೀಕರಿಸಲ್ಪಟ್ಟ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಇದು ಬಹಳ ಹೆಚ್ಚು. ಇನ್ನೊಂದೆಡೆ, ಜಾಗತಿಕವಾಗಿ ಹಲವು ವೇರಿಯೆಂಟ್​ಗಳು ಕಾಣಿಸಿಕೊಂಡಿವೆ. ಇದನ್ನೂ ನಿರ್ಲಕ್ಷಿಸಲಾಗದು. ಎರಡು ವರ್ಷದ ಹಿಂದೆ ಜನವರಿ 30ರಂದು ಅಂತಾರಾಷ್ಟ್ರೀಯ ಮಟ್ಟದ ಆರೋಗ್ಯ ತುರ್ತಪರಿಸ್ಥಿತಿಯನ್ನು ಡಬ್ಲ್ಯುಎಚ್​ಒ ಘೋಷಿಸಿತ್ತು. ಆ ಸಂದರ್ಭದಲ್ಲಿ ಚೀನಾದಲ್ಲಿ 100ಕ್ಕಿಂತ ಸ್ವಲ್ಪ ಕೇಸ್​ಗಳು ಮತ್ತು ಸಾವು ಸಂಭವಿಸಿರಲಿಲ್ಲ. ಎರಡು ವರ್ಷಗಳ ಬಳಿಕ 35 ಕೋಟಿ ಕೇಸ್​ಗಳು ದೃಢೀಕರಿಸಲ್ಪಟ್ಟಿವೆ. 55 ಲಕ್ಷ ಸಾವು ಸಂಭವಿಸಿದೆ. ಆದಾಗ್ಯೂ ಈ ಸಂಖ್ಯೆ ನಿಖರವಾದುವು ಅಲ್ಲ ಎಂಬುದು ಅರಿವಿನಲ್ಲಿದೆ ಎಂದು ಘಬ್ರಿಯೆಸಸ್ ವಿವರಿಸಿದರು.
ಭವಿಷ್ಯದಲ್ಲಿ ಅನಿರ್ದಿಷ್ಟಾವಧಿ ತನಕ ಕೋವಿಡ್ ಸಂಕಷ್ಟದ ಜತೆಗೆ ಬಾಳ ಬೇಕಾಗಬಹುದು ಎಂಬುದು ‘ವಾಸ್ತವ ಸತ್ಯ’. ಈ ಸಮಸ್ಯೆಯ ನಡುವೆ ನಮ್ಮ ಬದುಕು ನಿರ್ವಹಿಸುವುದನ್ನು ಕಲಿಯಬೇಕು.
|ಟೆಡ್ರೋಸ್ ಅಧನೋಮ್ ಘಬ್ರಿಯೆಸಸ್ಡೈರೆಕ್ಟರ್ ಜನರಲ್, ಡಬ್ಲ್ಯುಎಚ್​ಒ
20 ನಿಮಿಷದಲ್ಲಿ ಕೋವಿಡ್ ಟೆಸ್ಟ್:ಕಡಿಮೆ ವೆಚ್ಚದ ಮತ್ತು 20 ನಿಮಿಷದಲ್ಲಿ ಕೋವಿಡ್ 19 ಸೋಂಕು ಪತ್ತೆ ಹಚ್ಚುವ ಸ್ಮಾರ್ಟ್​ಫೋನ್ ಆಧಾರಿತ ಪರೀಕ್ಷೆಯನ್ನು ಅಮೆರಿಕದ ವಾಷಿಂಗ್ಟನ್ ಯೂನಿವರ್ಸಿಟಿಯ ಸಂಶೋಧಕರು ಅಭಿವೃದ್ಧಿಪಡಿಸಿದರು. ‘ಹಾರ್ವೆನಿ ಕೋವಿಡ್ 19 ಟೆಸ್ಟ್’ ಎಂದು ಇದಕ್ಕೆ ನಾಮಕರಣ ಮಾಡಲಾಗಿದೆ. ಹಾರ್ವೆನಿ ಕಿಟ್​ನ ಆರಂಭಿಕ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಶೇಕಡ 97ರಷ್ಟು ನಿಖರತೆ ಗೋಚರಿಸಿದೆ. ಮೂಗಿನ ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ನಿಖರತೆ ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.
