ನವದೆಹಲಿ:ಸಾರ್ವಜನಿಕ ಸ್ಥಳಗಳಲ್ಲಿ ಯುಎಸ್​ಬಿ ಚಾರ್ಜರ್ ಬಳಕೆ ಹಗರಣದ ಸ್ವರೂಪ ತಾಳಿದ್ದು ಇದರ ಬಗ್ಗೆ ಎಚ್ಚರದಿಂದ ಇರುವಂತೆ ನಾಗರಿಕರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ವಿಮಾನ ನಿಲ್ದಾಣಗಳು, ಕೆಫೆಗಳು, ಹೋಟೆಲ್​ಗಳು ಮತ್ತು ಬಸ್ ನಿಲ್ದಾಣಗಳಂಥ ಸಾರ್ವಜನಿಕ ಸ್ಥಳದಲ್ಲಿ ಯುಎಸ್​ಬಿ ಚಾರ್ಜರ್ ಬಳಕೆ ಅಪಾಯಕಾರಿ ಎಂದು ಸರ್ಕಾರ ಹೇಳಿದೆ. ಸಾರ್ವಜನಿಕ ಸ್ಥಳಗಳಲ್ಲಿರುವ ಯುಎಸ್​ಬಿ ಚಾರ್ಜಿಂಗ್ ಪೋರ್ಟ್ ಗಳನ್ನು ಸೈಬರ್ ಕ್ರಿಮಿನಲ್​ಗಳು ದುರುದ್ದೇಶಗಳಿಗೆ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂಬುದು ಕಳವಳಕ್ಕೆ ಕಾರಣವಾಗಿದೆ.
ಜ್ಯೂಸ್-ಜಾಕಿಂಗ್: ಸಾರ್ವಜನಿಕ ಸ್ಥಳಗಳಲ್ಲಿರುವ ವೈರಸ್​ಪೂರಿತ ಯುಎಸ್​ಬಿ ಸ್ಟೇಶನ್​ಗಳ ಚಾರ್ಜಿಂಗ್ ಸಾಧನಗಳು ಬಳಕೆದಾರರನ್ನು ಜ್ಯೂಸ್-ಜಾಕಿಂಗ್ ಸೈಬರ್ ದಾಳಿಗಳಿಗೆ ಒಳಗಾಗುವಂತೆ ಮಾಡುವ ಸಾಧ್ಯತೆಯಿದೆ.
ಬಳಕೆದಾರರ ದತ್ತಾಂಶಗಳನ್ನು (ಡಾಟಾ) ಕದಿಯಲು ಅಥವಾ ಯುಎಸ್​ಬಿ ಪೋರ್ಟಲ್​ಗಳಿಗೆ ಕನೆಕ್ಟ್ ಆದ ಸಾಧನಗಳಲ್ಲಿ ಮಾಲ್​ವೇರ್ ಸಂಸ್ಥಾಪಿಸಲು ಸೈಬರ್ ಕ್ರಿಮಿನಲ್​ಗಳು ಬಳಸುವ ಸೈಬರ್ ದಾಳಿ ಕಾರ್ಯತಂತ್ರವನ್ನು ಜ್ಯೂಸ್ ಜಾಕಿಂಗ್ ಎನ್ನುತ್ತಾರೆ. ಯಾವುದೇ ಅನುಮಾನವಿಲ್ಲದ ಬಳಕೆದಾರರು ಈ ಸ್ಥಳಗಳ ಚಾರ್ಜಿಂಗ್ ಪೋರ್ಟಲ್​ಗಳಲ್ಲಿ ತಮ್ಮ ಸಾಧನಗಳನ್ನು ಪ್ಲಗ್ ಮಾಡಿದಾಗ, ಸೈಬರ್ ಕ್ರಿಮಿನಲ್​ಗಳು ಡಾಟಾ ಕದಿಯಲು ಅಥವಾ ಮಾಲ್​ವೇರ್​ಗಳನ್ನು ಸ್ಥಾಪಿಸಲು ಸಾಧ್ಯವಾಗಬಹುದು. ಇದರಿಂದಾಗಿ ವೈಯಕ್ತಿಕ ಮಾಹಿತಿ ಕಳವಾಗಬಹುದು. ಅಲ್ಲದೆ, ಹಣಕಾಸಿನ ಬೇಡಿಕೆಯೊಂದಿಗೆ ಸಾಧನವನ್ನು ಎನ್ಕ್ರಿಪ್ಟ್ ಮಾಡುವ ಅಪಾಯವೂ ಇರುತ್ತದೆ.
ಸುರಕ್ಷತೆ ಮಾಗೋಪಾಯ:ಇಂಥ ಅಪಾಯಗಳಿಂದ ತಪ್ಪಿಸಿಕೊಳ್ಳಲು ಇಲೆಕ್ಟ್ರಿಕಲ್ ವಾಲ್ ಔಟ್​ಲೆಟ್​ಗಳನ್ನು ಬಳಸುವುದು ಅಥವಾ ವೈಯಕ್ತಿಕ ಕೇಬಲ್ ಅಥವಾ ಪವರ್ ಬ್ಯಾಂಕ್​ಗಳನ್ನು ಒಯ್ಯುವುದು ಸುರಕ್ಷಿತ ದಾರಿಯಾಗಿದೆ. ಬಳಕೆದಾರರು ತಮ್ಮ ಸಾಧನಗಳನ್ನು ಲಾಕ್ ಮಾಡುವುದು ಮತ್ತು ಅಪರಿಚಿತ ಸಾಧನಗಳೊಂದಿಗೆ ಪೇರ್ ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಫೋನ್ ಟರ್ನ್ ಆಫ್ ಆಗಿದ್ದಾಗ ಫೋನ್ ಚಾರ್ಜ್ ಮಾಡುವುದು ಕೂಡ ಸುರಕ್ಷಿತ ಮಾರ್ಗವಾಗಿದೆ.
ಅಶ್ಲೀಲ ವಿಡಿಯೋ ಚಿತ್ರೀಕರಣ ವೇಳೆ ದಾಳಿ: ಕೇಸ್​ ಬೆನ್ನತ್ತಿದ ಪೊಲೀಸರಿಗೆ ಭಾರೀ ಶಾಕ್​, ಸೆ…ಸಿಡಿಗಳು ವಶಕ್ಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
