ನವದೆಹಲಿ:ಮುಂಗಾರು ಮಳೆ ಆರ್ಭಟದೊಂದಿಗೆ ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದೆ. ಇನ್ನು ಮೂರ್ನಾಲ್ಕು ತಿಂಗಳ ಕಾಲ ಮಳೆರಾಯ ಬಂದು ಹೋಗುತ್ತಿರುತ್ತಾನೆ. ಹೀಗಾಗಿ ಎಲ್ಲೆಡೆ ತೇವಯುಕ್ತ ಅಥವಾ ತಂಪಾದ ವಾತಾವರಣ ನಿರ್ಮಾಣವಾಗಲಿದೆ. ಈ ಮಳೆಗಾಲದಲ್ಲಿ ಹಾವುಗಳು ಬೆಚ್ಚಗಿನ ವಾತಾವರಣ ಅಥವಾ ಒಣ ಪ್ರದೇಶವನ್ನು ಹುಡುಕಿಕೊಂಡು ಜನವಸತಿ ಪ್ರದೇಶಗಳತ್ತ ಬರುವುದು ಸಾಮಾನ್ಯ. ಅಲ್ಲದೆ, ಈ ಮಳೆಗಾಲದಲ್ಲಿ ಹಾವುಗಳ ಸಂತಾನೋತ್ಪತಿಯು ಕೂಡ ಹೆಚ್ಚು. ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಟ್ಟುಕೊಟ್ಟಲು ಮಳೆಗಾಲದಲ್ಲಿ ಬೆಚ್ಚನೆಯ ಸ್ಥಳಗಳನ್ನು ಹುಡುಕಿಕೊಂಡು ಬರುತ್ತವೆ. ಇದೀಗ ಮಳೆಗಾಲ ಆರಂಭವಾಗಿರುವುದಿಂದ ಜನರು ತುಂಬಾ ಜಾಗರೂಕರಾಗಿರಬೇಕು ಎಂಬುದು ಉರಗ ತಜ್ಞರ ಎಚ್ಚರಿಕೆಯಾಗಿದೆ.
ಮನೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಲಿಮನೆಗಳಲ್ಲಿ ಹೊಂಡ ಮತ್ತು ರಂಧ್ರಗಳಿದ್ದರೆ ಅವುಗಳನ್ನು ಸಾಧ್ಯವಾದಷ್ಟು ಬೇಗ ಮುಚ್ಚಬೇಕು. ಹೆಲ್ಮೆಟ್ ಮತ್ತು ಬೂಟುಗಳನ್ನು ಧರಿಸುವ ಮೊದಲು, ಏನಾದರೂ ಇದೆಯಾ ಎಂಬುದನ್ನು ಪರಿಶೀಲಿಸಬೇಕು. ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ. ಹಾವುಗಳು ಸಾಮಾನ್ಯವಾಗಿ ಇದ್ದಿಲಿನ ಒಲೆಗಳು, ಮರದ ದಿಮ್ಮಿಗಳು, ಹುಲ್ಲು, ಕಲ್ಲುಗಳು ಮತ್ತು ಪ್ಲಾಸ್ಟಿಕ್ ವಸ್ತುಗಳ ನಡುವೆ ಇರುತ್ತವೆ. ಆದ್ದರಿಂದ, ಅವುಗಳನ್ನು ಮನೆಯ ಸುತ್ತಲೂ ಅಥವಾ ಕಿಟಕಿಗಳ ಬಳಿ ಸಂಗ್ರಹಿಸದಂತೆ ಎಚ್ಚರಿಕೆ ವಹಿಸಬೇಕು. ಮನೆ ಆವರಣದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ನೀರಿದ್ದರೆ ಹಾವುಗಳನ್ನು ವಿಶೇಷವಾಗಿ ಜಲಚರ ಹಾವುಗಳನ್ನು ಆಕರ್ಷಿಸುತ್ತದೆ. ತೋಟಗಳಲ್ಲಿ ನೀರು ನಿಲ್ಲಲು ಬಿಡಬೇಡಿ. ಮನೆಯ ಆವರಣದಲ್ಲಿ ದನದ ಕೊಟ್ಟಿಗೆ ಅಥವಾ ಕೋಳಿ ಗೂಡು ಇದ್ದರೆ ಎಚ್ಚರಿಕೆ ವಹಿಸಬೇಕು. ಕೋಳಿ ಗೂಡುಗಳಲ್ಲಿ ಹಾವುಗಳ ಉಪಸ್ಥಿತಿ ಸಾಮಾನ್ಯವಾಗಿರುತ್ತವೆ.