ರಾತ್ರಿ ಕರ್ಫ್ಯೂ ಉಲ್ಲಂಘನೆ ನವದಂಪತಿಯ ಬಂಧನ:ಗುಜರಾತಿನ ವಲ್ಸದ್​ನಲ್ಲಿ ರಾತ್ರಿ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ನವದಂಪತಿ ಮತ್ತು ಅವರ ಕುಟುಂಬದ ಸದಸ್ಯರನ್ನು ಸೋಮವಾರ ತಡರಾತ್ರಿ ಬಂಧಿಸಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸೋಮವಾರ ರಾತ್ರಿ ವಿವಾಹ ಮುಗಿಸಿ ಮೂರು ಕಾರುಗಳಲ್ಲಿ ರಾತ್ರಿ 12.30ಕ್ಕೆ ಹೊರಟಿದ್ದ ನವದಂಪತಿ ಮತ್ತು ಕುಟುಂಬ ಸದಸ್ಯರನ್ನು ವಲ್ಸದ್​ನ ಓವರ್​ಬ್ರಿಜ್ ಮೇಲೆ ಪೊಲೀಸರು ತಡೆದಿದ್ದರು. ನವ ವರ ಪಿಯೂಷ್ ಪಟೇಲ್ (24), ಆತನ ಪತ್ನಿ ಸೋನಾಲ್ ಮತ್ತು ಚಾಲಕ ಒಂದು ಕಾರಿನಲ್ಲಿದ್ದರೆ, ಕುಟುಂಬದ ಸದಸ್ಯರು ಇತರೆ ಎರಡು ಕಾರುಗಳಲ್ಲಿದ್ದರು. ಕಾರುಗಳಲ್ಲಿದ್ದ ಒಟ್ಟು 9 ಜನರ ವಿರುದ್ಧ ಮೂರು ಎಫ್​ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕರ್ಫ್ಯೂ ಘೋಷಣೆಗೆ ಎಷ್ಟೋ ವಾರಗಳ ಮೊದಲೇ ನನ್ನ ವಿವಾಹ ನಿಗದಿಯಾಗಿತ್ತು. ವಿವಾಹ ಕಾರ್ಯ ಮುಗಿಸಿ ರಾತ್ರಿ 10 ಗಂಟೆಯ ಒಳಗೆ ಸಮಾರಂಭ ಸ್ಥಳದಿಂದ ಹೊರಡುವುದು ಸಾಧ್ಯವಾಗಿಲ್ಲ. ತಡರಾತ್ರಿ ಈ ವಿಚಾರ ತಿಳಿಸಿದರೂ ಠಾಣೆಗೆ ಕರೆದೊಯ್ದು ಎರಡು ಗಂಟೆ ಕಾಲ ಕೂರಿಸಿದ್ದರಿಂದ ಪತ್ನಿ ಅಸ್ವಸ್ಥಳಾದಳು ಎಂದು ಪಟೇಲ್ ದೂರಿದ್ದಾರೆ.
ಸತ್ತ 8 ತಿಂಗಳ ಬಳಿಕ ಎರಡನೇ ಡೋಸ್​ ಲಸಿಕೆ!?: ಪಾಲಿಕೆ ಆರೋಗ್ಯ ಸಿಬ್ಬಂದಿ ಎಡವಟ್ಟು…

9 ತಿಂಗಳ ಹಿಂದೆ ಲಗ್ನ, ಕನಸುಗಳೆಲ್ಲ ಭಗ್ನ: ಗಂಡನ ಕಿರುಕುಳದಿಂದಾಗಿ 5 ತಿಂಗಳ ಗರ್ಭಿಣಿ ತವರಲ್ಲಿ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
