ಭೋಪಾಲ್​:ಸಂಸದ ರಾಮದಾಸ್​ ಅಠಾವಳೆ ಅವರ ಗೋ ಕರೊನಾ ಗೋ (ಹೋಗು ಕರೊನಾ ಹೋಗು) ಪಠಣ ನಂತರ ಮಧ್ಯಪ್ರದೇಶದ ಅಗರ್​ ಮಾಲ್ವಾ ಜಿಲ್ಲೆಯ ಕೆಲವು ಗ್ರಾಮಸ್ಥರು ಕರೊನಾ ವಿರುದ್ಧದ ಹೋರಾಟ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಭಾಗ್​ ಕರೊನಾ ಭಾಗ್​ (ಓಡು ಕರೊನಾ ಓಡು) ಎಂಬ ಘೋಷಣೆಗಳನ್ನು ಕೂಗಿ ಅಚ್ಚರಿ ಮೂಡಿಸಿದರು.
ಗ್ರಾಮಸ್ಥರು ಭಾನುವಾರ ರಾತ್ರಿ ಬೆಂಕಿಯ ಪಂಜನ್ನು ಹಿಡಿದುಕೊಂಡು ಓಡು ಕರೊನಾ ಓಡು ಎಂದು ಘೋಷಣೆ ಕೂಗಿದರು. ಹೀಗೆ ಮಾಡುವದರಿಂದ ತಮ್ಮ ಗ್ರಾಮದ ಮೇಲಿನ ಕರೊನಾ ಪ್ರಭಾವ ಕಡಿಮೆ ಆಗುತ್ತದೆ ಎಂಬುದು ಜನರ ನಂಬಿಕೆ ಆಗಿದೆ. ಇನ್ನು ಘಟನೆ ಅಗರ್​ ಮಾಲ್ವಾ ಜಿಲ್ಲೆಯ ಗಣೇಶ್​ಪುರ ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಸಹ ಆಗಿದೆ.
ವಿಡಿಯೋದಲ್ಲಿ ಕೆಲವು ಗ್ರಾಮಸ್ಥರು ಕೈಯಲ್ಲಿ ಪಂಜನ್ನು ಹಿಡಿದು ಓಡು ಕರೊನಾ ಓಡು ಎಂದು ಘೋಷಣೆ ಕೂಗುತ್ತಾ ಬೀದಿ ಬೀದಿಗಳಲ್ಲಿ ಓಡಾಡಿದ್ದಾರೆ. ಕೊನೆಯಲ್ಲಿ ಗ್ರಾಮದ ಹೊರವಲಯದಲ್ಲಿ ಪಂಜನ್ನು ಗಾಳಿಯಲ್ಲಿ ಎಸೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ಅಭ್ಯಾಸದಿಂದ ಕರೊನಾ ನಮ್ಮ ಗ್ರಾಮದಲ್ಲಿ ಹರಡುವುದಿಲ್ಲ ಎಂಬುದು ಅವರ ನಂಬಿಕೆಯಾಗಿದೆ.
ಇದನ್ನೂ ಓದಿರಿ:ಫನ್​ ಬಕೆಟ್​ ಭಾರ್ಗವನ ಗುಟ್ಟು ಬಾಲಕಿ ಹೊಟ್ಟೆಯಿಂದ ರಟ್ಟು: ಟಿಕ್​ಟಾಕ್​ ವಿಡಿಯೋ ಹಿಂದಿನ ಕರಾಳ ಮುಖ ಬಯಲು!
ಯಾವುದೇ ಸಾಂಕ್ರಾಮಿಕ ಬಂದಾಗಲೂ ನಮ್ಮ ಊರಿನಲ್ಲಿ ಈ ಹವ್ಯಾಸ ಇದೆ ಎಂದು ಗ್ರಾಮದ ಹಿರಿಯರು ಹೇಳಿಕೊಂಡಿದ್ದಾರೆ. ನಮ್ಮ ಗಣೇಶಪುರದಲ್ಲಿ, ಕಳೆದ ಎರಡು-ಮೂರು ದಿನಗಳಿಂದ, ಪ್ರತಿದಿನ ಒಂದು ಸಾವು ವರದಿಯಾಗುತ್ತಿದ್ದು, ಗ್ರಾಮಸ್ಥರಲ್ಲಿ ಭೀತಿಯನ್ನು ಉಂಟುಮಾಡಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಕೇಂದ್ರ ರಾಜ್ಯ ಸಚಿವ ರಾಮದಾಸ್ ಅಠಾವಳೆ, ಮುಂಬೈನ ಚೀನೀ ಕಾನ್ಸುಲ್ ಜನರಲ್ ಟ್ಯಾಂಗ್ ಗುಯೋಕೈ ಮತ್ತು ಬೌದ್ಧ ಸನ್ಯಾಸಿಗಳು ಪ್ರಾರ್ಥನಾ ಸಭೆಯಲ್ಲಿ “ಗೋ ಕರೋನಾ ಗೋ ಕರೋನಾ” ಎಂದು ಜಪಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅಲ್ಲದೆ, ಇಡೀ ಜಗತ್ತಿನಲ್ಲಿ ಘೋಷಣೆ ವೈರಲ್​ ಆಗಿತ್ತು.(ಏಜೆನ್ಸೀಸ್​)
ತಿರುಮಲ ಬೆಟ್ಟವೇ ಹನುಮಂತನ ಜನ್ಮಸ್ಥಳ: ಟಿಟಿಡಿ ಹೊಸ ವಾದಕ್ಕೆ ಪುರಾತತ್ವ ಇತಿಹಾಸಕಾರರ ವಿರೋಧ

ನಿತ್ಯಾನಂದನ ‘ಕೈಲಾಸ’ದಿಂದ ಭಾರತೀಯರಿಗೆ ಬಂತು ಶಾಕಿಂಗ್‌ ನ್ಯೂಸ್‌- ಬೇಸರದಲ್ಲಿ ಭಕ್ತರು…

ಕರೊನಾ 2ನೇ ಅಲೆ ಶವಪರೀಕ್ಷೆ: ಮೊದಲನೇ ಅಲೆಗಿಂತ ಬಯಲಾಯ್ತು ಭಯಾನಕ ಸಂಗತಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
