ನವದೆಹಲಿ:ಕೇಂದ್ರ ಜಲಶಕ್ತಿ ಇಲಾಖೆ ಡಿಸೆಂಬರ್ 6ರಂದು ನಡೆಸಲಿರುವ ಮಹತ್ವದ ಸಭೆಯಲ್ಲಿ ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಬಗ್ಗೆ ತೀರ್ಮಾನ ಪ್ರಕಟಿಸಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬುಧವಾರ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್​ರನ್ನು ಭೇಟಿ ಮಾಡಿ ರಾಜ್ಯದ ಜಲ ವ್ಯಾಜ್ಯಗಳ ಬಗ್ಗೆ ರ್ಚಚಿಸಿದ ವೇಳೆ ಭದ್ರಾ ಮೇಲ್ದಂಡೆ ಕುರಿತ ರಾಜ್ಯದ ಬೇಡಿಕೆಯ ಕುರಿತು ಗಮನಸೆಳೆದರು. ಕೃಷ್ಣಾ ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯ ಬಗ್ಗೆಯೂ ವಿವರಣೆ ನೀಡಿದ ಸಿಎಂ, ಅಧಿಸೂಚನೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ನಿಲುವನ್ನು ಕೇಳಿದೆ. ಹೀಗಾಗಿ, ಪೂರಕವಾದ ಅಫಿಡವಿಟ್ ನೀಡಿ ಸಹಕರಿಸಬೇಕು ಎಂದೂ ಕೋರಿದ್ದಾರೆ. ಗೋದಾವರಿ, ಕಾವೇರಿ, ಕೃಷ್ಣಾ, ಮಹಾನದಿ ನದಿ ಜೋಡಣೆ ಬಗ್ಗೆ ರಾಜ್ಯದ ಅಹವಾಲನ್ನು ಕೇಳಿಯೇ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಬೇಕು. ಅದೇ ರೀತಿಯಾಗಿ, ನಮ್ಮ ರಾಜ್ಯದ ಮೇಕೆದಾಟು ಯೋಜನೆ ಕುರಿತ ಪ್ರಸ್ತಾವನೆ ಕುರಿತು ತೀರ್ಮಾನ ಕೈಗೊಂಡ ನಂತರವೇ ತಮಿಳುನಾಡಿನ ಕಾವೇರಿ-ಗುಂಡಾರ್ ಲಿಂಕ್ ಯೋಜನೆ ಬಗ್ಗೆ ನಿರ್ಧರಿಸಬೇಕು. ಇಲ್ಲವಾದಲ್ಲಿ, ನಾವು ನಮ್ಮ ವಿರೋಧವನ್ನು ಪ್ರಕಟಿಸಲಿದ್ದೇವೆ ಎಂದು ಸಿಎಂ ಬೊಮ್ಮಾಯಿ ಜಲಶಕ್ತಿ ಸಚಿವರಿಗೆ ತಿಳಿಸಿದ್ದಾರೆ.
ಕಾಲುಬಾಯಿ ರೋಗ ಪರಿಹಾರಕ್ಕೆ ಕ್ರಮ:ಕರಾವಳಿ ಹಾಗೂ ಮಲೆನಾಡಿನಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಹೆಚ್ಚಾಗಿದ್ದು, ಲಸಿಕೆ ನೀಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ನಡ್ಡಾ ಭೇಟಿ:ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಸಂಸತ್ತಿನಲ್ಲಿ ಭೇಟಿ ಮಾಡಿದ ಸಿಎಂ ಜನ್ಮದಿನದ ಶುಭ ಕೋರಿದರು.