ಮಕ್ಕಳಿರುವ ಮನೆಯಲ್ಲಿ ಹಾವಿನ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಸ್ವಲ್ಪ ಜಾಗವಿದ್ದರೂ ಸಾಕು ಹಾವು ಸುಲಭವಾಗಿ ಮನೆಯೊಳಗೆ ಪ್ರವೇಶ ಮಾಡುತ್ತದೆ. ಕೆಲವರು ಹಾವನ್ನು ನೋಡುತ್ತಿದ್ದಂತೆ ಮೊದಲು ಮಾಡುವ ಕೆಲಸವೆಂದರೆ, ಬೆಳ್ಳುಳ್ಳಿಯನ್ನು ಜಜ್ಜಿ, ನೀರಿನೊಂದಿಗೆ ಮಿಶ್ರಣ ಮಾಡಿ ಹಾವಿನ ಸುತ್ತಮುತ್ತ ಸಿಂಪಡಿಸುತ್ತಾರೆ. ಹೀಗೆ ಮಾಡಿದರೆ ಹಾವು ಹತ್ತಿರ ಬರುವುದಿಲ್ಲ ಎಂಬ ನಂಬಿಕೆ ಇದೆ. ಬೆಳ್ಳುಳ್ಳಿಯನ್ನು ಜಜ್ಜಿ ಅದನ್ನು ನೀರಿನಲ್ಲಿ ಮಿಶ್ರಣ ಮಾಡಿ, ಆ ನೀರನ್ನು ಮನೆಯ ಸುತ್ತಲೂ ಸಿಂಪಡಿಸಿದರೆ ಹಾವು ಮನೆಯ ಹತ್ತಿರ ಸುಳಿಯುವುದಿಲ್ಲ ಎನ್ನುತ್ತಾರೆ. ಅಲ್ಲದೆ, ಪುಡಿಮಾಡಿದ ಈರುಳ್ಳಿ ಅಥವಾ ರಸವನ್ನು ಮನೆಯ ಸುತ್ತಲೂ ಸಿಂಪಡಿಸಬಹುದಂತೆ. ಇದರಲ್ಲಿರುವ ಗಂಧಕದ ವಾಸನೆ ಹಾವುಗಳು ಬರದಂತೆ ತಡೆಯುತ್ತದೆ ಎನ್ನುತ್ತಾರೆ ಕೆಲವರು.
ಸೀಮೆ ಎಣ್ಣೆ ಬೆಸ್ಟ್​ಆದರೆ, ಉರಗ ತಜ್ಞ ವಾವಾ ಸುರೇಶ್​ ಪ್ರಕಾರ ನೀರಿನ ಜತೆಗೆ ಬೆಳ್ಳುಳ್ಳಿ ರಸ ಮಿಶ್ರಣ ಮಾಡಿ, ಸಿಂಪಡಿಸಿದರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಏಕೆಂದರೆ, ಬೆಳ್ಳುಳ್ಳಿ ಮತ್ತು ಹಾವಿನ ನಡುವೆ ಯಾವುದೇ ಕನೆಕ್ಷನ್​ ಇಲ್ಲ. ಆದರೆ, ಸೀಮೆಎಣ್ಣೆ ಮತ್ತು ನೀರು ಉತ್ತಮವಾಗಿ ಕೆಲಸ ಮಾಡುತ್ತದೆ. ಇದನ್ನು ನಾನು ಪ್ರಯತ್ನಿಸಿದ್ದೇನೆ ಎಂದು ವಾವಾ ಸುರೇಶ್​ ಹೇಳಿದ್ದಾರೆ.