ಆರೋಗ್ಯ ಸಚಿವರ ಭೇಟಿ:ಕೋವಿಡ್ ನಿರ್ವಹಣೆ ಹಾಗೂ ಕರೊನಾದ ಹೊಸ ತಳಿ ಒಮಿಕ್ರಾನ್ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯ ಜತೆಯೂ ಸಿಎಂ ರ್ಚಚಿಸಿದರು. ರಾಜ್ಯದಲ್ಲಿ ಕೋವಿಡ್ ನಿರ್ವಹಣೆ, ಲಸಿಕೆ ಅಭಿಯಾನದ ಯಶಸ್ಸಿನ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಸಿಎಂ ತಿಳಿಸಿದ್ದಾರೆ. ರಾಜ್ಯದಲ್ಲಿ ಲಸಿಕೆ ದಾಸ್ತಾನು ಸಾಕಷ್ಟಿದ್ದು, ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಕೇಂದ್ರ ಸರ್ಕಾರವು ತಜ್ಞರೊಂದಿಗೆ ರ್ಚಚಿಸಿ ತೀರ್ವನಿಸಲಿದೆ.
ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಹೈಕಮಾಂಡ್, ಯಡಿಯೂರಪ್ಪ, ಜೆಡಿಎಸ್​ನ ಕುಮಾರಸ್ವಾಮಿ ತೀರ್ಮಾನ ಮಾಡಲಿದ್ದಾರೆ
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಹೆಚ್ಚುವರಿ ಡಿಎಪಿಗೆ ಬೇಡಿಕೆ:ರಾಜ್ಯಕ್ಕೆ ಹೆಚ್ಚುವರಿ ಡಿಎಪಿ ಗೊಬ್ಬರ ಬೇಕೆಂದು ಕೇಂದ್ರ ರಸಗೊಬ್ಬರ ಸಚಿವರೂ ಆಗಿರುವ ಮಾಂಡವೀಯ ಅವರಿಗೆ ಬೇಡಿಕೆ ಸಲ್ಲಿಸಲಾಗಿದೆ. ಅಕೊ್ಟೕಬರ್, ನವೆಂಬರ್​ನಲ್ಲಿ 48 ಸಾವಿರ ಮೆಟ್ರಿಕ್ ಟನ್ ಡಿಎಪಿಯನ್ನು ಸಂಪೂರ್ಣವಾಗಿ ಪೂರೈ ಸುವ ಭರವಸೆಯೂ ಕೇಂದ್ರದಿಂದ ಸಿಕ್ಕಿದೆ.
ಭದ್ರಾ ಯೋಜನೆ ಹಿಂದೆಮುಂದೆ:ಈ ಯೋಜನೆಯಡಿ 29.90 ಟಿಎಂಸಿ ನೀರನ್ನು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ 5,57,000 ಎಕರೆ ಭೂ ಪ್ರದೇಶಕ್ಕೆ ಹರಿಸುವುದು, 367 ಸಣ್ಣ ನೀರಾವರಿ ಕೆರೆ ತುಂಬಿಸುವ ಗುರಿ ಹೊಂದಲಾಗಿದೆ. ಕೇಂದ್ರ ಸಂಪುಟದಲ್ಲಿ ಒಪ್ಪಿಗೆ ಸಿಕ್ಕರೆ ಶೇ.60 ಮೊತ್ತ ಕೇಂದ್ರದಿಂದ ಸಿಗಲಿದೆ.
ಭಾರತಕ್ಕೆ ಮೊದಲ ಒಮಿಕ್ರಾನ್​ ತಂದಿಟ್ಟವ ಈಗ ದೇಶದಲ್ಲೇ ಇಲ್ಲ, ಅಸಲಿಗೆ ಆತ ಭಾರತೀಯನೇ ಅಲ್ಲ?: ಬೆಂಗ್ಳೂರಿಗೆ ಸುಮ್ನೆ ಕಳಂಕ!

ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ವೈದ್ಯರ ಸಮ್ಮೇಳನದಲ್ಲೇ ಹರಡಿತು ಒಮಿಕ್ರಾನ್!: ಎಲ್ಲವೂ ಗುಟ್ಟುಗುಟ್ಟು.. ಮಾಡಲಾಯಿತೇ ನಿರ್ಲಕ್ಷ್ಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