ಶೇ. 95 ರಷ್ಟು ಹಾವುಗಳು ಇತರೆ ಹಾವುಗಳು ಪ್ರಯಾಣ ಮಾಡಿದ ಹಾದಿಯಲ್ಲಿ ಸಂಚರಿಸುತ್ತವೆ. ಇಲಿಯ ಮೂತ್ರದ ವಾಸನೆಯನ್ನು ಹಾವು ತನ್ನ ನಾಲಿಗೆಯಿಂದ ಪತ್ತೆ ಮಾಡುತ್ತದೆ. ಆದರೆ ಸೀಮೆಎಣ್ಣೆ ಸಿಂಪಡಿಸಿದ ನಂತರ ಹಾವಿಗೆ ವಾಸನೆ ತಿಳಿಯುವುದಿಲ್ಲ. ಹೀಗಾಗಿ ಅದು ತನ್ನ ಹಾದಿಯನ್ನು ಬದಲಾಯಿಸುತ್ತದೆ ಎಂದು ವಾವಾ ಸುರೇಶ್​ ಮಾಹಿತಿ ನೀಡಿದರು.
ಮಳೆಗಾಲದಲ್ಲಿ ಹಾವುಗಳು ಬೆಚ್ಚಗಿನ ಸ್ಥಳವನ್ನು ಅರಸಿ ಬರುವುದರಿಂದ ನಿಮ್ಮ ದೈನಂದಿನ ಜೀವನವನ್ನು ತೊಂದರೆಗೀಡುಮಾಡುವ ಸಾಧ್ಯತೆಯಿದೆ. ಹೀಗಾಗಿ ತುಂಬಾ ಎಚ್ಚರಿಕೆ ವಹಿಸಿರಿ. ರಾತ್ರಿಯ ವೇಳೆ ತುಂಬಾ ಎಚ್ಚರಿಕೆಯಿಂದ ನಡೆಯಿರಿ. ಬ್ಯಾಟರಿ ಅಥವಾ ಮೊಬೈಲ್​ ಟಾರ್ಚ್​ ಬಳಸುವುದು ಉತ್ತಮ. ಹಾವು ಕಡಿತಕ್ಕೆ ಒಳಗಾಗುವ ವ್ಯಕ್ತಿಯನ್ನು ನೋಡಿ ಭಯಪಡದೇ ಸಾಧ್ಯವಾದಷ್ಟು ಬೇಗ ಅವರನ್ನು ಆಸ್ಪತ್ರೆಗೆ ದಾಖಲಿಸಿ. ಎಲ್ಲಿಯೇ ಆಗಲಿ ಹಾವುಗಳನ್ನು ಕಂಡಾಗ ಮೊದಲ ಉರಗ ಪ್ರೇಮಿಗಳಿಗೆ ಕರೆ ಮಾಡಿ. ಹಾವುಗಳನ್ನು ಯಾವುದೇ ಕಾರಣಕ್ಕೂ ಸಾಯಿಸಬೇಡಿ. ಉರಗ ಪ್ರೇಮಿಗಳು ಬಂದು ಹಾವನ್ನು ರಕ್ಷಣೆ ಮಾಡಿ, ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬರುತ್ತಾರೆ.(ಏಜೆನ್ಸೀಸ್​)
ಪ್ಲೀಸ್​ ಏನು ಮಾಡಬೇಡಿ… ಸಂಕಷ್ಟದಲ್ಲಿ ಅಭಿಮಾನಿ, ಅಮೆರಿಕ ಪೊಲೀಸರ ಬಳಿ ಬೇಡಿಕೊಂಡ ರೋಹಿತ್ ಶರ್ಮ!

ಟಿ20 ವಿಶ್ವಕಪ್​ನಲ್ಲಿ ವಿಶೇಷ ದಾಖಲೆ ಬರೆದ ಅಮೆರಿಕ: ಟೀಮ್​ ಇಂಡಿಯಾದಿಂದಲೂ ಇದು ಸಾಧ್ಯವಾಗಿಲ್ಲ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:7 − 6 =
Remember me
